ಸುದೀಪ್ 'ಪೈಲ್ವಾನ್' ಸಿನಿಮಾ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್

Recommended Video

Pailwaan movie : 'ಪೈಲ್ವಾನ್' ಸಿನಿಮಾ ವೀಕ್ಷಿಸುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್ | FILMIBEAT KANNADA

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ರಿಲೀಸ್ ಗೆ ಕೌಂಟ್ ಡೌನ್ ಶುರುವಾಗಿದೆ. ಕರ್ನಾಟಕ ಮಾತ್ರವಲ್ಲದೆ ದೇಶದಾದ್ಯಂತ ಗಮನ ಸೆಳೆಯುತ್ತಿರುವ ಪೈಲ್ವಾನ್ ಚಿತ್ರವನ್ನು ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ನೋಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

ಪೈಲ್ವಾನ್ ಚಿತ್ರವನ್ನು ತೋರಿಸುವಂತೆ ಸಲ್ಮಾನ್ ಖಾನ್ ಅವರೆ ಸುದೀಪ್ ಬಳಿ ಕೇಳಿಕೊಂಡಿದ್ದಾರಂತೆ. ಹಾಗಾಗಿ ಸಧ್ಯದಲ್ಲೇ ಚಿತ್ರವನ್ನು ಸಲ್ಮಾನ್ ಖಾನ್ ಗೆ ತೋರಿಸಲಿದೆ ಚಿತ್ರತಂಡ. ಪೈಲ್ವಾನ್ ರಿಲೀಸ್ ಆದ ನಂತರ ಮುಂಬೈನಲ್ಲಿ ವಿಶೇಷ ಶೋ ಏರ್ಪಡಿಸಿ ಸಲ್ಮಾನ್ ಗೆ ಪೈಲ್ವಾನ್ ತೋರಿಸುವ ಪ್ಲಾನ್ ಚಿತ್ರಕ್ಕಿದೆ.

ಈ ಹಿಂದೆ ಕೂಡ ಪೈಲ್ವಾನ್ ಟೀಸರ್ ರಿಲೀಸ್ ಆದಾಗ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. "ನಾವು ಪ್ರಾರಂಭಮಾಡಿದ್ದನ್ನು ನೀವು ಮತ್ತೊಂದು ಲೆವೆಲ್ ಗೆ ತೆಗೆದುಕೊಂಡು ಹೋಗಿದ್ದೀರಿ" ಎಂದು ಹೇಳಿದ್ದರು.
ಅಲ್ಲದೆ ಕಿಚ್ಚ ಸದ್ಯ ಸಲ್ಮಾನ್ ಖಾನ್ ಜೊತೆ ದಬಾಂಗ್-3 ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇಬ್ಬರ ನಡುವೆ ಒಂದು ಉತ್ತಮವಾದ ಬಾಂಧವ್ಯ ಇದೆ. ಇನ್ನು ಸಲ್ಮಾನ್ ಖಾನ್ ಸುಲ್ತಾನ್ ಚಿತ್ರದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಂಡಿದ್ದರು.

Bollywood Actor Salman Khan Expressed His Interest To Watch Pailwaan

ಸದ್ಯ ದಬಾಂಗ್-3 ವಿಲನ್ ಅಭಿನಯಿಸುವ ಪಲ್ವಾನ್ ಸಿನಿಮಾವನ್ನು ನೋಡುವ ಆಸೆಯನ್ನು ಹೊರಹಾಕಿರುವುದು ಚಿತ್ರತಂಡಕ್ಕೆ ಸಂತಸವುಂಟುಮಾಡಿದೆ. ಚಿತ್ರ ನಾಳೆಯೆ ತೆರೆಗೆ ಬರುತ್ತಿದೆ. ಹಾಗಾಗಿ ಸಲ್ಮಾನ್ ಯಾವಾಗ ಪೈಲ್ವಾನ್ ವೀಕ್ಷಿಸುತ್ತಾರೆ ಎನ್ನುವುದು ಅಭಿಮಾನಿಗಳ ಕುತೂಹಲ.

More from Filmibeat

English summary
Bollywood actor Salman khan expressed his interest to watch Pailwaan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X