ಅನುಕ್ತ ಚಿತ್ರ ನೋಡಿ ಮೆಚ್ಚಿಕೊಂಡ ಬಾಲಿವುಡ್ ಸ್ಟಾರ್ ನಟ
ಕಳೆದ ವಾರ ತೆರೆಕಂಡ ಅನುಕ್ತ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಹೊಂದಿರುವ ಅನುಕ್ತ ಚಿತ್ರಕ್ಕೆ ಕನ್ನಡ ಕಲಾಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ಇದೀಗ, ಕನ್ನಡದ ಈ ಚಿತ್ರವನ್ನ ಬಾಲಿವುಡ್ ನಟ ಸೋನು ಸೂದ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಫಿದಾ ಆಗಿರುವ ಸೋನು, ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ''ಇತ್ತೀಚೀನ ದಿನದಲ್ಲಿ ಒಳ್ಳೆಯ ಸಿನಿಮಾ ಬರೋದು ಅಪರೂಪ. ಬಂದಾಗ ಮಿಸ್ ಮಾಡಿಕೊಳ್ಳಬಾರದು. ಎಲ್ಲರೂ ಈ ಚಿತ್ರವನ್ನ ನೋಡಿ'' ಎಂದು ಮನವಿ ಮಾಡಿದ್ದಾರೆ.
ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್, ಸಂಪತ್ ರಾಜ್ ಮತ್ತು ಅನುಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಇನ್ನೊಂದು ರಂಗಿತರಂಗ ಎಂದು ಕರೆಸಿಕೊಳ್ಳುತ್ತಿದೆ.
ಅಂದ್ಹಾಗೆ, ರಂಗಿತರಂಗ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಬಟ್, ಆ ಚಿತ್ರದಂತೆ ಒಂದು ವಿಶೇಷ ಕಥೆಯನ್ನಿಟ್ಟು ಬಹಳ ಥ್ರಿಲ್ಲಿಂಗ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿದೆ.

ಅಶ್ವಥ್ ಸ್ಯಾಮ್ಯುಲ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಎನ್ ಎಂ ವಿಶ್ವ ಅವರ ಸಂಕಲನ, ನವೀನ್ ಶರ್ಮಾ ಮತ್ತು ಕಿರಣ್ ಶೆಟ್ಟಿ ಸಂಭಾಷಣೆ ಬರೆದಿದ್ದು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ.


Click it and Unblock the Notifications











