ಶಿವರಾಜ್‌ಕುಮಾರ್ ನಟನೆಯ ಘೋಸ್ಟ್ ಚಿತ್ರದಲ್ಲಿ ಬಾಲಿವುಡ್‌ನ ಅನುಪಮ್ ಖೇರ್ ನಟನೆ

Bollywood actor Anupam Kher to play a major role in Shiva Rajkumars Ghost

ಕಳೆದ ವರ್ಷದ ಅಂತ್ಯದಲ್ಲಿ ಬಿಡುಗಡೆಗೊಂಡ ವೇದ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡು ಇಂದಿಗೂ ಸಹ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ. ಮುಖ್ಯ ಚಿತ್ರಮಂದಿರಲ್ಲಿಯೂ 25 ದಿನಗಳ ಯಶಸ್ವಿ ಪ್ರದರ್ಶನವನ್ನು ಚಿತ್ರ ಪೂರೈಸಿದ್ದು ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಚಿತ್ರದ ಯಶಸ್ಸಿನಲ್ಲಿರುವ ಶಿವ ರಾಜ್‌ಕುಮಾರ್ ಈಗ ಮುಂದಿನ ಚಿತ್ರ ಘೋಸ್ಟ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಬೀರ್‌ಬಲ್ ಹಾಗೂ ಓಲ್ಡ್ ಮಾಂಕ್ ರೀತಿಯ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಶ್ರೀನಿ ಘೋಸ್ಟ್‌ಗೆ ಆಕ್ಷನ್ ಕಟ್ ಹೇಳಿದ್ದು, ಚಿತ್ರ ಘೋಷಣೆಯಾದಾಗಲೇ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಇನ್ನು ಈ ಚಿತ್ರದ ಸ್ಟಾರ್ ಕಾಸ್ಟ್ ಸಹ ಸದ್ದು ಮಾಡುತ್ತಿದ್ದು, ಇದೀಗ ಬಾಲಿವುಡ್‌ನ ಖ್ಯಾತ ನಟ ಅನುಪಮ್ ಖೇರ್ ಸಹ ಚಿತ್ರತಂಡವನ್ನು ಸೇರ್ಪಡೆಗೊಂಡಿದ್ದಾರೆ.

ಈ ಮೂಲಕ ನಟ ಅನುಪಮ್ ಖೇರ್ 2012ರಲ್ಲಿ ತೆರೆಕಂಡಿದ್ದ ದಿಗಂತ್ ನಟನೆಯ ಪಾರಿಜಾತ ಚಿತ್ರದ ನಂತರ ಎರಡನೇ ಬಾರಿಗೆ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಇನ್ನು ಘೋಸ್ಟ್ ಚಿತ್ರತಂಡ ಈ ಹಿಂದೆ ಘೋಸ್ಟ್ ಥೀಮ್ ಮ್ಯೂಸಿಕ್ ಬಿಡುಗಡೆ ಮಾಡುವ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅರ್ಜುನ್ ಜನ್ಯಾ ಕಂಪೋಸ್ ಮಾಡಿದ್ದ ಈ ಬಿಜಿಎಂ ಸಿನಿ ರಸಿಕರಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು.

ಅಷ್ಟೇ ಅಲ್ಲದೇ ಈ ಬಿಜಿಎಂಗೆ ರೀಲ್ಸ್ ಮಾಡುವ ಕಂಟೆಸ್ಟ್ ಅನ್ನು ಏರ್ಪಡಿಸಿದ್ದ ಚಿತ್ರತಂಡ ಅತ್ಯುತ್ತಮವಾಗಿ ರೀಲ್ಸ್ ಮಾಡುವ ಒಬ್ಬರಿಗೆ 25000 ಬಹುಮಾನ ಧನ ನೀಡುವುದಾಗಿ ಘೋಷಿಸಿತ್ತು ಹಾಗೂ ಶಿವ ರಾಜ್‌ಕುಮಾರ್ ಜತೆ ರೀಲ್ಸ್ ಮಾಡುವ ಅವಕಾಶ ಸಿಗಲಿದೆ ಎಂದೂ ಸಹ ಪೋಸ್ಟ್ ಹಂಚಿಕೊಂಡಿತ್ತು. ಈ ಕಂಟೆಸ್ಟ್‌ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದ್ದು, ಹಲವಾರು ರೀಲ್ಸ್ ಪ್ರಿಯರು ಕುಟುಂಬ ಸಮೇತರಾಗಿ ಭಿನ್ನ ವಿಭಿನ್ನರಾಗಿ ರೀಲ್ಸ್ ಮಾಡಿ ಸ್ಪರ್ಧಿಸುತ್ತಿದ್ದಾರೆ.

More from Filmibeat

English summary
Bollywood actor Anupam Kher to play a major role in Shiva Rajkumar's Ghost
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X