ಕನ್ನಡ ನಟಿ ಚೇತನಾ ರಾಜ್ ಸಾವಿಗೆ ರಾಖಿ ಸಾವಂತ್ ಕಳವಳ: ವೈದ್ಯರ ಬಗ್ಗೆ ಆಕ್ರೋಶ

ಕನ್ನಡದ ಕಿರುತೆರೆ ನಟಿ ಚೇತನಾ ರಾಜ್‌ ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳುವಾಗಲೇ ಮೃತಪಟ್ಟಿದ್ದರು. ಈ ಸಾವು ಇಡೀ ಚಿತ್ರರಂಗವನ್ನೇ ದಂಗು ಬಡಿಸಿತ್ತು. ಅದರಲ್ಲೂ ದೊಡ್ಡ ದೊಡ್ಡ ಸ್ಟಾರ್ ನಟಿಯರು ಈ ವಿಷಯ ಕೇಳಿ ಶಾಕ್‌ ಆಗಿದ್ದರು. ಅಲ್ಲದೆ ನಟಿ ಚೇತನಾ ರಾಜ್‌ ಸಾವಿಗೆ ಕಂಬನಿ ಮಿಡಿದಿದ್ದರು.

ಕನ್ನಡ ಚಿತ್ರರಂಗದಲ್ಲಿ ಬಾಡಿ ಶೇಮಿಂಗ್, ಬ್ಯೂಟಿ ಕುರಿತಾಗಿ ಕೆಲ ನಟಿಯರು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಬಣ್ಣದ ಲೋಕದಲ್ಲಿರುವ ಹೆಣ್ಣುಮಕ್ಕಳಿಗೆ ಆಗುವ ಸಮಸ್ಯೆಗಳು, ಅವರು ತಮ್ಮ ದೇಹ ಸೌಂದರ್ಯಕ್ಕಾಗಿ ಎದುರಿಸುವ ಸವಾಲುಗಳ ಕುರಿತು ಹಾಗೂ ಅವರ ಕಹಿ ಅನುಭವಗಳನ್ನು ಕೂಡ ಚೇತನಾ ರಾಜ್‌ ನಿಧನದ ಬಳಿಕ ಹೊರಹಾಕಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚಬೇಕೆಂದರೆ ಹೆಚ್ಚು ಆಕರ್ಷಕವಾಗಿ ಕಾಣಬೇಕು. ಇಲ್ಲದಿದ್ದರೆ, ಅಂತಹವರಿಗೆ ಅವಕಾಶ ಸಿಗುವುದು ತುಂಬಾ ವಿರಳ. ಹಾಗೆಯೇ ಅವಕಾಶಕ್ಕಾಗಿ ಈ ರೀತಿ ಎಷ್ಟೋ ನಟಿಯರು ಸರ್ಜರಿಗೆ ಒಳಗಾಗಿ ತಮಗೆ ಇರುವ ದೇಹ ಸೌಂರ್ದಯವನ್ನೇ ಹಾಳು ಮಾಡಿಕೊಂಡಿದ್ದಾರೆ. ಕೆಲವರು ಚೇತನಾ ರಾಜ್ ರೀತಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಸದ್ಯ ಇನ್ನು 22 ವರ್ಷದ ಹರೆಯದ ಯುವತಿ ಚೇತನಾ ರಾಜ್ ನೋಡಲು ಆಕರ್ಷಕವಾಗಿದ್ದರೂ ಚಿತ್ರರಂಗದಲ್ಲಿ ಮಿಂಚಬೇಕು ಎಂಬ ಆಸೆಯಿಂದ ಫ್ಯಾಟ್‌ ಸರ್ಜರಿಗೆ ಒಳಗಾಗಿ ಸಾವನ್ನಪ್ಪಿದ್ದಾರೆ. ಸದ್ಯ ಈ ಸಾವಿನ ಕುರಿತು ಈಗ ಬಾಲಿವುಡ್‌ ಬೆಡಗಿ ರಾಖಿ ಸಾವಂತ್ ಕೂಡ ದಿಗ್ಬ್ರಮೆಗೊಂಡಿದ್ದಾರೆ.

 ವೈದ್ಯರ ವಿರುದ್ಧ ರಾಖಿ ಸಾವಂತ್ ಕಿಡಿ

ವೈದ್ಯರ ವಿರುದ್ಧ ರಾಖಿ ಸಾವಂತ್ ಕಿಡಿ

ಪ್ಲಾಸ್ಟಿಕ್ ಸರ್ಜರಿಯಿಂದಾಗಿ ಕನ್ನಡದ ನಟಿ ಚೇತನಾ ರಾಜ್ ಮೃತಪಟ್ಟ ಸುದ್ದಿ ಕೇಳಿ ನನಗೆ ತೀವ್ರ ಅಘಾತ ಉಂಟಾಗಿದೆ. ಚೇತನಾ ರಾಜ್ ಸಾವಿಗೆ ಕಾರಣವಾದ ಆಸ್ಪತ್ರೆ ಯಾವುದು? ವೈದ್ಯರು ಯಾರು? ಅಂತ ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ ವಯಸ್ಸು ಆಕೆಯ ಜೀವ ತೆಗೆದ ಸರ್ಜರಿ ಯಾವುದು? ಎಂಬುದು ನನಗೆ ಗೊತ್ತಾಗಬೇಕು. ಅಸಲಿಗೆ ಆ ವೈದ್ಯನಿಗೆ ಡಾಕ್ಟರ್ ಡಿಗ್ರಿ ಕೊಟ್ಟವರು ಯಾರು? ಈಗಿನ ಕಾಲದಲ್ಲಿ ಯಾರು ಬೇಕಾದರೂ ಡಾಕ್ಟರ್ ಆಗಬಹುದು. ಯಾರು ಬೇಕಾದರೂ ನರ್ಸ್ ಆಗಬಹುದು, ಯಾರು ಬೇಕಾದರೂ ಪ್ಲಾಸ್ಟಿಕ್ ಸರ್ಜನ್ ಆಗಬಹುದು ಎಂದು ಕಿಡಿಕಾಡಿದ್ದಾರೆ. ಅಲ್ಲದೆ ಸರಿಯಾದ ವೈದ್ಯರು ಬೇಕು ಅಂದ್ರೆ, ಬಾಲಿವುಡ್ ಮಂದಿ ಅಥವಾ ನನ್ನನ್ನು ಕೇಳಿ ಯಾವ ಡಾಕ್ಟರ್ ಬೆಸ್ಟ್ ಅಂತ ನಾವು ಗೈಡ್ ಮಾಡುತ್ತೇವೆ. ಯಾರ ಮಾತನ್ನೋ ನಂಬಿ ಅಪರೇಶನ್ ಥಿಯೇಟರ್‌ಗೆ ಹೋಗಬೇಡಿ ಇದು ಖಂಡಿತ ಸರಿಯಲ್ಲ.' ಎಂದು ವಿಡಿಯೋ ಮೂಲಕ ರಾಖಿ ಸಾವಂತ್ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

 ಚೇತನಾ ರಾಜ್ ಸಾವಿಗೆ ಪ್ರತಿಕ್ರಿಯಿಸಿದ ರಮ್ಯಾ

ಚೇತನಾ ರಾಜ್ ಸಾವಿಗೆ ಪ್ರತಿಕ್ರಿಯಿಸಿದ ರಮ್ಯಾ

ನಟಿ ಚೇತನಾ ರಾಜ್ ಸಾವು ಚಿತ್ರರಂಗದಲ್ಲಿರುವವರಿಗೆ ದೊಡ್ಡ ಅಘಾತವನ್ನೇ ಸೃಷ್ಟಿ ಮಾಡಿದೆ. ನಟಿ ರಮ್ಯಾ ಕೂಡ ಚೇತನಾ ಸಾವಿನ ಕುರಿತು ಹಾಗೂ ಬಣ್ಣದ ಲೋಕದಲ್ಲಿ ಇರುವ ಲಿಂಗ ತಾರತಮ್ಯದ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು 'ಪುರುಷರಾದವರು ಸಂಪೂರ್ಣವಾಗಿ ತಲೆಕೂದಲು ಉದುರಿದರೂ ಟೋಪಿ ಹಾಕಿಕೊಳ್ಳಬಾರದು. ಮುಖದಲ್ಲಿರುವ ಗಲ್ಲ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೊ ಆಗುತ್ತಾನೆ. ಆದರೆ ಮಹಿಳೆ ಸ್ವಲ್ಪ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಕರೆಯಲಾಗುತ್ತದೆ,' ಎಂದು ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಫ್ಯಾಟ್ ಸರ್ಜರಿ ವೇಳೆ ಚೇತನಾ ಸಾವು

ಫ್ಯಾಟ್ ಸರ್ಜರಿ ವೇಳೆ ಚೇತನಾ ಸಾವು

ನಟಿ ಚೇತನಾ ರಾಜ್‌ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಮಿಂಚಬೇಕು ಎಂಬ ಆಸೆಯಿಂದ ಯಾರೋ ಹೇಳಿದ ಮಾತನ್ನು ಕೇಳಿ ಫ್ಯಾಟ್ ಸರ್ಜರಿಗೆ ಒಳಗಾಗಿದ್ದರು. ಬೆಂಗಳೂರಿನ ಶೆಟ್ಟಿಸ್ ಕಾಸ್ಮೆಟಿಕ್ ಸರ್ಜರಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳಬೇಕಾದರೆ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಣಾಮ ಚೇತನಾ ರಾಜ್ ಸಾವನ್ನಪ್ಪಿದ್ದರು. ಪೋಷಕರ ಸಮ್ಮತಿಯು ಪಡೆಯದೇ ಏಕಾಏಕಿ ಆಸ್ಪತ್ರೆಗೆ ಬಂದು ಸರ್ಜರಿಗೆ ಒಳಗಾಗಿ ತಮ್ಮ ಬಣ್ಣದ ಲೋಕದ ಕನಸನ್ನು ಕನಸಾಗೇ ಉಳಿಸಿಕೊಂಡು ಮಣ್ಣಲ್ಲಿ ಮಣ್ಣಾಗಿದ್ದಾರೆ.

 ಚೇತನಾ ರಾಜ್‌ ವಿಡಿಯೋಗಳು ವೈರಲ್

ಚೇತನಾ ರಾಜ್‌ ವಿಡಿಯೋಗಳು ವೈರಲ್

ನಟಿ ಚೇತನಾ ರಾಜ್ ಕನ್ನಡದ ಕಿರುತೆರೆ ಧಾರವಾಹಿಗಳಲ್ಲಿ ಸಕ್ರಿಯವಾಗಿದ್ದರು. ಅದರಲ್ಲೂ 'ಗೀತಾ', 'ದೊರೆಸಾನಿ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಈ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದಿಷ್ಟೇ ಅಲ್ಲದೆ ಇನ್ನು ರಿಲೀಸ್ ಆಗದ ಸಿನಿಮಾವೊಂದರಲ್ಲೂ ಚೇತನಾ ರಾಜ್ ನಟಿಸಿದ್ದರು. ಸದ್ಯ ಅವರು ಬದುಕಿದ್ದಾಗ ಮಾಡಿದ್ದ ರೀಲ್ಸ್ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವಿಡಿಯೊ ನೋಡಿದ ನೆಟ್ಟಿಗರು ಸಂತಾಪ ಸೂಚಿಸುತ್ತಿದ್ದಾರೆ.

More from Filmibeat

English summary
Bollywood Actress Rakhi Sawant Reaction To TV Actress Chetana Raj Dies Due To Fat Surgery.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X