ಹೊಟ್ಟೆಯಲ್ಲಿ ಸೋಂಕು ಆಸ್ಪತ್ರೆಗೆ ದಾಖಲಾದ ಸನ್ನಿ ಲಿಯೋನ್
ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಉತ್ತರಾಖಂಡದ ಕಾಶಿಪುರದಲ್ಲಿರುವ ಬ್ರಿಜೆಶ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ರಾತ್ರಿ ಹೊಟ್ಟೆಯಲ್ಲಿ ಸೋಂಕು ಕಾಣಿಸಿಕೊಂಡ ಕಾರಣ ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು ''ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಅದಕ್ಕೆ ಉತ್ತಮವಾದ ಚಿಕಿತ್ಸೆ ನೀಡಲಾಗಿದೆ, ಆರೋಗ್ಯವಾಗಿದ್ದಾರೆ. ನಾರ್ಮಲ್ ಕಂಡಿಷನ್ ಗೆ ಬಂದ ಕೂಡಲೇ ಡಿಸ್ಜಾರ್ಜ್ ಮಾಡಲಾಗುತ್ತೆ'' ಎಂದು ತಿಳಿಸಿದ್ದರು.
ಅಂದ್ಹಾಗೆ, ಸನ್ನಿ ಲಿಯೋನ್ ಉತ್ತರಾಖಂಡದ ರಾಮನಗರದಲ್ಲಿ ಸ್ಪ್ಲಿಟ್ಸ್ವಿಲ್ಲಾ 11 ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸನ್ನಿ ಲಿಯೋನ್ ಜೊತೆಯಲ್ಲಿ ಸಹ ನಿರೂಪಕ ರಣ್ ವಿಜಯ್ ಮತ್ತು ಸ್ಪರ್ಧಿಗಳು ಇದ್ದರು. ಶೂಟಿಂಗ್ ವೇಳೆ ಅಚಾನಕ್ ಆಗಿ ಸನ್ನಿ ಆರೋಗ್ಯದಲ್ಲಿ ಏರುಪೇರಾಗಿದೆ.

ಇನ್ನುಳಿದಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸನ್ನಿ ಲಿಯೋನ್ 'ಕರ್ಣಿಜಿತ್ ಅನ್ ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್' ಹಾಗೂ ಬಹುಭಾಷಾ ಸಿನಿಮಾ 'ವೀರಮಹಾದೇವಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications