'ರಾಬರ್ಟ್'ಗೆ ನಾಯಕಿಯಾದ ಭದ್ರಾವತಿಯ ಆಶಾ ಭಟ್ ಯಾರು?

Recommended Video

Robert Movie : ರಾಬರ್ಟ್'ಗೆ ನಾಯಕಿಯಾದ ಭದ್ರಾವತಿಯ ಆಶಾ ಭಟ್ | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಸಾಕಷ್ಟು ಕುತೂಹಲ ಮೂಡಿಸಿದ್ದ ನಾಯಕಿ ವಿಚಾರ ಈಗ ಬಹಿರಂಗವಾಗಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿಮಣಿಯರ ಹೆಸರು ರಾಬರ್ಟ್ ಚಿತ್ರದ ನಾಯಕಿಯ ಜಾಗದಲ್ಲಿ ಕೇಳಿ ಬರುತ್ತಿತ್ತು.

ಆದ್ರೀಗ ಅಪ್ಪಟ ಕನ್ನಡತಿ ಆಶಾ ಬಟ್ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಬರ್ಟ್ ನಲ್ಲಿ ದರ್ಶನ್ ಜೊತೆ ರೋಮ್ಯಾನ್ಸ್ ಮಾಡುವುದು ಮೆಹರಿನ್ ಪಿರ್ಜಾದ ಖಚಿತ ಎನ್ನುವ ಮಾತುಗಳು ಹರಿದಾಡುತ್ತಿತ್ತು. ಆದ್ರೀಗ ಮಿಸ್ ಸುಪ್ರ ನ್ಯಾಶನಲ್ ಕಿರೀಟ ಮುಡಿಗೇರಿಸಿಕೊಂಡ ಭದ್ರಾವತಿಯ ಬೆಡಗಿ ಆಶಾ ಭಟ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ ಚಿತ್ರತಂಡ.

ದರ್ಶನ್ ಗೆ ಆಶಾ ಭಟ್ ನಾಯಕಿ

ದರ್ಶನ್ ಗೆ ಆಶಾ ಭಟ್ ನಾಯಕಿ

ರಾಬರ್ಟ್ ಚಿತ್ರದಲ್ಲಿ ದರ್ಶನ್ ಜೊತೆ ಮಿಸ್ ಸುಪ್ರ ನ್ಯಾಶನಲ್ ಕಿರೀಟ ಮುಡಿಗೇರಿಸಿಕೊಂಡಿದ್ದ ಆಶಾ ಭಟ್ ರೋಮ್ಯಾನ್ಸ್ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಬಹಿರಂಗಪಡಿಸಿದೆ. ನಿರ್ದೇಶಕ ತರುಣ್ ಸುಧೀರ್ ಆಶಾ ಭಟ್ ಆಯ್ಕೆ ಆಗಿರುವ ವಿಚಾರವನ್ನು ಟ್ವಿಟ್ಟರ್ ಖಾತೆಯಲ್ಲಿ ಅನೌನ್ಸ್ ಮಾಡಿದ್ದಾರೆ. ಈ ಮೂಲಕ ರಾಬರ್ಟ್ ಗೆ ಯಾರಾಗ್ತಾರೆ ನಾಯಕಿ ಎನ್ನುವ ಕುತೂಹಲಕ್ಕೆ ಪುಲ್ ಸ್ಟಾಪ್ ಇಟ್ಟಿದ್ದಾರೆ.

ಭದ್ರಾವತಿಯ ಬೆಡಗಿ ಆಶಾ ಭಟ್

ಭದ್ರಾವತಿಯ ಬೆಡಗಿ ಆಶಾ ಭಟ್

ಆಶಾ ಭಟ್ ಅಪ್ಪಟ ಕನ್ನಡದ ಪ್ರತಿಭೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೆಡಗಿ ಆಶಾ ಭಟ್. ಸ್ಯಾಂಡಲ್ ವುಡ್ ಗೆ ಕಾಲಿಡುವ ಮೊದಲು ಆಶಾ ಹಿಂದಿ ಸಿನಿಮಾದಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ಬಾಲಿವುಡ್ ನಲ್ಲಿ ರಿಲೀಸ್ ಆದ ಜಂಗ್ಲಿ ಸಿನಿಮಾದಲ್ಲಿ ಆಶಾ ಬಣ್ಣ ಹಚ್ಚಿದ್ದಾರೆ. ವಿದ್ಯಾತ್ ಜಮ್ವಾಲ ನಾಯಕನಾಗಿ ಕಾಣಿಸಿಕೊಂಡಿದ್ದ ಚಿತ್ರದಲ್ಲಿ ಆಶಾ ಪ್ರಮುಕ ಪಾತ್ರದಲ್ಲಿ ಮಿಂಚಿದ್ದಾರೆ.

ಆಳ್ವಾಸ್ ನಲ್ಲಿ ವಿದ್ಯಾಭ್ಯಾಸ

ಆಳ್ವಾಸ್ ನಲ್ಲಿ ವಿದ್ಯಾಭ್ಯಾಸ

ಮೂಡಬಿದರೆಯ ಆಳ್ವಾಸ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ. ಓದುತ್ತಿರುವಾಗಲೆ ಫ್ಯಾಶನ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಆಶಾ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಗೆದ್ದ ನಂತರ ಜಾಹಿರಾತು ಪ್ರಪಂಚದಲ್ಲಿ ಗುರುತಿಸಿಕೊಂಡಿದ್ದರು. ಓದಿನ ಕಡೆ ಹೆಚ್ಚು ಗಮನ ಹರಿಸಿದ್ದ ಆಶಾ, ಓದು ಮುಗಿಯುತ್ತಿದ್ದಂತೆ ಸಿನಿ ಪಯಣವನ್ನು ಪ್ರಾರಂಭಿಸಿದ್ದಾರೆ.

2014ರಲ್ಲಿ ಮಿಸ್ ಸುಪ್ರ ಇಂಟರ್ ನ್ಯಾಷನಲ್ ವಿನ್ನರ್

2014ರಲ್ಲಿ ಮಿಸ್ ಸುಪ್ರ ಇಂಟರ್ ನ್ಯಾಷನಲ್ ವಿನ್ನರ್

ವಿದ್ಯಾಭ್ಯಾಸ ಮಾಡುತ್ತಿರುವಾಗಲೆ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗಿಯಾಗಿ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 2014ರಲ್ಲಿ ಪೋಲೆಂಡ್ ನಲ್ಲಿ ನಡೆದ ಮಿಸ್ ಸುಪ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ವಿಶೇಷ ಅಂದ್ರೆ ಮಿಸ್ ಸುಪ್ರ ಇಂಟರ್ ನ್ಯಾಷನಲ್ ಮುಡಿಗೇರಿಸಿಕೊಂಡ ಮೊದಲ ಭಾರತಿಯ ನಾರಿ ಎನ್ನುವ ಹೆಗ್ಗಳಿಕೆ ಕೂಡ ಆಶಾ ಅವರದ್ದಾಗಿದೆ.

ಸಂತಸ ವ್ಯಕ್ತಪಡಿಸಿದ ಆಶಾ ಭಟ್

ಸಂತಸ ವ್ಯಕ್ತಪಡಿಸಿದ ಆಶಾ ಭಟ್

ದರ್ಶನ್ ಜೊತೆ ನಾಯಕಿಯಾಗಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿರುವ ಸಂತಸವನ್ನು ಆಶಾ ಭಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ರಾಬರ್ಟ್ ಮೂಲಕ ಹೊಸ ಪಯಣವನ್ನು ಪ್ರಾರಂಭಿಸಿದ್ದೀನಿ. ನನಗೆ ನಿಮ್ಮಲ್ಲರ ಪ್ರೀತಿ ಮತ್ತು ಸಹಕಾರ ಖಂಡಿತವಾಗಿಯೂ ಬೇಕು. ಪ್ರತಿಯೊಬ್ಬರಿಗೂ ಧನ್ಯವಾದ" ಎಂದು ಹೇಳಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರಪ್ರಿಯರ ಮುಂದೆ ಬರುತ್ತಿರುವ ಆಶಾ ಅವರನ್ನು ಪ್ರೇಕ್ಷಕರು ಹೇಗೆ ಸ್ವಾಗತಿಸಲಿದ್ದಾರೆ ಎನ್ನುವುದು ಕಾದು ನೋಡಬೇಕು.

More from Filmibeat

English summary
Bollywood actress Kannadathi Asha Bhat is playing the femele lead role opposite Darshan in the movie Robert.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X