Don't Miss!
- News
ಮಹಾರಾಷ್ಟ್ರ ಬಿಜೆಪಿಯೊಳಗೆ ಗುರುತರ ಬದಲಾವಣೆ ಸಾಧ್ಯತೆ; ಫಡ್ನವಿಸ್ ಕೈ ಕಟ್ಟಿಹಾಕುವ ಯೋಜನೆ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
Sunny Leone :ಮತ್ತೊಂದು ಕನ್ನಡ ಹಾಡಿಗೆ ಮಾದಕ ಸ್ಟೆಪ್ಸ್ ಹಾಕಿದ ನಟಿ ಸನ್ನಿ ಲಿಯೋನಿ!
ಬಾಲಿವುಡ್ನ ಹಾಟ್ ಬ್ಯೂಟಿ, ಮಾದಕ ನಟಿ ಸನ್ಮಿ ಲಿಯೋನಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಬಾಲಿವುಡ್ನಿಂದ ಹಿಡಿದು ಸೌತ್ ಸಿನಿಮಾಗಳಲ್ಲೂ ತನ್ನ ಮಿಂಚನ್ನು ಹರಿಸಿರುವ ಸನ್ನಿ ತನ್ನ ಮೈಮಾಟದಿಂದಲೇ ಪಡ್ಡೆಗಳ ಮನಸ್ಸಿಗೆ ಲಗ್ಗೆ ಇಟ್ಟಿದ್ದಾರೆ. ಬಾಲಿವುಡ್ ಸಿನಿಮಾಗಳು ಸೇರಿದಂತೆ ಐಟಂ ಸಾಂಗ್ ಗಳಲ್ಲು ಸನ್ನಿ ಹೆಚ್ಚೆಚ್ಚು ಕಾಣಿಸಿಕೊಳ್ತಿದ್ದಾರೆ. ಕನ್ನಡದ ಐಟಂ ಸಾಂಗ್ನಲ್ಲು ಸೊಂಟ ಬಳುಕಿಸಿದ್ದ ಸನ್ನಿ ಲಿಯೋನಿ ಇದೀಗ ಮತ್ತೊಂದು ಕನ್ನಡ ಹಾಡಿನಲ್ಲಿ ಸೊಂಟ ಬಳುಕಿಸಿ ತೆರಳಿದ್ದಾರೆ. ಈ ಹಾಡಿನ ಚಿತ್ರೀಕರಣ ಕೂಡ ಈಗಾಗಲೇ ಮುಗಿದಿದ್ದು, ಸನ್ನಿಯ ಈ ಹಾಡು ಸಾಕಷ್ಟು ವಿಶೇಷತೆಯಿಂದ ಕೂಡಿದೆ.
ಸನ್ನಿ ಲಿಯೋನಿ, ಪ್ರೇಮ್ ಅಭಿನಯದ ಕನ್ನಡದ 'ಡಿಕೆ' ಚಿತ್ರದಲ್ಲಿ 'ಸೇಸಮ್ಮ ಸೇಸಮ್ಮ' ಹಾಡಿನಲ್ಲಿ ಕುಣಿದಿದ್ದರು. ಇಂದ್ರಜಿತ್ ಲಂಕೇಶ್ ಅವರ 'ಲವ್ ಯು ಅಲಿಯಾ' ಚಿತ್ರದ ಹಾಡಿನಲ್ಲೂ ಸೊಂಟ ಬಳುಕಿಸಿದ್ದಾರೆ. ನಂತರ ಸನ್ನಿ ಕನ್ನಡದಲ್ಲಿ ಕಾಣಿಸಿಕೊಂಡಿಲ್ಲ. ಈಗ ಸನ್ನಿ ಮತ್ತೆ ಕನ್ನಡದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಷ್ಟಕ್ಕೂ ಸನ್ನಿ ಕನ್ನಡಕ್ಕೆ ಮತ್ತೆ ಬಂದಿದ್ದು ಯಾವ ಸಿನಿಮಾಗಾಗಿ? ಹಾಡಿನ ವಿಶೇಷತೆ ಏನು? ಬನ್ನಿ ನೋಡೋಣ! ಯುವ ನಟ ಸಚಿನ್ ಧನಪಾಲ್ ಮತ್ತು ನಟಿ ಅದಿತಿ ಪ್ರಭುದೇವ ನಟಿಸುತ್ತಿರುವ 'ಚಾಂಪಿಯನ್' ಸಿನಿಮಾದಲ್ಲಿ ಸನ್ನಿ ಲಿಯೋನಿ ಐಟಮ್ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ಕೂಡ ಕಂಫ್ಲೀಟ್ ಆಗಿದ್ದು, ಉತ್ತರ ಕನ್ನಡ ಶೈಲಿಯಲ್ಲಿ ಈ ಹಾಡು ಮೂಡಿ ಬಂದಿದೆ.
Alia
Ranbeer
Marriage:
ಬ್ಯಾಚುಲರ್
ಪಾರ್ಟಿಯಲ್ಲೂ
ಆಡಂಬರಕ್ಕೆ
ಆಲಿಯಾ-ರಣ್ಬೀರ್
ಬ್ರೇಕ್!
ಈ ಚಿತ್ರ ಕ್ರೀಡೆಯ ಸುತ್ತ ಹೆಣೆದಿರುವ ಸಿನಿಮಾವಾಗಿದ್ದು, ಈ ಸಿನಿಮಾದಲ್ಲಿ ಬರುವ ಐಟಂ ಸಾಂಗ್ನಲ್ಲಿ ಸನ್ನಿ ಲಿಯೋನಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರಂತೆ. ಶಾಹುರಾಜ ಶಿಂಧೆ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ಗೆ ಸಜ್ಜಾಗುತ್ತಿದೆ. ಸಿನಿಮಾದ ಶೂಟಿಂಗ್ ಈಗಾಗಲೇ ಬಹುತೇಕ ಪೂರ್ಣಗೊಂಡಿದೆ ಹಾಗೂ ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸಚಿನ್ ಧನಪಾಲ್ರ ಚೊಚ್ಚಲ ಚಿತ್ರ ಇದಾಗಿದ್ದು, ನಟಿ ಅದಿತಿ ಪ್ರಭುದೇವ ಪಾತ್ರ ಈ ಸಿನಿಮಾದಲ್ಲಿ ವಿಭಿನ್ನವಾಗಿ ಇರಲಿದೆ ಎಂದು ತಿಳಿದು ಬಂದಿದೆ. ಫಸ್ಟ್ ಲುಕ್ ಟೀಸರ್ ಮೂಲಕವೇ ಸಾಕಷ್ಟು ನಿರೀಕ್ಷೆಯನ್ನು ಈ ಚಿತ್ರತಂಡ ಮೂಡಿಸಿದೆ.
'ಡಿಂಗರ್ ಬಿಲ್ಲಿ' ಎಂಬ ಸಾಹಿತ್ಯದಲ್ಲಿ ಈ ಐಟಂ ಹಾಡು ಮೂಡಿಬರಲಿದ್ದು, ಹಾಡು ಪೂರ್ತಿ ಉತ್ತರ ಕನ್ನಡ ಭಾಷೆಯಲ್ಲೆ ರೂಪುಗೊಂಡಿದೆ. ಅಜನೀಶ್ ಲೋಕನಾಥ್ ಈ ಸಿನಿಮಾದ ಸಂಗೀತ ಸಂಯೋಜನೆ ಮಾಡಿದ್ದು, ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಈ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ ಶಿವು ಬೊರಗಿ. ಅಂದಹಾಗೆ ಈ ಸಿನಿಮಾದಲ್ಲಿ ಸಚಿನ್ ಮತ್ತು ಅದಿತಿ ಪ್ರಭುದೇವ ಜೊತೆಗೆ ಚಿಕ್ಕಣ್ಣ, ಪ್ರಶಾಂತ್ ಸಿದ್ದಿ, ಹಿರಿಯ ನಟರಾದ ದೇವರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

ಈ ಹಿಂದೆ ಸನ್ನಿ ಕನ್ನಡದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಮೋಹನ್ ಹಾಸನ್ ಎಂಬುವರ ನಿರ್ದೇಶನದ 'ನಿನ್ನದೇ ಹೆಜ್ಜೆ.ಕಾಂ' ಸಿನಿಮಾದಲ್ಲಿ ಸನ್ನಿ ಲಿಯೋನಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಚಿತ್ರದ ಚಿತ್ರೀಕರಣ ಯಾವಾಗ ಶುರು? ಚಿತ್ರದ ಕಥೆ ಏನು? ಎಂಬ ಬಗ್ಗೆಯೆಲ್ಲ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಆದರೆ ಈ ಸುದ್ದಿ ಬಂದಷ್ಟೇ ವೇಗವಾಗಿ ಮಾಯವಾಗಿತ್ತು.