'ಪೈಲ್ವಾನ್' ನಂತರ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸುನಿಲ್ ಶೆಟ್ಟಿ.!

By Bharath Kumar

ಬಾಲಿವುಡ್ ಸೂಪರ್ ಸ್ಟಾರ್ ನಟ ಸುನಿಲ್ ಶೆಟ್ಟಿ ಮೂಲತಃ ಕರ್ನಾಟಕದವರು. ಆದ್ರೆ, 25 ವರ್ಷದಿಂದ ಬಿಟೌನ್ ಇಂಡಸ್ಟ್ರಿಯಲ್ಲಿದ್ದರೂ ಕನ್ನಡ ಚಿತ್ರರಂಗದ ಕಡೆ ಬಂದೇ ಇರಲಿಲ್ಲ. ಇದೀಗ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಂದನವನದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಈಗಾಗಲೇ 'ಪೈಲ್ವಾನ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸುನಿಲ್ ಶೆಟ್ಟಿ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗ, ಮತ್ತೊಂದು ಕನ್ನಡ ಚಿತ್ರಕ್ಕೆ ಸುನಿಲ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.

ದಕ್ಷಿಣ ಭಾರತದ ಬಹುದೊಡ್ಡ ನಿರ್ಮಾಣ ಸಂಸ್ಥೆಯ ಅಡಿ ನಿರ್ಮಾಣವಾಗುತ್ತಿರುವ ಪಂಚ ಭಾಷೆಯಲ್ಲಿ ತಯಾರಾಗುತ್ತಿರುವ ಬಹುಕೋಟಿ ವೆಚ್ಚದ ಚಿತ್ರವನ್ನ ಸುನಿಲ್ ಶೆಟ್ಟಿ ಒಪ್ಪಿಕೊಂಡಿದ್ದಾರೆಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

'ಪಿರಂಗಿಪುರ' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಂತೆ.!

'ಪಿರಂಗಿಪುರ' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಂತೆ.!

ಸಂಚಾರಿ ವಿಜಯ್ ಅಭಿನಯದ ಬಹುಭಾಷಾ ಸಿನಿಮಾ 'ಪಿರಂಗಿಪುರ' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಸುನಿಲ್ ಶೆಟ್ಟಿ ಅವರನ್ನ ಪಿರಂಗಿಪುರ ಚಿತ್ರತಂಡ ಭೇಟಿ ಮಾಡಿದ್ದು, ಈ ಬಗ್ಗೆ ಮಾತುಕತೆ ನಡೆಸಿದೆ. ಆದ್ರೆ, ಈ ಬಗ್ಗೆ ಸುನಿಲ್ ಶೆಟ್ಟಿ ಯಾವುದೇ ಒಪ್ಪಿಗೆ ಕೊಟ್ಟಿಲ್ಲವೆಂಬುದು ಅಸಲಿ ನಿಜ.

ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ.!

ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ.!

ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅವರ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಸುನಿಲ್ ಶೆಟ್ಟಿ ಈ ಸಿನಿಮಾ ಒಪ್ಪಿಕೊಂಡ್ರೆ, ಮುಖ್ಯ ಖಳನಾಯಕನಾಗಿ ಕೊಳ್ಳಬಹುದಂತೆ. ಒಬ್ಬ ಕ್ರೂರ ರಾಜನಾಗಿ ಬಣ್ಣ ಹಚ್ಚಬಹುದು.

ಐದು ಭಾಷೆಯಲ್ಲಿ ಬರಲಿದೆ 'ಪಿರಂಗಿಪುರ'

ಐದು ಭಾಷೆಯಲ್ಲಿ ಬರಲಿದೆ 'ಪಿರಂಗಿಪುರ'

ಜನಾರ್ದನ್ ಪಿ. ಜಾನಿ ನಿರ್ದೇಶಿಸುತ್ತಿರುವ ಈ ಚಿತ್ರದ ಫಸ್ಟ್​ಲುಕ್ ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿದೆ. ಆರಂಭದಲ್ಲಿ ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಆದ್ರೀಗ, ಗುಜರಾತಿನ ಅದಾನಿ ಟೆಲಿಫಿಲ್ಮ್ ಸಂಸ್ಥೆ ಸಾಥ್ ನೀಡಿರುವುದರಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿತ್ತಿದೆಯಂತೆ.

25 ಕೋಟಿ ವೆಚ್ಚದಲ್ಲಿ ಚಿತ್ರೀಕರಣ

25 ಕೋಟಿ ವೆಚ್ಚದಲ್ಲಿ ಚಿತ್ರೀಕರಣ

ಅಂದ್ಹಾಗೆ, ಪಿರಂಗಿಪುರ ಸಿನಿಮಾ ಸಂಪೂರ್ಣ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ತಯಾರಾಗುತ್ತಿದೆ. ಕಥೆಗೆ ಅಗತ್ಯವಿರುವ ಲೊಕೇಷನ್​ಗಳ ಪೈಕಿ ಶೇ. 20 ಭಾಗ ಸೆಟ್ ನಿರ್ವಿುಸಿದರೆ, ಇನ್ನುಳಿದ 80 ಭಾಗ ವಿಎಫ್​ಎಕ್ಸ್ ಮೂಲಕ ಕಟ್ಟಿಕೊಡುವ ಪ್ಲ್ಯಾನ್ ಚಿತ್ರತಂಡದ್ದು. ಇದಕ್ಕಾಗಿ ಕಳೆದ 9 ತಿಂಗಳುಗಳಿಂದ ನುರಿತ 12 ತಂತ್ರಜ್ಞರ ತಂಡ ಶ್ರಮಿಸುತ್ತಿದೆಯಂತೆ.

More from Filmibeat

English summary
Bollywood actor Sunil Shetty has signed a second Kannada film. he playing main villain for sanchari vijay starrer 'pirangipura' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X