ಕನ್ನಡ ಸಿನಿಮಾದ ಹಾಡಿಗೆ ಧ್ವನಿಯಾಗಿದ್ದಾರೆ ಅಮಿತಾಭ್ ಬಚ್ಚನ್

Recommended Video

ರಮೇಶ್ ಮಾತಿಗೆ ಇಲ್ಲ ಅನ್ನಲಿಲ್ಲ 'ಬಿಗ್ ಬಿ' | FILMIBEAT KANNADA

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕನ್ನಡ ಸಿನಿಮಾ ಹಾಡನ್ನು ಹಾಡುವ ಮೂಲಕ ಕನ್ನಡಾಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. 76ರ ವಯಸ್ಸಿನಲ್ಲೂ ಕೈ ತುಂಬ ಸಿನಿಮಾಗಳನ್ನಿಟ್ಟು ಕೊಂಡಿರುವ ಆಂಗ್ರಿ ಯಂಗ್ ಮ್ಯಾನ್ ಕನ್ನಡ ಚಿತ್ರಕ್ಕೆ ದ್ವನಿಯಾಗಿದ್ದು ನಿಜಕ್ಕೂ ಹೆಮ್ಮೆಯ ವಿಚಾರ.

ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೃತಧಾರೆ' ಚಿತ್ರದ ಒಂದು ದೃಶ್ಯದ ಮೂಲಕ ಅಮಿತಾಬ್ ಕನ್ನಡಕ್ಕೆ ಬಂದಿದ್ದರು. ಮೋಹಕ ತಾರೆ ರಮ್ಯಾ ಮತ್ತು ನಾಯಕ ಧ್ಯಾನ್ ಜೊತೆ ಅಮಿತಾಭ್ ವಿಶೇಷ ಪಾತ್ರ ಮಾಡಿದ್ದರು. ಹೀಗಿರುವಾಗ ಸುಮಾರು 14 ವರ್ಷದ ನಂತರ ಮತ್ತೆ ಬಾಲಿವುಡ್ ಶೆಹೆನ್ ಷಾ ಕನ್ನಡ ಚಿತ್ರರಂಗಕ್ಕೆ ವಾಪಸ್ ಬಂದಿದ್ದಾರೆ. ಅದೂ ಕೂಡ ಗಾಯಕನಾಗಿ.

ಆಂಗ್ರಿ ಯಂಗ್ ಮ್ಯಾನ್ ಕಂಠಸಿರಿಯಲ್ಲಿ ಮೂಡಿಬಂದ ಕನ್ನಡ ಹಾಡು ಮತ್ಯಾವದು ಅಲ್ಲ, 'ಬಟರ್ ಫ್ಲೈ' ಸಿನಿಮಾದಾಗಿದೆ. ಹೌದು, ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಸಿನಿಮಾದ ಹಾಡಿಗೆ ಅಮಿತಾಭ್ ಬಚ್ಚನ್ ಧ್ವನಿಯಾಗಿದ್ದಾರೆ. ಪಾರುಲ್ ಯಾದವ್ ನಾಯಕಿಯಾಗಿ ಅಭಿನಯಿಸಿರುವ ಸಿನಿಮಾ ಇದಾಗಿದೆ.

ಚಿತ್ರದ ಪ್ರಮುಖ ಹಾಡನ್ನು ಅಮಿತಾಭ್ ಬಳಿ ಹಾಡಿಸಿದೆ ಚಿತ್ರತಂಡ. ಚಿತ್ರದಲ್ಲಿ ಬರುವ ಒಂದು ಕ್ಲಬ್ ಸಾಂಗ್ ಇದಾಗಿದೆ. ಈ ಕ್ಲಬ್ ಹಾಡಿನ ವಿಶೇಷತೆ ಅಂದರೆ ಈ ಹಾಡಿನಲ್ಲಿ ಕನ್ನಡ ಮತ್ತು ಇಂಗ್ಲೀಷ್ ಎರಡರ ಮಿಶ್ರಣವಿದೆ. ಈ ಹಾಡಿಗೆ ಕನ್ನಡದ ಖ್ಯಾತ ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಿಯಣ್ಯ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ರಿಮಿಕ್ಸ್ ಮಾಡಿ ಅಮಿತಾಭ್ ಬಳಿ ಹಾಡಿಸಲಾಗಿದೆ. ಇನ್ನೂ ಅಮಿತಾಭ್ ಗೆ ಗಾಯಕಿ ವಿದ್ಯಾ ವೋಕ್ಸ್ ಸಾಥ್ ನೀಡಿದ್ದಾರೆ.

bollywood actor amitabh bachchan singing a song for kannada movie butterfly

ಚಿತ್ರದ ಬಹುನಿರೀಕ್ಷೆಯ ಹಾಡನ್ನು ಸಂಪೂರ್ಣವಾಗಿ ಪ್ಯಾರೀಸ್ ನಲ್ಲಿಯೇ ಚಿತ್ರೀಕರಿಸಲಾಗಿದೆ. ಸುಮಾರು ನಾಲ್ಕು ದಿನಗಳ ಕಾಲ ಪ್ಯಾರೀಸ್ ನ ಕ್ಲಬ್ ಒಂದನ್ನು ಬುಕ್ ಮಾಡಿಕೊಂಡು ಅಲ್ಲಿಯೇ ಈ ಹಾಡಿನ್ನು ಸೆರೆ ಹಿಡಿಯಲಾಗಿದೆ. ಈ ಹಾಡಿಗೆ ಗಣೇಶ್ ಆಚಾರ್ಯ ನೃತ್ಯ ಸಂಯೋಜನೆ ಮಾಡಿದ್ದಾರೆ.

'ಬಟರ್ ಫ್ಲೈ' ನಾಲ್ಕು ಭಾಷೆಯಲ್ಲಿ ಏಕಕಾಲಕ್ಕೆ ತಯಾರಾದ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ಎದುರು ನೋಡುತ್ತಿರುವ ಚಿತ್ರ ಇದೇ ತಿಂಗಳು ಕೊನೆಯಲ್ಲಿ ಅಥವಾ ಮುಂದಿನ ತಿಂಗಳು ಏಪ್ರಿಲ್ ಮೊದಲ ವಾರದಲ್ಲಿ ತೆರೆಗೆ ಬರುವ ಸಾದ್ಯತೆ ಇದೆ.

More from Filmibeat

English summary
Bollywood actor Amitabh Bachchan singing a song for kannada movie 'Butterfly'. The movie is a remake of hindi movie 'Queeen'.The 'Butterfly' is directing by Ramesh Aravind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X