ರಿಷಬ್ ಶೆಟ್ಟಿ 'ರುದ್ರ ಪ್ರಯಾಗ'ದಲ್ಲಿ ಬಾಲಿವುಡ್ ನಟ

Recommended Video

Rudraprayag : ರಿಷಬ್ ನಿರ್ದೇಶನದ ಮುಂದಿನ ಚಿತ್ರಕ್ಕೆ ಇವರೇ ನಾಯಕ ನಾಯಕಿ | FLMIBEAT KANNADA

ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ರುದ್ರ ಪ್ರಯಾಗ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕುತ್ತಿದೆ. ಕಲಾವಿದರ ಆಯ್ಕೆ ವಿಚಾರದಲ್ಲಿ ಕುತೂಹಲ ಹೆಚ್ಚಿಸುತ್ತಿದೆ 'ರುದ್ರ ಪ್ರಯಾಗ'.

ಮೊನ್ನೆ ಮೊನ್ನೆಯಷ್ಟೆ ಹಿರಿಯ ನಟ ಅನಂತ್ ನಾಗ್ ರಿಷಬ್ ಜೊತೆಯಾಗಿದ್ದಾರೆ. ಇದರ ಬೆನ್ನಲ್ಲೆ ಈಗ ಮತ್ತಿಬ್ಬರು ಕಲಾವಿದರ ಹೆಸರು ಕೇಳಿ ಬರುತ್ತಿದೆ. ಹೌದು ಚಿತ್ರಕ್ಕೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಬ್ಯುಸಿ ಇರುವ ಶ್ರದ್ಧಾ ರುದ್ರ ಪ್ರಯಾಗದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಕಡೆ ಬರುತ್ತಿದ್ದಾರೆ.

ಇದರ ಜೊತೆಗೀಗ ಮತ್ತೋರ್ವ ನಟನ ಹೆಸರು ಕೇಳಿಬರುತ್ತಿದೆ. ಬಾಲಿವುಡ್ ನ ಖ್ಯಾತ ನಟ ರುದ್ರ ಪ್ರಯಾಗ ಸೇರಿಕೊಳ್ಳುವ ಸಾಧ್ಯತೆ ಇದೆ. ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ನಟ ಗುಲ್ ಶನ್ ದೇವಯ್ಯ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೆ ರಿಷಬ್, ಗುಲ್ ಶನ್ ಜೊತೆ ಮಾತುಕತೆ ನಡೆಸಿದ್ದಾರಂತೆ.

Bollywood Actor Gulshan Devaiah In Rishab Shetty Directorial Rudraprayaga

ರಿಷಬ್ ಹೇಳಿದ 'ರುದ್ರ ಪ್ರಯಾಗ' ಕಥೆ ಕೇಳಿ ಗುಲ್ ಶನ್ ಸಖತ್ ಇಂಪ್ರೆಸ್ ಆಗಿದ್ದಾರಂತೆ. ಡೇಟ್ ಹೊಂದಾಣಿಕೆಯಾಗಿ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ರೆ, ಗುಲ್ ಶನ್ ಮೊದಲ ಬಾರಿಗೆ ಕನ್ನಡ ಚಿತ್ರ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಕಲಾವಿದರ ಆಯ್ಕೆ ನೋಡುತ್ತಿದ್ರೆ ರುದ್ರ ಪ್ರಯಾಗದ ಮೇಲಿನ ಪ್ರೇಕ್ಷಕರ ನಿರೀಕ್ಷೆಯ ಮಟ್ಟ ಮತ್ತಷ್ಟು ಹೆಚ್ಚಾಗುತ್ತಿದೆ.

More from Filmibeat

English summary
Bollywood actor Gulshan Devaiah in Rishab Shetty directorial Rudraprayag. Shraddha Srinath is Playing leading lady in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X