For Quick Alerts
  ALLOW NOTIFICATIONS  
  For Daily Alerts

  ಜೊಮ್ಯಾಟೊ ಡೆಲಿವರಿ ಬಾಯ್ ಪರ ನಿಂತ ನಟಿ ಪ್ರಣಿತಾ ಮತ್ತು ಪರಿಣೀತಿ

  |

  ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡಿರುವ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜ್ ಪರ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

  ಇದು ನಾಚಿಕೆಗೇಡು ಎಂದು ಜೊಮ್ಯಾಟೊಗೆ ಬೈದ ಪರಿಣಿತಿ ಚೋಪ್ರಾ | Filmibeat Kannada

  ಕಾಮರಾಜ್ ಯಾವುದೇ ತಪ್ಪು ಮಾಡಿಲ್ಲ ಎಂದು ಕಣ್ಣೀರು ಹಾಕುತ್ತ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಂತೆ ಅನೇಕರು ಜೊಮ್ಯಾಟೊ ಬಾಯ್ ಪರ ನಿಂತಿದ್ದಾರೆ. 15 ನಿಮಿಷ ತಡವಾಗಿ ಆಹಾರ ತಲುಪಿಸಿದ್ದ ಕಾರಣಕ್ಕೆ ಯುವತಿಯೇ ಚಪ್ಪಲಿಯಿಂದ ಹೊಡೆದಿದ್ದಾರೆ, ಅಲ್ಲದೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಕಾಮರಾಜ್ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

  ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ 1 ಲಕ್ಷ ನೆರವು ನೀಡಿದ ಪ್ರಣಿತಾ ಸುಭಾಷ್ರಾಮಮಂದಿರ ನಿರ್ಮಾಣ ನಿಧಿ ಸಂಗ್ರಹಕ್ಕೆ 1 ಲಕ್ಷ ನೆರವು ನೀಡಿದ ಪ್ರಣಿತಾ ಸುಭಾಷ್

  ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅನೇಕರು ಜೊಮ್ಯಾಟೊ ಬಾಯ್ ಬೆಂಬಲಕ್ಕೆ ನಿಂತಿದ್ದಾರೆ. ಟ್ವಿಟ್ಟರ್ ನಲ್ಲಿ #Mentoo ಅಭಿಯಾನ ಪ್ರಾರಂಭವಾಗಿದೆ. ಟ್ವಿಟ್ಟರ್‌ನಲ್ಲಿ ಕಾಮರಾಜ್ ಟ್ರೆಂಡಿಂಗ್ ನಲ್ಲಿದ್ದಾರೆ. ಆಮಾಯಕನ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಕಾಮರಾಜ್ ಕೆಲಸ ಕಿತ್ತುಕೊಂಡಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಜೊಮ್ಯಾಟೊ ಬಾಯ್ ಬೆಂಬಲಕ್ಕೆ ನಟಿಯರು ಸಹ ನಿಂತಿದ್ದಾರೆ.

  ಪರಿಣೀತಿ ಚೋಪ್ರಾ ಹೇಳಿದ್ದೇನು?

  ಪರಿಣೀತಿ ಚೋಪ್ರಾ ಹೇಳಿದ್ದೇನು?

  ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಟ್ವೀಟ್ ಮಾಡಿ, ಜೊಮ್ಯಾಟೊ ಇಂಡಿಯಾ ದಯವಿಟ್ಟು ಸತ್ಯವನ್ನು ಹುಡುಕಿ ಸಾರ್ವಜನಿಕವಾಗಿ ವರದಿ ಮಾಡಿ. ವ್ಯಕ್ತಿ ನಿರಪರಾಧಿಯಾಗಿದ್ದರೆ (ನಾನು ಆತನನ್ನು ನಂಬುತ್ತೇನೆ) ಹಲ್ಲೆ ಮಾಡಿದ ಮಹಿಳೆಗೆ ದಂಡ ವಿಧಿಸಿ. ಇದು ಅಮಾನವೀಯ, ನಾಚಿಕೆಗೇಡು ಮತ್ತು ಹೃದಯ ವಿದ್ರಾವಕವಾಗಿದೆ. ದಯವಿಟ್ಟು ನಾನು ಹೇಗೆ ಸಹಾಯ ಮಾಡಬಹುದು ಎಂದು ತಿಳಿಸಿ' ಎಂದು ಬರೆದುಕೊಂಡಿದ್ದಾರೆ.

  ಪ್ರಣಿತಾ ಸುಭಾಷ್ ಟ್ವೀಟ್

  ಪ್ರಣಿತಾ ಸುಭಾಷ್ ಟ್ವೀಟ್

  ಇನ್ನು ಕನ್ನಡದ ನಟಿ ಪ್ರಣಿತಾ ಟ್ವೀಟ್ ಮಾಡಿ, 'ಆಹಾರ ವಿತರಣೆಯು ಸಮಯಕ್ಕೆ ಅನುಗುಣವಾಗಿರುತ್ತದೆ. ಆದರೆ ನ್ಯಾಯ ಅಲ್ಲವೇ? ಡೆಲಿವರಿ ಬಾಯ್ ಹೇಳುತ್ತಿರುವುದು ನಿಜವೇ ಆಗಿದ್ದರೆ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಬೇಗ ಸಿಗಲಿದೆ ಎಂದು ನಾನು ಭಾವಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

  ಪ್ರಣಿತಾ ಸುಭಾಷ್‌ರ ಮೆಚ್ಚಿನ ನಟ ಹಾಗೂ ಮೆಚ್ಚಿನ ಕನ್ನಡದ ನಟ ಯಾರು?ಪ್ರಣಿತಾ ಸುಭಾಷ್‌ರ ಮೆಚ್ಚಿನ ನಟ ಹಾಗೂ ಮೆಚ್ಚಿನ ಕನ್ನಡದ ನಟ ಯಾರು?

  ಕಾಮರಾಜ್ ವಿಡಿಯೋದಲ್ಲಿ ಹೇಳಿದ್ದೇನು?

  ಕಾಮರಾಜ್ ವಿಡಿಯೋದಲ್ಲಿ ಹೇಳಿದ್ದೇನು?

  ಘಟನೆ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಾಮರಾಜ್, 'ಟ್ರಾಫಿಕ್ ದಾಟಿ ಹೋಗುವಾಗ ಸ್ವಲ್ಪ ತಡವಾಗಿತ್ತು. ಆ ಯುವತಿ ನಾಲ್ಕನೇ ಮಹಡಿ ಆಹಾರ ತಂದುಕೊಡುವಂತೆ ಕರೆದರು, ನಾನು ಹೋದೆ, ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ರು. ಐಟಂ ತಡವಾಗಿದೆ ಕ್ಷಮಿಸಿ ಎಂದು ಹೇಳಿದೆ. ಆದರೂ ಅವರು ಕೇಳಿಲ್ಲ. ಜೊಮ್ಯಾಟೊಗೆ ದೂರು ನೀಡಿದರು. ದೂರು ಕೊಡಬೇಡಿ ಎಂದು ನಾನು ಕೇಳಿಕೊಂಡೆ' ಎಂದಿದ್ದಾರೆ.

  ಚಪ್ಪಲಿಯಲ್ಲಿ ಹೊಡೆದಿದ್ದಾರೆ

  ಚಪ್ಪಲಿಯಲ್ಲಿ ಹೊಡೆದಿದ್ದಾರೆ

  '15 ಲೇಟಾಗಿದ್ದಕ್ಕೆ ದುಡ್ಡು ಕೊಡಲ್ಲ ಎಂದು ಹೇಳಿದರು. ಊಟನೂ ಕೊಡಲ್ಲ ಏನ್ ಬೇಕಾದರು ಮಾಡಿಕೊ ಎಂದರು. ಊಟ ತೆಗೆದುಕೊಂಡು ನಾನು ಹೊರಡುವಾಗ ಚಪ್ಪಲಿಯಲ್ಲಿ ಹೊಡೆದರು. ಆಕೆಯಿಂದ ತಪ್ಪಿಸಿಕೊಳ್ಳುವಾಗ ಅವರ ಕೈಯಲ್ಲಿದ್ದ ಉಂಗುರ ಅವರ ಮೂಗಿಗೆ ತಾಗಿದೆ. ನಾನು ಹಲ್ಲೆ ಮಾಡಿಲ್ಲ' ಎಂದು ಹೇಳಿದ್ದಾರೆ.

  English summary
  Bollywood Actress Parineeti Chopra And Kannada actress Pranitha support to Zomato Delivery boy Kamaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X