For Quick Alerts
    ALLOW NOTIFICATIONS  
    For Daily Alerts

    ಅನುಕ್ತ ಚಿತ್ರ ನೋಡಿ ಮೆಚ್ಚಿಕೊಂಡ ಬಾಲಿವುಡ್ ಸ್ಟಾರ್ ನಟ

    |

    ಕಳೆದ ವಾರ ತೆರೆಕಂಡ ಅನುಕ್ತ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಮರ್ಡರ್ ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನ ಹೊಂದಿರುವ ಅನುಕ್ತ ಚಿತ್ರಕ್ಕೆ ಕನ್ನಡ ಕಲಾಭಿಮಾನಿಗಳು ಬೋಲ್ಡ್ ಆಗಿದ್ದಾರೆ.

    ಇದೀಗ, ಕನ್ನಡದ ಈ ಚಿತ್ರವನ್ನ ಬಾಲಿವುಡ್ ನಟ ಸೋನು ಸೂದ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ನೋಡಿ ಫಿದಾ ಆಗಿರುವ ಸೋನು, ವಿಡಿಯೋ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ''ಇತ್ತೀಚೀನ ದಿನದಲ್ಲಿ ಒಳ್ಳೆಯ ಸಿನಿಮಾ ಬರೋದು ಅಪರೂಪ. ಬಂದಾಗ ಮಿಸ್ ಮಾಡಿಕೊಳ್ಳಬಾರದು. ಎಲ್ಲರೂ ಈ ಚಿತ್ರವನ್ನ ನೋಡಿ'' ಎಂದು ಮನವಿ ಮಾಡಿದ್ದಾರೆ.

    ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್, ಸಂಪತ್ ರಾಜ್ ಮತ್ತು ಅನುಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಇನ್ನೊಂದು ರಂಗಿತರಂಗ ಎಂದು ಕರೆಸಿಕೊಳ್ಳುತ್ತಿದೆ.

    ಅನುಕ್ತ Review: ಕೊಲೆಯ ಹಿಂದಿನ ಸತ್ಯಾನ್ವೇಷಣೆ ಅನುಕ್ತ Review: ಕೊಲೆಯ ಹಿಂದಿನ ಸತ್ಯಾನ್ವೇಷಣೆ

    ಅಂದ್ಹಾಗೆ, ರಂಗಿತರಂಗ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಬಟ್, ಆ ಚಿತ್ರದಂತೆ ಒಂದು ವಿಶೇಷ ಕಥೆಯನ್ನಿಟ್ಟು ಬಹಳ ಥ್ರಿಲ್ಲಿಂಗ್ ಆಗಿ ಪ್ರೆಸೆಂಟ್ ಮಾಡಿದ್ದಾರೆ. ಸಿನಿಮಾ ಕೂಡ ಅಷ್ಟೇ ಚೆನ್ನಾಗಿದೆ.

    ವಿಮರ್ಶಕರ ಎದೆ ನಡುಗಿಸುವಲ್ಲಿ 'ಅನುಕ್ತ' ಯಶಸ್ವಿ ಆಯ್ತಾ.? ವಿಮರ್ಶಕರ ಎದೆ ನಡುಗಿಸುವಲ್ಲಿ 'ಅನುಕ್ತ' ಯಶಸ್ವಿ ಆಯ್ತಾ.?

    ಅಶ್ವಥ್ ಸ್ಯಾಮ್ಯುಲ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಎನ್ ಎಂ ವಿಶ್ವ ಅವರ ಸಂಕಲನ, ನವೀನ್ ಶರ್ಮಾ ಮತ್ತು ಕಿರಣ್ ಶೆಟ್ಟಿ ಸಂಭಾಷಣೆ ಬರೆದಿದ್ದು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ.

    English summary
    Kannada actor sampath raj, anu prabhakar, sangeetha bhat and Karthik Attavar satrrer anuktha movie has released on february 1st. Bollywood actor sonu sood watched anukta.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X