ಕೆಜಿಎಫ್-2 ಸೆಟ್ ಗೆ ಎಂಟ್ರಿ ಕೊಟ್ಟ ಮುನ್ನಾಭಾಯ್
Recommended Video
ಕನ್ನಡ ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಚಿತ್ರ ಕೆಜಿಎಫ್-2. ಈಗಾಗಲೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರೀಕರಣ ಸೆಟ್ ಗೆ ರಾಕಿ ಭಾಯ್ ಎಂಟ್ರಿ ಕೊಟ್ಟು ತಿಂಗಳಾಗಿದೆ. ಆದ್ರೀಗ ಚಿತ್ರೀಕರಣ ಸೆಟ್ ಗೆ ಮುನ್ನಾಭಾಯ್ ಎಂಟ್ರಿ ಕೊಟ್ಟಿದ್ದಾರೆ.
ಈ ಬಗ್ಗೆ ಸ್ವತಹ ಚಿತ್ರತಂಡ ಬಹಿರಂಗ ಪಡಿಸಿದೆ. ಹೌದು, ಇಂದು ಬೆಳಗ್ಗೆ ಕೆಜಿಎಪ್-2 ಚಿತ್ರತಂಡ ಚಿತ್ರದಿಂದ ಒಂದು ಅಪ್ ಡೇಟ್ ಇದೆ ಎಂದು ಹೇಳಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು. ಚಿತ್ರತಂಡ ಅನೌನ್ಸ್ ಮಾಡುತ್ತಿದ್ದಂತೆ ಏನಿರ ಬಹುದು ಎಂದು ಅಭಿಮಾನಿಗಳು ಹುಸಿರು ಬಿಗಿಹಿಡಿದು ಕಾಯುತ್ತಿದ್ದರು.
ಕೆಲವೆ ಕ್ಷಣದಲ್ಲಿ ಚಿತ್ರೀಕರಣ ಸೆಟ್ ಗೆ ಅಧೀರನ ಎಂಟ್ರಿಯಾಗಿರುವ ಬಗ್ಗೆ ಬಹಿರಂಗ ಪಡಿಸಿ ಅಭಿಮಾನಿಗಳ ಕುತೂಹಲಕ್ಕೆ ಬ್ರೇಕ್ ಹಾಕಿದೆ. ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿ ಗೌಡ ಜೊತೆ ನಟ ಸಂಜಯ್ ದತ್ ಕ್ಯಾಮರಾಗೆ ಪೋಸ್ ನೀಡಿರುವ ಫೋಟೋವನ್ನು ಅಪ್ ಲೋಡ್ ಮಾಡಿದ್ದಾರೆ. ಅಧೀರನ ಎಂಟ್ರಿಯಿಂದ ಕೆಜಿಎಫ್-2 ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ನಟ ಸಂಜಯ್ ದತ್ ಈ ಮೊದಲು ಹೇಳಿದ ಹಾಗೆ ಕೆಜಿಎಫ್-2 ಚಿತ್ರದ ಅಧೀರನ ಪಾತ್ರ ತೀರ ಭಯಾನಕವಾಗಿರಲಿದೆಯಂತೆ. ಬಾಲಿವುಡ್ ನ ಅಗ್ನಿಪಥ್ ಚಿತ್ರದ ಪಾತ್ರಕ್ಕಿಂತನು ಅಧೀರ ಭಯಾನಕ ಆಗಿರಲಿದ್ದಾರೆ ಎಂದು ಹೇಳಿದ್ದಾರು. ಖಳನಟನಾಗಿ ಮಿಂಚಲು ಕಾಯುತ್ತಿದ್ದ ಸಂಜಯ್ ದತ್ ಗೆ ಕೆಜಿಎಫ್-2 ಚಿತ್ರದ ಅಧೀರ ಪಾತ್ರ ತುಂಬ ಇಷ್ಟವಾಗಿ ಒಪ್ಪಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.


Click it and Unblock the Notifications











