Raveena Tandon : ನನ್ನ ಮಕ್ಕಳಿಗೆ ಯಶ್ ಅಂದ್ರೆ ತುಂಬಾ ಇಷ್ಟ ಎಂದ ಬಾಲಿವುಡ್ ನಟಿ ರವೀನಾ ಟಂಡನ್
ಬಹು ನಿರೀಕ್ಷಿತ 'ಕೆಜಿಎಫ್ ಚಾಪ್ಟರ್ 2' ಟ್ರೈಲರ್ ಇಂದು ರಿಲೀಸ್ ಆಗಿದೆ. ಚಿತ್ರತಂಡ ಹೇಳಿಕೊಂಡಂತೆ ಸರಿಯಾಗಿ 6.40ಕ್ಕೆ ರಿಲೀಸ್ ಆಗಿದ್ದು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ರಿಲೀಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಸೇರಿದಂತೆ ಚಿತ್ರರಂಗದ ಹಲವರು ಭಾಗಿ ಆಗಿದ್ರು. ಟ್ರೈಲರ್ ಬಗ್ಗೆ ಒಬ್ಬೊಬ್ಬರೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಟ್ರೈಲರ್ ಬಗ್ಗೆ ಮಾತನಾಡಲು ಸ್ವತಃ ರವೀನಾ ಟಂಡನ್ ಉತ್ಸುಕರಾಗಿದ್ದರು.
ಟ್ರೈಲರ್ ರಿಲೀಸ್ ಬಳಿಕ ಮಾತನಾಡಿದ ರವೀನಾ ಟಂಡನ್, ಈ ಸಿನಿಮಾಗೆ ನನ್ನನ್ನು ಕಾಸ್ಟ್ ಮಾಡಿದ್ದಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಟ್ರೈಲರ್ ತುಂಬ ಅದ್ಭುತವಾಗಿ ಮೂಡಿ ಬಂದಿದೆ. "ಪ್ರಶಾಂತ್ ನೀಲ್ ಡೈರೆಕ್ಷನ್‌ನಲ್ಲಿ ಕೆಲಸ ಮಾಡಲು ಭಯ ಆಗ್ತಿತ್ತು. ಆಮೇಲೆ ಅಮೇಲೆ ತುಂಬ ಎಡ್ಜೆಸ್ಟ್ ಆಗಿ ಬಿಟ್ರು. ನನ್ನ ಮುಂಬೈ ಫ್ರೆಂಡ್ಸ್‌ಗೆ ಪ್ರಶಾಂತ್ ನೀಲ್ ಅವರನ್ನು ಇಮಿಟೆಟ್ ಮಾಡಿ ತೋರಿಸುತ್ತಿದ್ದೆ. ತುಂಬ ಖುಷಿ ಆಗುತ್ತೆ ಅವರೊಂದಿಗೆ ಕೆಲಸ ಮಾಡಿದ್ದೀನಿ ಅನ್ನೋಕೆ" ಎಂದಿದ್ದಾರೆ.

Recommended Video

"ಯಶ್ ನಿಮಗೂ ಧನ್ಯವಾದ, ನೀವು ತುಂಬ ಅದ್ಭುತ ವ್ಯಕ್ತಿ. ನಿಮಗೆ ನಾನು ಫ್ಯಾನ್ ಹಾಗೇ ನನ್ನ ಮಕ್ಕಳಿಗೆ ನೀವು ಅಂದರೆ ತುಂಬ ಇಷ್ಟ . ಹೀಗಾಗಿ ನಿಮ್ಮೊಂದಿಗೆ ಕೆಲಸ ಮಾಡಿದ್ದೀನಿ ಅನ್ನೋಕೆ ಖುಷಿ ಆಗುತ್ತಿದೆ" ಎಂದಿದ್ದಾರೆ. ಇನ್ನುಳಿದಂತೆ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿರುವ ಅವರು ಸಿನಿಮಾಟೋಗ್ರಾಫರ್ ಭುವನ್ ಅವರಿಗೆ "ನಮ್ಮನ್ನೆಲ್ಲ ಇಷ್ಟು ಸುಂದರವಾಗಿ ಸೆರೆಹಿಡಿದಿರೋದಕ್ಕೆ ಧನ್ಯವಾದಗಳು ಎಂದಿದ್ದಾರೆ. ಹಾಗೇ ಭುವನ್ ಅವರಿಗೆ ನೆರೆದಿದ್ದ ಎಲ್ಲಾರಿಂದಲೂ ಚಪ್ಪಾಳೆ ಹೊಡೆಸಿದ್ದಾರೆ.


Click it and Unblock the Notifications











