Sunny Leone :ಮತ್ತೊಂದು ಕನ್ನಡ ಹಾಡಿಗೆ ಮಾದಕ ಸ್ಟೆಪ್ಸ್ ಹಾಕಿದ ನಟಿ ಸನ್ನಿ ಲಿಯೋನಿ!

ಬಾಲಿವುಡ್​ನ ಹಾಟ್ ಬ್ಯೂಟಿ, ಮಾದಕ ನಟಿ ಸನ್ಮಿ ಲಿಯೋನಿ‌ಗೆ ಎಲ್ಲಿಲ್ಲದ ಬೇಡಿಕೆ ಇದೆ. ಬಾಲಿವುಡ್‌ನಿಂದ ಹಿಡಿದು ಸೌತ್ ಸಿನಿಮಾಗಳಲ್ಲೂ ತನ್ನ ಮಿಂಚನ್ನು ಹರಿಸಿರುವ ಸನ್ನಿ ತನ್ನ ಮೈಮಾಟದಿಂದಲೇ ಪಡ್ಡೆಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳು ಸೇರಿದಂತೆ ಐಟಂ ಸಾಂಗ್ ಗಳಲ್ಲು ಸನ್ನಿ ಹೆಚ್ಚೆಚ್ಚು ಕಾಣಿಸಿಕೊಳ್ತಿದ್ದಾರೆ. ಕನ್ನಡದ ಐಟಂ ಸಾಂಗ್‌ನಲ್ಲು ಸೊಂಟ ಬಳುಕಿಸಿದ್ದ ಸನ್ನಿ ಲಿಯೋನಿ ಇದೀಗ ಮತ್ತೊಂದು ಕನ್ನಡ ಹಾಡಿನಲ್ಲಿ ಸೊಂಟ ಬಳುಕಿಸಿ ತೆರಳಿದ್ದಾರೆ. ಈ ಹಾಡಿನ ಚಿತ್ರೀಕರಣ ಕೂಡ ಈಗಾಗಲೇ ಮುಗಿದಿದ್ದು, ಸನ್ನಿಯ ಈ ಹಾಡು ಸಾಕಷ್ಟು ವಿಶೇಷತೆಯಿಂದ ಕೂಡಿದೆ.

ಸನ್ನಿ ಲಿಯೋನಿ​, ಪ್ರೇಮ್ ಅಭಿನಯದ ಕನ್ನಡದ 'ಡಿಕೆ' ಚಿತ್ರದಲ್ಲಿ 'ಸೇಸಮ್ಮ ಸೇಸಮ್ಮ' ಹಾಡಿನಲ್ಲಿ ಕುಣಿದಿದ್ದರು. ಇಂದ್ರಜಿತ್ ಲಂಕೇಶ್ ಅವರ 'ಲವ್ ಯು ಅಲಿಯಾ' ಚಿತ್ರದ ಹಾಡಿನಲ್ಲೂ ಸೊಂಟ ಬಳುಕಿಸಿದ್ದಾರೆ. ನಂತರ ಸನ್ನಿ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಈಗ ಸನ್ನಿ ಮತ್ತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಸನ್ನಿ ಕನ್ನಡಕ್ಕೆ ಮತ್ತೆ ಬಂದಿದ್ದು ಯಾವ ಸಿನಿಮಾಗಾಗಿ? ಹಾಡಿನ ವಿಶೇಷತೆ ಏನು? ಬನ್ನಿ ನೋಡೋಣ! ಯುವ ನಟ ಸಚಿನ್​ ಧನಪಾಲ್ ಮತ್ತು ನಟಿ ಅದಿತಿ ಪ್ರಭುದೇವ ನಟಿಸುತ್ತಿರುವ 'ಚಾಂಪಿಯನ್'​ ಸಿನಿಮಾದಲ್ಲಿ ಸನ್ನಿ ಲಿಯೋನಿ​ ಐಟಮ್​ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ಕೂಡ ಕಂಫ್ಲೀಟ್ ಆಗಿದ್ದು, ಉತ್ತರ ಕನ್ನಡ ಶೈಲಿಯಲ್ಲಿ ಈ ಹಾಡು ಮೂಡಿ ಬಂದಿದೆ.

ಈ ಚಿತ್ರ ಕ್ರೀಡೆಯ ಸುತ್ತ ಹೆಣೆದಿರುವ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಬರುವ ಐಟಂ ಸಾಂಗ್​ನಲ್ಲಿ ಸನ್ನಿ ಲಿಯೋನಿ​ ಸಖತ್​ ಆಗಿ ಹೆಜ್ಜೆ ಹಾಕಿದ್ದಾರಂತೆ. ಶಾಹುರಾಜ ಶಿಂಧೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್‌ಗೆ ಸಜ್ಜಾಗುತ್ತಿದೆ. ಸಿನಿಮಾದ ಶೂಟಿಂಗ್​ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ ಹಾಗೂ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸಚಿನ್​ ಧನಪಾಲ್‌ರ ಚೊಚ್ಚಲ ಚಿತ್ರ ಇದಾಗಿದ್ದು, ನಟಿ ಅದಿತಿ ಪ್ರಭುದೇವ ಪಾತ್ರ ಈ ಸಿನಿಮಾದಲ್ಲಿ ವಿಭಿನ್ನವಾಗಿ ಇರಲಿದೆ ಎಂದು ತಿಳಿದು ಬಂದಿದೆ. ಫಸ್ಟ್ ಲುಕ್ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಈ ಚಿತ್ರತಂಡ ಮೂಡಿಸಿದೆ.

Bollywood Actress Sunny Leone One More Kannada Item Song

'ಡಿಂಗರ್ ಬಿಲ್ಲಿ' ಎಂಬ ಸಾಹಿತ್ಯದಲ್ಲಿ ಈ ಐಟಂ ಹಾಡು ಮೂಡಿಬರಲಿದ್ದು, ಹಾಡು ಪೂರ್ತಿ ಉತ್ತರ ಕನ್ನಡ ಭಾಷೆಯಲ್ಲೆ ರೂಪುಗೊಂಡಿದೆ. ಅಜನೀಶ್ ಲೋಕನಾಥ್ ಈ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ್ದು, ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಈ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ ಶಿವು ಬೊರಗಿ. ಅಂದಹಾಗೆ ಈ ಸಿನಿಮಾದಲ್ಲಿ ಸಚಿನ್ ಮತ್ತು ಅದಿತಿ ಪ್ರಭುದೇವ ಜೊತೆಗೆ ಚಿಕ್ಕಣ್ಣ, ಪ್ರಶಾಂತ್ ಸಿದ್ದಿ, ಹಿರಿಯ ನಟರಾದ ದೇವರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

Bollywood Actress Sunny Leone One More Kannada Item Song

ಈ ಹಿಂದೆ ಸನ್ನಿ ಕನ್ನಡದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಮೋಹನ್ ಹಾಸನ್ ಎಂಬುವರ ನಿರ್ದೇಶನದ 'ನಿನ್ನದೇ ಹೆಜ್ಜೆ.ಕಾಂ' ಸಿನಿಮಾದಲ್ಲಿ ಸನ್ನಿ ಲಿಯೋನಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಚಿತ್ರದ ಚಿತ್ರೀಕರಣ ಯಾವಾಗ ಶುರು? ಚಿತ್ರದ ಕಥೆ ಏನು? ಎಂಬ ಬಗ್ಗೆಯೆಲ್ಲ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಆದರೆ ಈ ಸುದ್ದಿ ಬಂದಷ್ಟೇ ವೇಗವಾಗಿ ಮಾಯವಾಗಿತ್ತು.

More from Filmibeat

English summary
Bollywood actress Sunny Leone one more Kannada item song. Here is song details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X