ಇರ್ಫಾನ್ ಖಾನ್ ಆರೋಗ್ಯ ಚೇತರಿಕೆಗಾಗಿ ದೇವರಲ್ಲಿ ಬೇಡಿಕೆ
ಸಿನಿಮಾರಂಗದಲ್ಲಿ ಸಾಕಷ್ಟು ನಟ, ನಟಿಯರು ಬರುತ್ತಾರೆ ಹೋಗುತ್ತಾರೆ. ಆದರೆ ಕೆಲವು ಮಂದಿ ಮಾತ್ರ ಸದಾ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನ ಮಾಡುತ್ತಾರೆ. ಎಲ್ಲರ ಮಧ್ಯೆ ವಿಭಿನ್ನ ಎನ್ನುವಂತೆ ಗುರುತಿಸಿಕೊಂಡಿರುವ ಬಾಲಿವುಡ್ ನಟ ಇರ್ಫಾನ್ ಖಾನ್.
ಕೇವಲ ಬಾಲಿವುಡ್ ಸಿನಿಮಾರಂಗ ಮಾತ್ರವಲ್ಲದೆ ಹಾಲಿವುಡ್, ಬ್ರಿಟೀಷ್, ಬೆಂಗಾಲಿ, ಅಮೇರಿಕನ್, ತೆಲುಗು, ಹೀಗೆ ಭಾಷೆಯ ಹಂಗಿಲ್ಲದೆ ಎಲ್ಲಾ ಚಿತ್ರರಂಗದಲ್ಲಿಯೂ ಅಭಿನಯಿಸಿರುವ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.
ಈ ಆತಂಕಕಾರಿ ವಿಚಾರವನ್ನ ತಿಳಿಸಿದ ನಂತ್ರ ಇರ್ಫಾನ್ ಖಾನ್ ಅಭಿಮಾನಿಗಳಿಗೆ ಹಾಗೂ ಸಿನಿಮಾ ಕಲಾವಿದರಿಗೆ ಗಾಬರಿ ಆಗಿದೆ. ಇಷ್ಟು ದಿನಗಳ ಕಾಲ ಇರ್ಫಾನ್ ಜಾಂಡಿಸ್ ನಿಂದ ಬಳಲುತ್ತಿದ್ದಾರೆ ಎಂದು ಎಲ್ಲರು ತಿಳಿದುಕೊಂಡಿದ್ದರು. ಆದರೆ ಇತ್ತೀಚಿಗಷ್ಟೆ ಇರ್ಫಾನ್ ತಮ್ಮ ಆರೋಗ್ಯದ ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ವಿಚಾರ ತಿಳಿದ ಬಾಲಿವುಡ್ ಮಂದಿ ಇರ್ಫಾನ್ ಗಾಗಿ ದೇವರಲ್ಲಿ ಮನವಿ ಮಾಡಿದ್ದಾರೆ. ಕಲಾವಿದರು ಏನೆಂದು ಟ್ವಿಟ್ ಮಾಡಿದ್ದಾರೆ ಇಲ್ಲಿದೆ ಮಾಹಿತಿ ಮುಂದೆ ಓದಿ

ಇರ್ಫಾನ್ ಖಾನ್ ಗೆ ಅಪರೂಪದ ಕಾಯಿಲೆ
ಭಾರತೀಯ ಸಿನಿಮಾರಂಗದಲ್ಲಿ ಅದ್ಬುತ ಕಲಾವಿದನಾಗಿ ಗುರುತಿಸಿಕೊಂಡಿರುವ ನಟ ಇರ್ಫಾನ್ ಖಾನ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇರ್ಫಾನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಕಾಳಜಿ ತೋರಿದ ಬಿಟೌನ್ ಮಂದಿ
ಅಪರೂಪಕ ಕಾಯಿಲೆ ಬಗ್ಗೆ ಟ್ವಿಟ್ಟರ್ ನಲ್ಲಿ ಇರ್ಫಾನ್ ಕೇಳಿಕೊಂಡ ತಕ್ಷಣ ಸಾಕಷ್ಟು ಅಭಿಮಾನಿಗಳು ಹಾಗೂ ಬಿಟೌನ್ ಕಲಾವಿದರು ಪ್ರತಿಯಾಗಿ ಟ್ವಿಟ್ ಮಾಡಿದ್ದಾರೆ ನಟ ಅಭಿಷೇಕ್ ಬಚ್ಚನ್ ಆದಷ್ಟು ಬೇಗ ಗುಣಮುಖರಾಗಿ ಎಂದಿದ್ದಾರೆ.

ದೇವರಲ್ಲಿ ಮನವಿ ಮಾಡಿದ ದುಲ್ಕರ್
ಟ್ವಿಟ್ಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ದುಲ್ಕರ್ ಸಲ್ಮಾನ್ "ಆದರಷ್ಟು ಬೇಗ ಈ ಕಾಲ ಕಳೆದು ಹೋಗಲಿ, ನೀವು ಬೇಗ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ" ಎಂದಿದ್ದಾರೆ.

ಅಪರೂಪದದ ಕಾಯಿಲೆ ಎಂದರೇನು?
ಅಪರೂಪದ ಕಾಯಿಲೆಗಳನ್ನ ಪತ್ತೆ ಹಚ್ಚಲಿಕ್ಕೆ ಸಾಕಷ್ಟು ದಿನಗಳು ಬೇಕಾಗುತ್ತದೆ. ಕೆಲವುಗಳಿಗೆ ಚಿಕಿತ್ಸೆ ಇದ್ದರೆ ಇನ್ನು ಕೆಲವುಗಳಿಗೆ ಚಿಕಿತ್ಸೆ ಸಿಗದೆ ಪರದಾಡಬೇಕಿದೆ. ಆದರೆ ಇರ್ಫಾನ್ ಖಾನ್ ಅವರಿಗೆ ಬಂದಿರುವ ಅಪರೂಪದ ಕಾಯಿಲೆ ಯಾವುದು ಎಂಬುವುದು ಇನ್ನೂ ತಿಳಿಯಬೇಕಾಗಿದೆ.


Click it and Unblock the Notifications











