ಕನ್ನಡದಲ್ಲೇ ಡಬ್ ಮಾಡಿ ಸೈ ಎನಿಸಿಕೊಂಡ ಬಾಲಿವುಡ್ ನಟ ಕಬೀರ್ ಬೇಡಿ: 'ಕೊರಗಜ್ಜ' ರಿಲೀಸ್ ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್ ಹಾಗೂ ಹಾಲಿವುಡ್ ಸಿನಿಮಾಗಳಲ್ಲಿ ಮಿಂಚಿರೋ ಹಿರಿಯ ನಟ ಕಬೀರ್ ಬೇಡಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದು ಗೊತ್ತೇ ಇದೆ. ಸುಧೀರ್ ಅತ್ತಾವರ್ ನಿರ್ದೇಶಿಸಿದ 'ಕೊರಗಜ್ಜ' ಸಿನಿಮಾದಲ್ಲಿ ಕಬೀರ್ ಬೇಡಿ ನಟಿಸಿದ್ದಾರೆ.

'ಕೊರಗಜ್ಜ' ಸಿನಿಮಾದಲ್ಲಿ ಕಬೀರ್ ಬೇಡಿ 'ಉದ್ಯಾವರ ಅರಸರ' ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರ ಕಬೀರ್ ಬೇಡಿಗೆ ಥ್ರಿಲ್ ಕೊಟ್ಟಿದ್ದು, ನಿರ್ದೇಶಕ ಕಲ್ಪನೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಮಾಡುವಾಗಲೇ ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡುತ್ತೇವೆ ಎಂದಿದ್ದರಂತೆ. ಅದಂತೆ ಡಬ್ಬಿಂಗ್ ಮಾಡಿದ್ದಾರೆ.

'ಕೊರಗಜ್ಜ' ಸಿನಿಮಾ ಕಬೀರ್ ಬೇಡಿಗೆ ಮೊದಲ ಕನ್ನಡ ಸಿನಿಮಾ. ಕನ್ನಡದ ಮೊದಲ ಸಿನಿಮಾದಲ್ಲೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ.ಬಾಲಿವುಡ್, ಹಾಲಿವುಡ್, ಯುರೋಪಿಯನ್ ಸಿನಿಮಾಗಳಲ್ಲಿ ಹೆಚ್ಚಾಗಿ ಕೆಲಸ ಮಾಡಿರುವ ನಟ ದಕ್ಷಿಣ ಭಾರತದ ಕನ್ನಡ-ತುಳು-ಮಲಯಾಳಂ ಭಾಷೆಗಳ ಸೊಗಡನ್ನು ಅರಿತು ಹೇಗೆ ಡಬ್ ಮಾಡುತ್ತಾರೆ ಎನ್ನುವ ಅರಿವಿತ್ತು.

Bollywood Actor Kabir Bedi Dubbed in Kannada for Koragajja movie

ಭಾಷೆಯ ಏರಿಳಿತ ಮತ್ತು ಭಾವನೆಗಳನ್ನು ಅಳವಡಿಸಿಕೊಂಡು ಸ್ವಾಭಾವಿಕ ಶೈಲಿಯಲ್ಲಿ ಡಬ್ ಮಾಡಬಹುದೇ ಎನ್ನುವ ಅನುಮಾನವಿತ್ತು. ಆದರೆ ಕಬೀರ್ ಬೇಡಿ ಈ ಸವಾಲನ್ನು ಅತ್ಯಂತ ಸಮರ್ಪಕವಾಗಿ ಎದುರಿಸಿದ್ದಾರೆ. ಮುಂಬೈನ ಪ್ರತಿಷ್ಟಿತ ಸ್ಟುಡಿಯೋ ಕನ್ನಡದಲ್ಲಿಯೇ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ.

'ಕಾಂತಾರ' ಬಳಿಕ ಕರಾವಳಿ ದೈವದ ಕಥೆಯಾಧಾರಿಸಿದ ಮತ್ತೊಂದು ಸಿನಿಮಾ 'ಕೊರಗಜ್ಜ' ರೆಡಿಯಾಗುತ್ತಿದೆ. ಹೀಗಾಗಿ 'ಕೊರಗಜ್ಜ'ನ ಸಿನಿಮಾ ನೋಡುವುದಕ್ಕೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ. ಈ ಸಿನಿಮಾದ ಮತ್ತೊಂದು ಹೈಲೈಟ್ ಇದೆ. ಅದು ಸಿನಿಪ್ರಿಯರ ಮೆಚ್ಚುಗೆ ಗಳಿಸುವುದರಲ್ಲಿ ಅನುಮಾನವೇ ಇಲ್ಲ.

Bollywood Actor Kabir Bedi Dubbed in Kannada for Koragajja movie

ಕೇರಳದ ಕಾಸರಗೋಡು ಜಿಲ್ಲೆಯ ಉದ್ಯಾವರದಲ್ಲಿನ ರಾಷ್ಟ್ರೀಯ ಹೆದ್ದಾರಿಯ ಬಲ ಬದಿಯಲ್ಲಿ ಉದ್ಯಾವರ ಅರಸರ ಸಾನಿಧ್ಯ ವಿರುವ ಬಹಳ ದೊಡ್ಡ ದೈವಸ್ಥಾನವಿದೆ. 'ಕೊರಗಜ್ಜ' ಸಿನಿಮಾದಲ್ಲಿ ಹಿರಿಯ ನಟಿ ಭವ್ಯಾ ಉದ್ಯಾವರ ಅರಸರನ್ನು ಎದುರು ಹಾಕಿಕೊಳ್ಳುವ 'ಪಂಜಂದಾಯಿ' ರಾಣಿಯ ಪಾತ್ರದಲ್ಲಿ ನಟಿಸಿದ್ದಾರೆ. ಈಗ ಆ ಪಾತ್ರ ದೈವವಾಗಿ ರೂಪುಗೊಂಡಿದೆ. ಈ ಎರಡು ಪಾತ್ರಗಳು ರಣರಂಗದಲ್ಲಿ ಸಂಧಿಸುವ ರೋಚಕ ಘಟನೆಯನ್ನು ಐದು ಕ್ಯಾಮರಾಗಳಲ್ಲಿ ಚಿತ್ರೀಕರಿಸಿದ್ದು, ಈ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು.

More from Filmibeat

English summary
Bollywood Actor Kabir Bedi Dubbed in Kannada for Koragajja movie, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X