Don't Miss!
- News ‘ದೇಶ ಸುರಕ್ಷಿತವಾಗಿರಲು ನರೇಂದ್ರ ಮೋದಿ ಅವರೇ ಪ್ರಧಾನಿ ಆಗಬೇಕು!’
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪೈಲ್ವಾನ್' ನಂತರ ಮತ್ತೊಂದು ಕನ್ನಡ ಸಿನಿಮಾದಲ್ಲಿ ಸುನಿಲ್ ಶೆಟ್ಟಿ.!
ಬಾಲಿವುಡ್ ಸೂಪರ್ ಸ್ಟಾರ್ ನಟ ಸುನಿಲ್ ಶೆಟ್ಟಿ ಮೂಲತಃ ಕರ್ನಾಟಕದವರು. ಆದ್ರೆ, 25 ವರ್ಷದಿಂದ ಬಿಟೌನ್ ಇಂಡಸ್ಟ್ರಿಯಲ್ಲಿದ್ದರೂ ಕನ್ನಡ ಚಿತ್ರರಂಗದ ಕಡೆ ಬಂದೇ ಇರಲಿಲ್ಲ. ಇದೀಗ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಂದನವನದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಈಗಾಗಲೇ 'ಪೈಲ್ವಾನ್' ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸುನಿಲ್ ಶೆಟ್ಟಿ ಕೂಡ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಹೀಗಿರುವಾಗ, ಮತ್ತೊಂದು ಕನ್ನಡ ಚಿತ್ರಕ್ಕೆ ಸುನಿಲ್ ಶೆಟ್ಟಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ದಕ್ಷಿಣ ಭಾರತದ ಬಹುದೊಡ್ಡ ನಿರ್ಮಾಣ ಸಂಸ್ಥೆಯ ಅಡಿ ನಿರ್ಮಾಣವಾಗುತ್ತಿರುವ ಪಂಚ ಭಾಷೆಯಲ್ಲಿ ತಯಾರಾಗುತ್ತಿರುವ ಬಹುಕೋಟಿ ವೆಚ್ಚದ ಚಿತ್ರವನ್ನ ಸುನಿಲ್ ಶೆಟ್ಟಿ ಒಪ್ಪಿಕೊಂಡಿದ್ದಾರೆಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
'ಪಿರಂಗಿಪುರ' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಂತೆ.!
ಸಂಚಾರಿ ವಿಜಯ್ ಅಭಿನಯದ ಬಹುಭಾಷಾ ಸಿನಿಮಾ 'ಪಿರಂಗಿಪುರ' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ಸುನಿಲ್ ಶೆಟ್ಟಿ ಅವರನ್ನ ಪಿರಂಗಿಪುರ ಚಿತ್ರತಂಡ ಭೇಟಿ ಮಾಡಿದ್ದು, ಈ ಬಗ್ಗೆ ಮಾತುಕತೆ ನಡೆಸಿದೆ. ಆದ್ರೆ, ಈ ಬಗ್ಗೆ ಸುನಿಲ್ ಶೆಟ್ಟಿ ಯಾವುದೇ ಒಪ್ಪಿಗೆ ಕೊಟ್ಟಿಲ್ಲವೆಂಬುದು ಅಸಲಿ ನಿಜ.
'ಪೈಲ್ವಾನ್' ತಂಡ ಸೇರುವ ಮೊದಲ ಸುನೀಲ್ ಶೆಟ್ಟಿ ಮಾಡಿದ ಟ್ವೀಟ್
ವಿಲನ್ ಪಾತ್ರದಲ್ಲಿ ಬಾಲಿವುಡ್ ನಟ.!
ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಚಿತ್ರದಲ್ಲಿ ಸುನಿಲ್ ಶೆಟ್ಟಿ ಅವರ ಪಾತ್ರದ ಬಗ್ಗೆ ಬಿಟ್ಟುಕೊಟ್ಟಿಲ್ಲ. ಒಂದು ವೇಳೆ ಸುನಿಲ್ ಶೆಟ್ಟಿ ಈ ಸಿನಿಮಾ ಒಪ್ಪಿಕೊಂಡ್ರೆ, ಮುಖ್ಯ ಖಳನಾಯಕನಾಗಿ ಕೊಳ್ಳಬಹುದಂತೆ. ಒಬ್ಬ ಕ್ರೂರ ರಾಜನಾಗಿ ಬಣ್ಣ ಹಚ್ಚಬಹುದು.
ಐದು ಭಾಷೆಯಲ್ಲಿ ಬರಲಿದೆ 'ಪಿರಂಗಿಪುರ'
ಜನಾರ್ದನ್ ಪಿ. ಜಾನಿ ನಿರ್ದೇಶಿಸುತ್ತಿರುವ ಈ ಚಿತ್ರದ ಫಸ್ಟ್ಲುಕ್ ಈಗಾಗಲೇ ರಿಲೀಸ್ ಆಗಿ ಗಮನ ಸೆಳೆದಿದೆ. ಆರಂಭದಲ್ಲಿ ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತೆ ಎನ್ನಲಾಗಿತ್ತು. ಆದ್ರೀಗ, ಗುಜರಾತಿನ ಅದಾನಿ ಟೆಲಿಫಿಲ್ಮ್ ಸಂಸ್ಥೆ ಸಾಥ್ ನೀಡಿರುವುದರಿಂದ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸಿನಿಮಾ ಸಿದ್ಧವಾಗಿತ್ತಿದೆಯಂತೆ.
25 ಕೋಟಿ ವೆಚ್ಚದಲ್ಲಿ ಚಿತ್ರೀಕರಣ
ಅಂದ್ಹಾಗೆ, ಪಿರಂಗಿಪುರ ಸಿನಿಮಾ ಸಂಪೂರ್ಣ ಗ್ರಾಫಿಕ್ಸ್ ತಂತ್ರಜ್ಞಾನದಲ್ಲಿ ತಯಾರಾಗುತ್ತಿದೆ. ಕಥೆಗೆ ಅಗತ್ಯವಿರುವ ಲೊಕೇಷನ್ಗಳ ಪೈಕಿ ಶೇ. 20 ಭಾಗ ಸೆಟ್ ನಿರ್ವಿುಸಿದರೆ, ಇನ್ನುಳಿದ 80 ಭಾಗ ವಿಎಫ್ಎಕ್ಸ್ ಮೂಲಕ ಕಟ್ಟಿಕೊಡುವ ಪ್ಲ್ಯಾನ್ ಚಿತ್ರತಂಡದ್ದು. ಇದಕ್ಕಾಗಿ ಕಳೆದ 9 ತಿಂಗಳುಗಳಿಂದ ನುರಿತ 12 ತಂತ್ರಜ್ಞರ ತಂಡ ಶ್ರಮಿಸುತ್ತಿದೆಯಂತೆ.