For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಹಾಡಿನ ಚಿತ್ರೀಕರಣದಲ್ಲಿ ಜಾಕ್ವೆಲಿನ್; ಮೇಕಿಂಗ್ ನೋಡಿ ಬೆರಗಾದ ನಟಿ?

  |

  ಬಾಲಿವುಡ್ ನಟಿ, ಶ್ರೀಲಂಕಾ ಸುಂದರಿ ಜಾಕ್ವೆಲಿನ್ ಫರ್ನಾಂಡೀಸ್ ಬೆಂಗಳೂರಿನಲ್ಲಿದ್ದಾರೆ. ಜಾಕ್ವೆಲಿನ್ ಅನ್ನು ನಿರ್ಮಾಪಕ, ಸುದೀಪ್ ಆಪ್ತ ಜಾಕ್ ಮಂಜು ಆತ್ಮೀಯವಾಗಿ ಬೆಂಗಳೂರಿಗೆ ಸ್ವಾಗತಿಸಿದ್ದಾರೆ. ಅಂದಹಾಗೆ ಬಾಲಿವುಡ್ ಸುಂದರಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವುದು ಸುದೀಪ್ ನಟನೆಯ 'ವಿಕ್ರಾಂತ ರೋಣ' ಸಿನಿಮಾದ ವಿಶೇಷ ಹಾಡಿನ ಚಿತ್ರೀಕರಣಕ್ಕಾಗಿ.

  ವಿಕ್ರಾಂತ್ ರೋಣ ಒಂದು ಹಾಡಿನ ಬಜೆಟ್ ಕೇಳಿದ್ರೆ ಶಾಕ್ ಆಗ್ತೀರಾ | filmibeat kannada

  ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡಿನಲ್ಲಿ ಜಾಕ್ವೆಲಿನ್ ಹೆಜ್ಜೆ ಹಾಕುತ್ತಿದ್ದಾರೆ. ಮೊದಲ ಬಾರಿಗೆ ಶ್ರೀಲಂಕಾದ ಸುಂದರಿ ಜಾಕ್ವೆಲಿನ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ನಿರೀಕ್ಷೆ ದುಪ್ಪಟ್ಟು ಮಾಡಿದ್ದ 'ವಿಕ್ರಾಂತ್ ರೋಣ' ಜಾಕ್ವೆಲಿನ್ ಎಂಟ್ರಿಯಿಂದ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

  ಅಂದಹಾಗೆ ಜಾಕ್ವೆಲಿನ್ ಬೆಂಗಳೂರಿಗೆ ಎಂಟ್ರಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರತಂಡ ಅದ್ದೂರಿಯಾಗಿ ಸ್ವಾಗತ ಮಾಡಿ, ವಿಕ್ರಾಂತ್ ರೋಣ ಚಿತ್ರದ ಮೇಕಿಂಗ್ ಅನ್ನು ತೋರಿಸಿದ್ದಾರೆ. ಮೇಕಿಂಗ್ ನೋಡಿ ಜಾಕ್ವೆಲಿನ್ ಬೆರಗಾಗಿದ್ದಾರೆ.

  ಚಿತ್ರದ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದಾರೆ. ನಿರ್ದೇಶಕ ಅನೂಪ್ ಭಂಡಾರಿ ಜೊತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರದ ಮೇಕಿಂಗ್ ನೋಡಿ ಬಳಿಕ ಹಾಡಿನ ರಿಹರ್ಸಲ್ ಶುರುಮಾಡಿದ್ದಾರೆ.

  ಕಿಚ್ಚನ ಜೊತೆ ಮೊದಲ ಬಾರಿಗೆ ಹೆಜ್ಜೆಹಾಕುತ್ತಿರುವ ಜಾಕ್ವೆಲಿನ್ ನೋಡಲು ಕನ್ನಡ ಅಭಿಮಾನಿಗಳು ಕಾತರರಾಗಿದ್ದಾರೆ. ಜಾಕ್ ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ವಿಕ್ರಾಂತ್ ರೋಣನ ಈ ಒಂದು ಹಾಡಿಗಾಗಿ ಕೋಟಿ ಕೋಟಿ ಖರ್ಚು ಮಾಡಲಾಗುತ್ತಿದೆ. ಮೂಲಗಳ ಪ್ರಕಾರ ಈ ಒಂದು ಹಾಡಿಗಾಗಿ 3 ಕೋಟಿ ರೂ. ಸುರಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಒಂದು ಕೋಟಿ ರೂ. ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಂಭಾವನೆ ಎನ್ನಲಾಗುತ್ತಿದೆ.

  Bollywood Actor Jacqueline Fernandez joins Sudeep starrer Vikrant Rona shooting set

  ಅದ್ದೂರಿಯಾಗಿ ಮೂಡಿಬರುತ್ತಿರುವ ಈ ಹಾಡನ್ನು ತೆರೆಮೇಲೆ ಕಣ್ತುಂಬಿಕೊಳ್ಳಲು ಕನ್ನಡಾಭಿಮಾನಿಗಳು ಕಾತರರಾಗಿದ್ದಾರೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಈ ಹಾಡು ಮೂಡಿಬರುತ್ತಿದೆ. ಈಗಾಗಲೇ ಟಾಕಿ ಭಾಗ ಮತ್ತು ಡಬ್ಬಿಂಗ್ ಮುಗಿಸಿರುವ ವಿಕ್ರಾಂತ್ ರೋಣ ಹಾಡಿನ ಚಿತ್ರೀಕರಣದ ಮೂಲಕ ಚಿತ್ರೀಕರಣ ಸಂಪೂರ್ಣವಾಗಲಿದೆ.

  ಅಂದುಕೊಂಡಂತೆ ಆಗಿದ್ದರೆ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಚಿತ್ರೀಕರಣ ತವಾಗಿದ್ದು, ಬಿಡುಗಡೆ ಕೂಡ ತಡವಾಗಿದೆ. ಸದ್ಯ ಹಾಡಿನ ಚಿತ್ರೀಕರಣ ಮುಗಿಸುತ್ತಿರುವ ವಿಕ್ರಾಂತ್ ರೋಣ ಯಾವಾಗ ತೆರೆಗೆ ಬರಲಿದೆ ಎಂದು ಕಾದುನೋಡಬೇಕು.

  English summary
  Bollywood Actor Jacqueline Fernandez joins Sudeep starrer Vikrant Rona shooting set, Video viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X