»   » ಸನ್ನಿ ಲಿಯೋನ್- ಗುರುಕಿರಣ್ ಮಧ್ಯೆ ಇದೆಂತಹ ಜುಗಲ್ ಬಂದಿ.?

ಸನ್ನಿ ಲಿಯೋನ್- ಗುರುಕಿರಣ್ ಮಧ್ಯೆ ಇದೆಂತಹ ಜುಗಲ್ ಬಂದಿ.?

Posted By:
Subscribe to Filmibeat Kannada

ಮನರಂಜನಾ ಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿರುವ ಕೆ.ಬಿ.ಜಿ. ಇವೆಂಟ್ ಮ್ಯಾನೇಜ್ ಮೆಂಟ್ ಕಂಪನಿಯವರು ಸನ್ನಿ ಲಿಯೋನ್ ಅಭಿಮಾನಿಗಳಿಗೋಸ್ಕರ ಹಾಟ್ ಬೆಡಗಿಯನ್ನು ಮತ್ತೊಮ್ಮೆ ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

ಈ ಹಿಂದೆ 2 ಬಾರಿ ಆಕೆ ಸಿನಿಮಾಗಳಲ್ಲಿ ನಟಿಸಲು ಬೆಂಗಳೂರಿಗೆ ಬಂದಿದ್ದರೂ ಕೂಡ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ನಟಿ ಸನ್ನಿ ಲಿಯೋನ್ ಅವರು ಸಾರ್ವಜನಿಕ ಮನರಂಜನಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಗೂಗಲ್ ಸರ್ಚ್'ನಲ್ಲೂ ಸನ್ನಿ-ಸಲ್ಲುದೇ ದರ್ಬಾರ್]

Bollywood Actress Sunny Leone dance for Guru Kiran's song

ಅಂದಹಾಗೆ ಕೆ.ಬಿ.ಜಿ ಸಂಸ್ಥೆಯು ಚಲನಚಿತ್ರ ಸಂಗೀತ ಹಾಗೂ ನೃತ್ಯ ಪ್ರೇಮಿಗಳಿಗಾಗಿ ಇದೇ ಜುಲೈ 24ರ, ಭಾನುವಾರದಂದು "ಕೆ.ಬಿ.ಜಿ. ಅರ್ಬನ್ ಶೋ" ಎಂಬ ಸಂಗೀತ ನೃತ್ಯಗಾಯನ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಕಲರ್ ಫುಲ್ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್‍ ನ ಹಲವಾರು ಸ್ಟಾರ್ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಸಮೀಪದ 'ಮ್ಯಾನ್ ಪೊ ಕನ್‍ವೆನ್ ಷನ್ ಸೆಂಟರ್'(ಮಾನ್ಯತಾ ಟೆಕ್‍ ಪಾರ್ಕ್ ಬಳಿ) ನಲ್ಲಿ ಈ ಅದ್ದೂರಿ ಕಾರ್ಯಕ್ರಮ ನಡೆಯಲಿದೆ.[ಉದ್ಯಾನನಗರಿ ಬೆಂಗಳೂರನ್ನು ಮನಸಾರೆ ಹೊಗಳಿದ ಸನ್ನಿ ಲಿಯೋನ್]

Bollywood Actress Sunny Leone dance for Guru Kiran's song

ಜೊತೆಗೆ ಅಂದು ಸಂಜೆ 5 ಗಂಟೆಯಿಂದ ರಾತ್ರಿ 9 ರವರೆಗೆ ಸುಮಾರು 4 ಘಂಟೆಗಳ ಕಾಲ ನಡೆಯಲಿರುವ ಈ ವರ್ಣರಂಜಿತ ಮನರಂಜನಾ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಅವರ ಸಂಗಡಿಗರಿಂದ ಕನ್ನಡ ಹಾಗೂ ಬಾಲಿವುಡ್‍ ನ ಪ್ರಖ್ಯಾತ ಚಲನಚಿತ್ರ ಗೀತೆಗಳ ಲೈವ್ ಪರ್ಫಾಮೆನ್ಸ್ ಜರುಗುತ್ತದೆ.

ವಿಶೇಷವಾಗಿ ಬಾಲಿವುಡ್‍ ನ ಹೆಸರಾಂತ ನಟಿ, ಮಾದಕ ಚೆಲುವೆ ಸನ್ನಿ ಲಿಯೋನ್ ಅವರು 'ಡಿಕೆ' ಚಿತ್ರದ ಶೇಷಮ್ಮ ಶೇಷಮ್ಮ ಎಂಬ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಲಿದ್ದಾರೆ.[ತಾಯ್ತನದ ಸುಖ ಅನುಭವಿಸಲು ಸನ್ನಿ ಲಿಯೋನ್ ಸಿದ್ಧ!]

Bollywood Actress Sunny Leone dance for Guru Kiran's song

ಇದರ ಜೊತೆಗೆ ಅಂತಾರಾಷ್ಟ್ರೀಯ ಫ್ಯಾಷನ್ ಡಿಸೈನರ್ ಆದ ಮಿ. ರಿಯಾಸ್ ಪಾಷಾ ಹಾಗೂ ಅವರ ತಂಡದಿಂದ ಫ್ಯಾಷನ್ ಶೋ ಕಾರ್ಯಕ್ರಮ ಕೂಡ ನಡೆಯಲಿದೆ. ಈ ಫ್ಯಾಷನ್ ಶೋದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಸೂಪರ್ ಮಾಡೆಲ್‍ ಗಳು ರ್ಯಾಂಪ್ ವಾಕ್ ಮಾಡಲಿದ್ದಾರೆ.[ಪಲ್ಲಕ್ಕಿ ಚಿತ್ರಕ್ಕೆ ಗುರು ಕಿರಣ್‌ ಸ್ವರಸಿಂಚನ]

Bollywood Actress Sunny Leone dance for Guru Kiran's song

ಸಂಸ್ಥೆಯ ಪರಿಚಯ: ಕೆ.ಬಿ.ಜಿ. ಇಂಟಗ್ರೇಡೆಡ್ ಇವೆಂಟ್ಸ್ ಕಂಪನಿಯು ಒಂದು ಇವೆಂಟ್ಸ್ ಆರ್ಗನೈಸೇಷನ್ ಸಂಸ್ಥೆಯಾಗಿದ್ದು ಪ್ರತೀ ವರ್ಷವೂ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಇದರಿಂದ ಬರುವ ಲಾಭಾಂಶದಲ್ಲಿ ಕೆಲ ಭಾಗವನ್ನು ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸುವ ಯೋಜನೆಯನ್ನು ಕೂಡ ಈ ಸಂಸ್ಥೆ ಹಾಕಿಕೊಂಡಿದೆ. ಇದರ ಸಲುವಾಗಿಯೇ ಈ ವರ್ಷ ಸನ್ನಿ ಲಿಯೋನ್ ಹಾಗೂ ಗುರುಕಿರಣ್ ಅವರ ಜುಗಲ್‍ಬಂದಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

Bollywood Actress Sunny Leone dance for Guru Kiran's song

ನಿಮಗೂ ಈ ಕಲರ್ ಫುಲ್ ಸಂಜೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶವಿದ್ದು, ನೆಚ್ಚಿನ ನಟಿ ಸನ್ನಿ ಲಿಯೋನ್ ಅವರನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ದೊರೆಯಲಿದೆ. ತಪ್ಪದೇ ಸಮಾರಂಭದಲ್ಲಿ ಪಾಲ್ಗೊಳ್ಳಿ.

English summary
Bollywood Actress Sunny Leone and Kannada Music director Guru Kiran to perform live in Bengaluru on July 24th. KBG Integrated Events PVT Ltd is Organizing 'Urban Show' A dance, Music and Fashion show.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more