ಭಾರತ ಮತ್ತು ಪಾಕಿಸ್ತಾನ ಪಂದ್ಯದ ವೇಳೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭೇಟಿಯಾದ ಸಲ್ಮಾನ್ ಖಾನ್

ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯ ನಡೆಯುತ್ತಿದ್ದು, ಈ ವೇಳೆ ಸಿನಿ ಪ್ರೇಮಿಗಳಿಗೆ ಮತ್ತೊಂದು ಅಚ್ಚರಿ ಸಿಕ್ಕಿದೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಪಂದ್ಯಕ್ಕೆ ಕರುನಾಡು ಕೂಡ ಸಾಕ್ಷಿಯಾಗುತ್ತಿದ್ದು, ನಟ ಶಿವರಾಜ್ ಕುಮಾರ್ ಈಗಾಗಲೇಪಂದಗಯದ ಜಾಗದಲ್ಲಿದ್ದಾರೆ. ಭಾರತವನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ನಟ ಸಲ್ಮಾನ್ ಖಾನ್ ಮತ್ತು ಶಿವರಾಜ್ ಕುಮಾರ್ ಒಟ್ಟಿಗೆ ಇರುವ ಫೋಟೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

salman-khan-meets-shiva-rajkumar

ಸಲ್ಮಾನ್ ಖಾನ್ ಮತ್ತು ಶಿವರಾಜ್ ಕುಮಾರ್ ಭೇಟಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಬಳಗದ ಜೊತೆಗೆ ಭಾರತ ಮತ್ತು ಪಾಕಿಸ್ತಾನದ ಮ್ಯಾಚ್ ನೋಡುತ್ತಿದ್ದಾರೆ. ಇದರ ಜೊತೆಗೆ ನಟ ಸಲ್ಮಾನ್ ಖಾನ್ ಕೂಡ ಪಂದ್ಯ ವೀಕ್ಷಿಸಲು ಬಮದಿದ್ದು, ಇಬ್ಬರು ನಟರು ಮುಖಾಮುಖಿಯಾಗಿದ್ದಾರೆ. ಈ ಚಿತ್ರಕ್ಕೆ ಹೆಚ್ಚು ಮೆಚ್ಚುಗೆ ಸಿಗುತ್ತಿದ್ದು, ಇಬ್ಬರನ್ನು ಒಂದು ಸಿನಿಮಾದಲ್ಲಿ ನೋಡುವ ಆಸೆಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

ಫೋಟೋಗಳನ್ನು ಹಂಚಿಕೊಂಡಿರುವ ನಟ ಶಿವರಾಜ್ ಕುಮಾರ್ 'ಘೋಸ್ಟ್​ನ ಟೈಗರ್ ಭೇಟಿ ಮಾಡಿದಾಗ...' ಎಂದಿದ್ದು, ನಿಮ್ಮನ್ನು ಭೇಟಿಯಾಗಿದ್ದು ಖುಷಿಯಾಯಿತು ಸಲ್ಮಾನ್ ಖಾನ್, ಟೈಗರ್ 3 ಚಿತ್ರಕ್ಕೆ ಆಲ್​ ದಿ ಬೆಸ್ಟ್' ಎಂದಿದ್ದಾರೆ. ಜೊತೆಗೆ ತಮ್ಮ ಘೋಸ್ಟ್ ಸಿನಿಮಾದ ರಿಲೀಸ್ ಡೇಟ್ ಹ್ಯಾಶ್‌ಟ್ಯಾಗ್‌ನಲ್ಲಿ ಹಾಕಿದ್ದಾರೆ.

'ನಮ್ಮ ಭಜರಂಗಿ ಜೊತೆ Bhai Jaan.!', ಬಾಲಿವುಡ್‌ನ ಗಾಡ್‌ಫಾದರ್ ಸ್ಯಾಂಡಲ್‌ವುಡ್‌ನ ಗಾಡ್‌ಫಾದರ್‌ರನ್ನು ಭೇಟಿಯಾಗಿದ್ದಾರೆ..., ಇಬ್ಬರು ಮೆಗಾಸ್ಟಾರ್‌ಗಳು ಒಟ್ಟಿಗೆ..." ಹೀಗೆ ಅನೇಕ ಕಾಮೆಂಟ್‌ಗಳು ಹರಿದು ಬರುತ್ತಿವೆ. ನಟ ಶಿವರಾಜ್ ಕುಮಾರ್ ಜೊತೆಗೆ ನಿರ್ದೇಶಕ ನಿರ್ದೇಶಕ ಶ್ರೀನಿವಾಸ್ (ಶ್ರೀನಿ) ಕೂಡ ಸಲ್ಮಾನ್ ಖಾನ್ ಜೊತೆಗೆ ಫೋಟೋಗೆ ಫೋಸ್ ನೀಡಿದ್ದಾರೆ.

salman-khan-meets-shiva-rajkumar

'ಘೋಸ್ಟ್' ಪ್ರಚಾರದಲ್ಲಿ ಶಿವಣ್ಣ

ನಟ ಶಿವರಾಜ್​ ಕುಮಾರ್ ಸದ್ಯ ತಮ್ಮ ಬಹುನಿರೀಕ್ಷಿತ ಸಿನಿಮಾ 'ಘೋಸ್ಟ್' ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಘೋಸ್ಟ್ ಅಕ್ಟೋಬರ್ 19 ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈಗಾಗಲೇ ಸಿನಿಮಾ ಪ್ರಚಾರದಲ್ಲಿ ಶಿವಣ್ಣ ಮತ್ತು ನಿರ್ದೇಶಕ ಶ್ರೀನಿವಾಸ್ (ಶ್ರೀನಿ) ಬ್ಯುಸಿಯಾಗಿದ್ದಾರೆ. ನಿನ್ನೆಯಷ್ಟೇ ನಟ ಕಮಲ್ ಹಾಸನ್ ಅವರನ್ನು ಶಿವರಾಜ್ ಕುಮಾರ್ ಭೇಟಿಯಾಗಿದ್ದರು.

ಘೋಸ್ಟ್ ಸಿನಿಮಾ

ಘೋಸ್ಟ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಜೊತೆಗೆ ಬಾಲಿವುಡ್ ನಟ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್, ಸತ್ಯ ಪ್ರಕಾಶ್, ಅರ್ಚನಾ ಜೋಯಿಸ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಘೋಸ್ಟ್ ಅಕ್ಟೋಬರ್ 19 ರಂದು ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
Actor Salman Khan Meets Shiva Rajkumar during the India vs. Pakistan match.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X