ಅಂಬರೀಶ್ ಮನೆಗೆ ಭೇಟಿ ನೀಡಿದ ಬಾಲಿವುಡ್ ನಟ
Recommended Video

ದಿವಂಗತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ನಿವಾಸಕ್ಕೆ ಬಾಲಿವುಡ್ ನಟ ಅರ್ಬಾಜ್ ಖಾನ್ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಪ್ರೆಸ್ಟಿಂಗ್ ಅಪಾರ್ಟ್ ಮೆಂಟ್ ನಲ್ಲಿರುವ ಅಂಬರೀಶ್ ನಿವಾಸಕ್ಕೆ ಅರ್ಬಾಜ್ ಖಾನ್ ನಿನ್ನೆ ರಾತ್ರಿ ಭೇಟಿ ನೀಡಿ, ಸುಮಲತಾ ಮತ್ತು ಅಭಿಷೇಕ್ ಅವರೊಂದಿಗೆ ಮಾತನಾಡಿದ್ದಾರೆ.
'ದುರಾದೃಷ್ಟವಶಾತ್ ಅಂಬರೀಶ್ ಅವರನ್ನ ಕಳೆದುಕೊಂಡೆವು. ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ. ಹಾಗಾಗಿ, ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಿದ್ದೇನೆ' ಎಂದು ಅರ್ಬಾಜ್ ಖಾನ್ ಮಾಧ್ಯಮಗಳ ಜೊತೆ ಮಾತನಾಡಿದರು.

'ಅಂಬರೀಶ್ ಅವರು ಸಿನಿಮಾ ನಟನಾಗಿ, ಎಂಎಲ್ಎ, ಕೇಂದ್ರ ಸಚಿವನಾಗಿ, ರಾಜಕಾರಣಿಯಾಗಿ ಜನರಿಗೆ ಹಲವರು ರೀತಿ ಸಹಾಯ ಮಾಡಿದ್ದಾರೆ. ಅನೇಕರಿಗೆ ಅಂಬರೀಶ್ ಅವರು ಸ್ಫೂರ್ತಿಯಾಗಿದ್ದರು. ನಾನು ಅವರ ಕುಟುಂಬಕ್ಕೆ ಅಷ್ಟಾಗಿ ಆಪ್ತ ವ್ಯಕ್ತಿಯಲ್ಲ. ಆದ್ರೂ, ಅವರ ಮೇಲಿನ ಗೌರವದಿಂದ ನಾನು ಬಂದಿದ್ದೇನೆ'' ಎಂದು ಅರ್ಬಾಜ್ ಖಾನ್ ತಿಳಿಸಿದರು.
ಅರ್ಬಾಜ್ ಖಾನ್, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸಹೋದರ. ಕನ್ನಡ ಚಿತ್ರರಂಗದಲ್ಲಿ ಹಲವು ನಟರೊಂದಿಗೆ ಸ್ನೇಹ ಸಂಬಂಧ ಹೊಂದಿರುವ ಅರ್ಬಾಜ್ ಖಾನ್, ಸುದೀಪ್ ಅವರ ಜೊತೆ ಹೆಚ್ಚು ಒಡನಾಟವಿದೆ.


Click it and Unblock the Notifications











