'ದೇವಕಿ'ಯನ್ನು ಕಾಡಿದ ಉಗ್ರ ಅಜ್ಮಲ್ ಕಸಬ್

ಸ್ಯಾಂಡಲ್ ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯದ 'ದೇವಕಿ' ಚಿತ್ರದ ಈಗಾಗಲೆ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈಗಾಗಲೆ ಭಾರಿ ಕುತೂಹಲ ಮೂಡಿಸಿರುವ 'ದೇವಕಿ' ಜೂನ್ ನಲ್ಲಿ ರಿಲೀಸ್ ಮಾಡಬೇಕೆಂದು ಪ್ಲಾನ್ ಮಾಡಿದೆ ಚಿತ್ರತಂಡ.

ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಮಗಳು ಐಶ್ವರ್ಯ ಅಭಿನಯಿಸಿದ್ದಾರೆ ಎನ್ನುವುದು ಚಿತ್ರಪ್ರಿಯರಿಗೆ ಗೊತ್ತಿರುವ ಮಾಹಿತಿ. ಇದು ಬಿಟ್ಟರೆ ಚಿತ್ರದಲ್ಲಿ ಬೇರೆಯಾರೆಲ್ಲ ಅಭಿನಯಿಸಿದ್ದಾರೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿರಲಿಲ್ಲ. ಆದ್ರೀಗ ಪೊಲೀಸ್ ಪಾತ್ರದಲ್ಲಿ ನಟ ಕಿಶೋರ್ ಮಿಂಚಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ.

ಇದರ ಬೆನ್ನಲ್ಲೆ ಬಾಲಿವುಡ್ ನಟ ಸಂಜೀವ್ ಜೈಸ್ವಾಲ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂಬೈ ದಾಳಿ ಉಗ್ರರ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮ 'ದಿ ಅಟ್ಯಾಕ್ ಆಫ್ 26/11' ಎನ್ನುವ ಸಿನಿಮಾ ಮಾಡಿದ್ದರು. ಈ ಚಿತ್ರದಲ್ಲಿ ಅಜ್ಮಲ್ ಕಸಬ್ ಪಾತ್ರದಲ್ಲಿ ನಟ ಸಂಜೀವ್ ಕಾಣಿಸಿಕೊಂಡಿದ್ದರು.

Bollywood actor Sanjeev Jaiswal is playing villain role in Devaki film

ಸಂಜೀವ್ ನೋಡಲು ಥೇಟ್ ಅಜ್ಮಲ್ ಹಾಗೆ ಕಾಣಿಸುತ್ತಾರೆ. ರಾಮ್ ಗೋಪಲ್ ವರ್ಮ ಸಿನಿಮಾ ನೋಡಿ ಅನೇಕರು ಅಚ್ಚರಿ ಪಟ್ಟಿದ್ದರು. ಸಂಜೀವ್ ಬಾಲಿವುಡ್ ನ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಆದ್ರೀಗ 'ದೇವಕಿ' ಚಿತ್ರದಲ್ಲಿ ಖಡಕ್ ಖಳ ನಟನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

ಈ ಮೂಲಕ ಸಂಜೀವ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ದೇವಕಿ' ಸಿನಿಮಾ ಬಹುತೇಕ ಚಿತ್ರೀಕರಣ ಉತ್ತರ ಭಾರತದಲ್ಲಿ ನಡೆದಿದ್ದರಿಂದ ಉತ್ತರ ಭಾರತೀಯ ನಟನಿದ್ದರೆ ಸೂಕ್ತ ಎನ್ನುವ ಕಾರಣಕ್ಕೆ ಸಂಜೀವ್ ಅವರಿಗೆ ಖಳ ನಟನ ಪಾತ್ರ ನೀಡಿದೆ 'ದೇವಕಿ' ಚಿತ್ರತಂಡ.

More from Filmibeat

English summary
Bollywood actor Sanjeev Jaiswal is playing villain role in Priyanka Upendra starrer 'Devaki' film. Jaiswal played Ajmal Kasab role in 'The attack of 26/11' film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X