ಕಿಚ್ಚನ ಮನೆಯಲ್ಲಿ ಸಲ್ಮಾನ್ ಪ್ರತ್ಯಕ್ಷ: ಸುದೀಪ್ ಫ್ಯಾಮಿಲಿ ಜೊತೆ ಸಲ್ಲು ಭಾಯ್ ಹರಟೆ
Recommended Video
ಒಬ್ಬರು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್.. ಇನ್ನೊಬ್ಬರು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ. ಇಬ್ಬರೂ ಒಂದಾಗಿರೋದು 'ದಬಾಂಗ್-3' ಚಿತ್ರದಲ್ಲಿ. 'ದಬಾಂಗ್-3' ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್ ಖದರ್ ತೋರಿಸಿದ್ರೆ, ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ.
ಸಲ್ಮಾನ್-ಸುದೀಪ್ ಕುಸ್ತಿ ಇರುವ 'ದಬಾಂಗ್-3' ಚಿತ್ರ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಕಲೆಕ್ಷನ್ ನಲ್ಲಂತೂ 'ದಬಾಂಗ್-3' ದಾಖಲೆ ಬರೆಯುತ್ತಿದೆ. ಹೀಗಿರಬೇಕಾದ್ರೆ, ಒಂದು ಇಂಟ್ರೆಸ್ಟಿಂಗ್ ಮಾಹಿತಿ ಲಭ್ಯವಾಗಿದೆ.
'ದಬಾಂಗ್-3' ಚಿತ್ರದ ಪ್ರಚಾರ ಸಲುವಾಗಿ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದು ನಿಮಗೆಲ್ಲ ಗೊತ್ತಿರಬಹುದು. ಶಾಪಿಂಗ್ ಮಾಲ್ ವೊಂದಕ್ಕೆ ಭೇಟಿ ಕೊಟ್ಟ 'ದಬಾಂಗ್-3' ಚಿತ್ರತಂಡ ಪತ್ರಿಕಾ ಮತ್ತು ಮಾಧ್ಯಮ ಮಿತ್ರರ ಜೊತೆಗೆ ಮಾತುಕತೆಯನ್ನ ನಡೆಸಿತ್ತು.
ಸಿನಿಮಾ ಪ್ರಮೋಷನ್ ಕೆಲಸ ಮುಗಿಯುತ್ತಿದ್ದ ಹಾಗೆ, ಸೀದಾ ಸುದೀಪ್ ನಿವಾಸದ ಕಡೆ ಸಲ್ಮಾನ್ ಖಾನ್ ಮುಖ ಮಾಡಿದರು.

ಹೌದು, ಬೆಂಗಳೂರಿನಿಂದ ಮುಂಬೈಗೆ ವಾಪಸ್ ಆಗುವ ಮುನ್ನ ಸುದೀಪ್ ಮನೆಗೆ ಸಲ್ಮಾನ್ ಖಾನ್ ವಿಸಿಟ್ ಹಾಕಿದರು. ''ಸುದೀಪ್ ನನ್ನ ಸಹೋದರ ಇದ್ದಂತೆ'' ಎಂದು ಹಲವು ಸಂದರ್ಶನಗಳಲ್ಲಿ ಸಲ್ಮಾನ್ ಖಾನ್ ಹೇಳಿದ್ದಾರೆ. ಅದರಂತೆ ಸುದೀಪ್ ಮೇಲೆ ಪ್ರೀತಿ, ವಿಶ್ವಾಸ ಹೊಂದಿರುವ ಸಲ್ಮಾನ್ ಖಾನ್, ಕಿಚ್ಚನ ಮನೆಗೆ ಹೋಗಿ ಇಡೀ ಫ್ಯಾಮಿಲಿ ಜೊತೆಗೆ ಕೆಲ ಕಾಲ ಹರಟಿದರು.
ತಮ್ಮ ನಿವಾಸಕ್ಕೆ ಸಲ್ಮಾನ್ ಖಾನ್ ಭೇಟಿ ಕೊಟ್ಟಿದ್ದು ಸುದೀಪ್ ತಂದೆ-ತಾಯಿ, ಸಹೋದರಿಯರಿಗೆ ಸಿಕ್ಕಾಪಟ್ಟೆ ಖುಷಿ ಆಗಿದೆ.


Click it and Unblock the Notifications











