'ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿರುತ್ತೇನೆ' ವಿವಾದ ಸೃಷ್ಟಿಸಿದ ಅಲಿಯಾ ತಾಯಿ ಹೇಳಿಕೆ

ಬಾಲಿವುಡ್ ನ ಸ್ಟಾರ್ ನಟಿ ಅಲಿಯಾ ಭಟ್ ತಾಯಿ ಸೋನಿ ರಸ್ದಾನ್ ಹೇಳಿಕೆ ವಿವಾದ ಸೃಷ್ಟಿ ಮಾಡಿದೆ. ಇಂದು 63ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೋನಿ ರಸ್ದಾನ್ ಭಾರತಕ್ಕಿಂತ ಪಾಕಿಸ್ತಾನದಲ್ಲಿಯೆ ಸಂತೋಷವಾಗಿರುತ್ತೇನೆ ಎಂದು ಹೇಳುವ ಮೂಲಕ ಹುಟ್ಟುಹಬ್ಬದ ದಿನ ವಿವಾದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಖಾಸಗಿ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೋನಿ "ಕಾಶ್ಮೀರದ ಬಗ್ಗೆ ಏನೇ ಮಾತನಾಡಿದರು ವಿವಾದವಾಗುತ್ತೆ. ಕಾಶ್ಮೀರದಲ್ಲಿ ಸಾಂಸ್ಕೃತಿಕ ಅಸಮತೋಲನದ ಬಗ್ಗೆ ಮತ್ತು ಭಾರತ ಪಾಕಿಸ್ತಾನದ ಹಾದಿಯಲ್ಲಿ ಹೋಗಬಾರದು" ಎಂದು ಹೇಳಿದ್ದಾರೆ.

ಇನ್ನು ಮಾತು ಮುಂದು ವರೆಸಿದ ಸೋನಿ "ಕಾಶ್ಮೀರದ ಬಗ್ಗೆ ಮಾತನಾಡಿದ್ದಕ್ಕೆ ನನಗೆ ದೇಶ ದ್ರೋಹದ ಪಟ್ಟ ಕಟ್ಟುತ್ತಾರೆ. ಪಾಕಿಸ್ತಾನಕ್ಕೆ ಕಳುಹಿಸಿ ಎಂದು ಹೇಳುತ್ತಾರೆ. ಇದೆಲ್ಲದಕ್ಕಿಂದ ನಾನು ಪಾಕಿಸ್ತಾನಕ್ಕೆ ಹೋಗುವುದೆ ಉತ್ತಮ ಎನಿಸುತ್ತೆ. ಭಾರತಕ್ಕಿಂತ ಪಾಕಿಸ್ತಾನದಲ್ಲಿ ಸಂತೋಷವಾಗಿ ಇರಬಹುದು. ಅಲ್ಲಿ ಊಟ ಕೂಡ ಚೆನ್ನಾಗಿ ಇರುತ್ತೆ" ಎಂದು ಹೇಳಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

Bollywood actress Soni Razdan Statement About Pakistan For Creates Controversy

"ಜನರು ನನ್ನನ್ನು ಇಲ್ಲಿಂದ ಓಡಿಸಲು ನೋಡುತ್ತಿದ್ದಾರೆ. ನೀನು ಪಾಕಿಸ್ತಾನಕ್ಕೆ ಹೋಗು ಅಂತ ಅನೇಕರು ನನಗೆ ಹೇಳಿದ್ದಾರೆ. ಆದರೆ ನನ್ನಂತಹ ಅಭಿಪ್ರಾಯ ಅನೇಕರಲ್ಲಿ ಇದೆ. ಟೀಕಾಕಾರರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿರುವ ಸೋನಿ ರಸ್ದಾಲ್ ಮಾತುಗಳು ಚರ್ಚೆಗೆ ಕಾಣರವಾಗಿದೆ. ಸೋನಿ ರಸ್ದಾಲ್ ಹೇಳಿಕೆಯನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಸೋನಿ ರಸ್ದಾನ್ ಕೊನೆಯದಾಗಿ 'ವಾರ್' ಸಿನಿಮಾದಲ್ಲಿ ಮಿಂಚಿದ್ದಾರೆ.

More from Filmibeat

English summary
Bollywood actress Alia Bhatt mother Soni Razdan statement about Pakistan for creates controversy.
Read more about: alia bhatt bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X