'ಅಧೀರ' ತುಂಬ ಭಯಂಕರವಾದ ವ್ಯಕ್ತಿ: ಸಂಜಯ್ ದತ್
Recommended Video
"ಅಧೀರ ನೀವು ಅಂದುಕೊಂಡ ಹಾಗೆ ಭಯಂಕರವಾದ ವ್ಯಕ್ತಿ ಅಲ್ಲ, ತುಂಬ ಭಯಂಕರ ವ್ಯಕ್ತಿ" ಹೀಗಂತ ಸ್ವತಹ ಬಾಲಿವುಡ್ ನಟ ಸಂಜಯ್ ದತ್ ಹೇಳಿದ್ದಾರೆ.
ಹೌದು, ಸ್ಯಾಂಡಲ್ ವುಡ್ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಸಿನಿಮಾ ಕೆಜಿಎಫ್-2 ಚಿತ್ರದ ಪಾತ್ರದ ಬಗ್ಗೆ ಬಾಲಿವುಡ್ ನಟ ಸಂಜಯ್ ದತ್ ಮಾತನಾಡಿದ್ದಾರೆ.
ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ಭಾಗಕ್ಕಿಂತ ಎರಡನೆ ಭಾಗದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ನಿರೀಕ್ಷೆ ಮಟ್ಟ ಹೆಚ್ಚಾಗಲು ಮುಖ್ಯ ಕಾರಣ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್ ಎಂಟ್ರಿ. ಅಧೀರನ ಪಾತ್ರದಲ್ಲಿ ದತ್ ಬಣ್ಣಹಚ್ಚುತ್ತಿದ್ದಾರೆ. ಈ ಬಗ್ಗೆ ಸ್ವತಹ ಸಂಜಯ್ ದತ್ ಮಾತನಾಡಿದ್ದಾರೆ.

ಈ ರೀತಿಯ ಪಾತ್ರಕ್ಕಾಗಿ ಕಾಯುತ್ತಿದೆ
ಖಾಸಗಿ ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸಂಜಯ್ ದತ್ ಕೆಜಿಎಫ್-2 ಚಿತ್ರದ ಬಗ್ಗೆ ಮಾತನಾಡಿದ್ದಾರೆ. "ಅಗ್ನಿಪತ್ ಚಿತ್ರದ ನಂತರ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಉತ್ತಮ ವಿಲನ್ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಸಮಯದಲ್ಲಿ ಕೆಜಿಎಫ್-2 ಸಿಕ್ಕಿತ್ತು. ಇದು ಪಕ್ಕ ಆಕ್ಷನ್ ಸಿನಿಮಾ" ಎಂದು ಹೇಳಿದ್ದಾರೆ.

ಅಧೀರ ತುಂಬ ಭಯಂಕರ
"ಅಗ್ನಿಪತ್ ಚಿತ್ರದಲ್ಲಿನ ಪಾತ್ರಕ್ಕಿಂತನೂ ಅಧೀರನ ಪಾತ್ರ ಮತ್ತಷ್ಟು ಭಯಾನಕವಾಗಿರಲಿದೆ ಎನಿಸುತ್ತೆ. ನಾನು ಕನ್ನಡ ಕಲಿಯಬೇಕಾದ ಅಗತ್ಯತೆ ಇದಿಯೋ ನನಗೆ ಗೊತ್ತಿಲ್ಲ. ಮೇಕರ್ಸ್ ನಿರ್ಧರಿಸಿದರೆ ನಾನು ಖಂಡಿತವಾಗಿಯೂ ಡೈಲಾಗ್ ಡಿಲವರಿ ಮಾಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಅಗ್ನಿಪತ್ ನಲ್ಲಿ ಕಾಂಚ ಚೀನ
ಅಗ್ನಿಪತ್ ಚಿತ್ರದಲ್ಲಿ ಸಂಜಯ್ ದತ್ ಕಾಂಚ ಚೀನಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಾಂಚನ ಪಾತ್ರವೆ ಸಖತ್ ಭಯಾನಕವಾಗಿತ್ತು. ಆದ್ರೆ ಸಂಜಯ್ ದತ್ ಹೇಳುವ ಪ್ರಕಾರ ಅಧೀರ ಅದಕ್ಕಿಂತ ಭಯಾನಕವಾಗಿರಲಿದೆ ಎಂದರೆ ಹೇಗಿರಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಸಂಚಲನ ಮೂಡಿಸಿದೆ ಫಸ್ಟ್ ಲುಕ್
ಈಗಾಗಲೆ ಸಂಜಯ್ ದತ್ ಫಸ್ಟ್ ಲುಕ್ ರಿಲೀಸ್ ಆಗಿದ್ದು ಸಂಚಲನ ಸೃಷ್ಟಿ ಮಾಡಿದೆ. ಕೆಜಿಎಫ್-2 ಚಿತ್ರೀಕರಣ ಸದ್ಯ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಚಿತ್ರದಲ್ಲಿ ರಾಕಿ ಭಾಯ್ ಗರುಡನನ್ನು ಸಾಯಿಸಿದ ನಂತರ ಎರಡನೆ ಭಾಗದಲ್ಲಿ ಅಧೀರ ಎಂಟ್ರಿ ಕೊಡಲಿದ್ದಾರೆ.


Click it and Unblock the Notifications











