twitter
    For Quick Alerts
    ALLOW NOTIFICATIONS  
    For Daily Alerts

    ಟ್ವಿಟ್ಟರ್ ಗೆ ಟಾಟಾ ಹೇಳಿದ ಸೆಲೆಬ್ರಿಟಿಗಳು ಮತ್ತೆ ಅದಕ್ಕೆ ಅಂಟಿಕೊಳ್ಳುವುದೇಕೆ?

    By Naveen
    |

    ಟ್ವಿಟ್ಟರ್ ನ ಮೂಲಕ ಅನೇಕ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಆದರೆ, ಟ್ವಿಟ್ಟರ್ ಕಿರಿಕಿರಿ ಎನಿಸಿದಾಗ ಇದೇ ಸೆಲೆಬ್ರೆಟಿಗಳು ಅದರಿಂದ ದೂರ ಇರುವ ನಿರ್ಧಾರ ಮಾಡುತ್ತಾರೆ.

    ಬಾಲಿವುಡ್ ನ ಅನೇಕ ನಟರು, ನಿರ್ದೇಶಕರು ಟ್ವಿಟ್ಟರ್ ನಿಂದ ಆದ ಹಿಂಸೆಗೆ ಅದರಿಂದ ದೂರ ಉಳಿದಿದ್ದರು. ಶಾರೂಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಸಹ ಒಂದು ಕಾಲದಲ್ಲಿ ಟ್ವಿಟ್ಟರ್ ಸಹವಾಸ ಬೇಡ ಎಂದು ಅಂದುಕೊಂಡಿದ್ದವರೇ.[ಟ್ವಿಟ್ಟರ್ ಲೋಕಕ್ಕೆ ದಿಢೀರ್ ಗುಡ್ ಬೈ ಹೇಳಿದ ರಾಮ್ ಗೋಪಾಲ್ ವರ್ಮಾ.! ]

    ಲೇಟೆಸ್ಟ್ ಆಗಿ ಈಗ ನಿರ್ದೇಶಕ ರಾಮ್ ಗೋಪಾಲ್ ವರ್ಮ ಮತ್ತು ಗಾಯಕ ಸೋನು ನಿಗಮ್ ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದಾರೆ. ಈ ರೀತಿ ಟ್ವಿಟ್ಟರ್ ಬೇಡ ಎಂದಿದ್ದ ಬಹುತೇಕ ಸ್ಟಾರ್ ಗಳು ಮತ್ತೆ ಅದಕ್ಕೆ ಅಂಟಿಕೊಂಡಿರುವ ಉದಾಹರಣೆಗಳು ಇದೆ. ಹಾಗಾದ್ರೆ, ಯಾರೆಲ್ಲಾ ತಾರೆಯರು ಟ್ವಿಟ್ಟರ್ ಗೆ ಗುಡ್ ಬೈ ಹೇಳಿದ್ದರು ಎಂಬುದು ಮುಂದೆ ಓದಿ....[ವಿವಾದ ಹುಟ್ಟುಹಾಕಿದ ಗಾಯಕ ಸೋನು ನಿಗಮ್ ಟ್ವೀಟ್!]

    ವರ್ಮ ನಿರ್ಗಮನ

    ವರ್ಮ ನಿರ್ಗಮನ

    ರಾಮ್ ಗೋಪಾಲ್ ವರ್ಮ ಟ್ವಿಟ್ಟರ್ ಪ್ರಪಂಚದಿಂದ ಹೊರಗೆ ಹೋಗಿದ್ದಾರೆ. ಈ ವಿಷಯವನ್ನು ಸ್ವತಃ ವರ್ಮಾ ಟ್ವೀಟ್ ಮಾಡಿ, ತಮ್ಮ ಫಾಲೋವರ್ಸ್ ಗೆ ತಿಳಿಸಿದ್ದಾರೆ.

    ಸೋನು ನಿಗಮ್

    ಸೋನು ನಿಗಮ್

    ಮುಸ್ಲಿಂ ಸಂಪ್ರದಾಯದ ಬಗ್ಗೆ ಟ್ವೀಟ್ ಮಾಡಿ ದೊಡ್ಡ ವಿವಾದ ಮಾಡಿಕೊಂಡಿದ್ದ ಗಾಯಕ ಸೋನು ನಿಗಮ್ ಸಹ ಇತ್ತೀಚೆಗಷ್ಟೆ ಟ್ವಿಟ್ಟರ್ ಗೆ ವಿದಾಯ ಹೇಳಿದ್ದರು.

    ಶಾರೂಖ್ ಖಾನ್

    ಶಾರೂಖ್ ಖಾನ್

    2013 ರಲ್ಲಿ ಶಾರೂಖ್ ಖಾನ್ ಅವರ ಒಂದು ಕಾಮೆಂಟ್ ಗೆ ಟ್ವಿಟ್ಟರ್ ನಲ್ಲಿ ವ್ಯಾಪಕ ಟೀಕೆಗಳು ಬಂದಿತ್ತು. ಆಗ ಶಾರೂಖ್ ಖಾನ್ ಟ್ವಿಟ್ಟರ್ ನಿಂದ ಕೆಲ ಕಾಲ ಹೊರಗೆ ಬಂದಿದ್ದರು. ಆದ್ರೆ, ಮತ್ತೆ ಟ್ವಿಟ್ಟರ್ ನಲ್ಲಿ ಖಾನ್ ಸಕ್ರೀಯರಾದರು.

    ಸಲ್ಮಾನ್ ಖಾನ್

    ಸಲ್ಮಾನ್ ಖಾನ್

    ಟ್ವಿಟ್ಟರ್ ನಲ್ಲಿ ಆಗುತ್ತಿದ್ದ ಟ್ರೋಲ್ ಗಳನ್ನು ನೋಡಿ ಸಲ್ಮಾನ್ ಕೂಡ ಟ್ವಿಟ್ಟರ್ ನಿಂದ ತಾವೇ ಹೊರ ಬಂದಿದ್ದರು. ಆದರೆ ಸಲ್ಲು ಸಹ ಅದನ್ನು ಬಹು ದಿನ ಬಿಟ್ಟಿರುವುದಕ್ಕೆ ಆಗಲಿಲ್ಲ.

    ಅಮೀರ್ ಖಾನ್

    ಅಮೀರ್ ಖಾನ್

    ಅಸಹಿಷ್ಣತೆ ಬಗ್ಗೆ ಮಾತನಾಡಿ ದೊಡ್ಡ ವಿವಾದ ಸೃಷ್ಟಿ ಮಾಡಿದ್ದ ನಟ ಅಮೀರ್ ಖಾನ್ ಆ ವೇಳೆ ತಮ್ಮ ಟ್ವಿಟ್ಟರ್ ಅಕೌಂಟ್ ಕ್ಲೋಸ್ ಮಾಡಿದ್ದರು. ಬಳಿಕ ಸಿನಿಮಾಗಳ ಪ್ರಚಾರಕ್ಕಾಗಿ ಮತ್ತೆ ಟ್ವಿಟ್ಟರ್ ಮೊರೆ ಹೋದರು.

    ಸುಶಾಂತ್ ಸಿಂಗ್ ರಜಪೂತ್

    ಸುಶಾಂತ್ ಸಿಂಗ್ ರಜಪೂತ್

    ಸುಶಾಂತ್ ಸಿಂಗ್ ರಜಪೂತ್ ತಮ್ಮ ಮಾಜಿ ಪ್ರೇಯಸಿ ಅಂಕಿತ ಲೋಖಂಡೆ ನಡುವೆ ಬ್ರೇಕ್ ಅಪ್ ಆದಾಗ ಟ್ವಿಟ್ಟರ್ ನಲ್ಲಿ ಬಂದ ಟೀಕೆಗಳಿಂದ ನೊಂದಿದ್ದರು. ಆಗ ಟ್ವಿಟ್ಟರ್ ಸಹವಾಸ ಬೇಡ ಅಂತ ನಿರ್ಧಾರ ಮಾಡಿದ್ದರು. ಆದ್ರೀಗ, ಸುಶಾಂತ್ ಕೂಡ ಮತ್ತೆ ಟ್ವಿಟ್ಟರ್ ನಲ್ಲಿ ತೊಡಗಿಸಿಕೊಂಡಿದ್ದಾರೆ.

    ರಿಷಿ ಕಪೂರ್

    ರಿಷಿ ಕಪೂರ್

    ಹಿರಿಯ ನಟ ರಿಷಿ ಕಪೂರ್ ತಮ್ಮ ಕೆಲ ವಿಡಂಬನಾತ್ಮಕ ಟ್ವೀಟ್ ಗಳ ಮೂಲಕ ಕೇಂದ್ರಬಿಂದು ಆಗಿದ್ದರು. ಆಗ ಕೆಲ ಕಾಲ ಟ್ವಿಟ್ಟರ್ ನಿಂದ ಮಾಯಾವಾಗಿದ್ದ ರಿಷಿ ಕಪೂರ್ ಮತ್ತೆ ಹೊಸ ಖಾತೆ ತೆರೆದರು.

    ಅನುರಾಗ್ ಕಶ್ಯಪ್

    ಅನುರಾಗ್ ಕಶ್ಯಪ್

    ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ 'ಲಂಚ್ ಬಾಕ್ಸ್' ಸಿನಿಮಾಗೆ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಆಸ್ಕರ್ ಪ್ರಶಸ್ತಿ ಆಯ್ಕೆ ಕಮಿಟಿ ವಿರುದ್ಧ ಟ್ವೀಟ್ ಮಾಡಿ ಬಳಿಕ ಟ್ವಿಟ್ಟರ್ ಗೆ ಬೈ ಹೇಳಿದ್ದರು. ಈಗ ಅನುರಾಗ್ ಕಶ್ಯಪ್ ಸಹ ತಮ್ಮ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಹೊಂದಿದ್ದಾರೆ.

    ಟ್ವಿಟ್ಟರ್ ಬೇಕೆ ಬೇಕು

    ಟ್ವಿಟ್ಟರ್ ಬೇಕೆ ಬೇಕು

    ಈ ಹಿಂದೆ ಟ್ವಿಟ್ಟರ್ ಸಹವಾಸ ಬೇಡ ಅಂತ ಹೇಳಿದ್ದ ಬಹುತೇಕ ಸೆಲೆಬ್ರಿಟಿಗಳು ಮತ್ತೆ ಟ್ವಿಟ್ಟರ್ ಕಡೆ ಮುಖ ಮಾಡಿದ್ದಾರೆ. ಇನ್ನು ಈಗ ಟ್ವಿಟ್ಟರ್ ಗೆ ಟಾಟಾ ಹೇಳಿರುವ ಸೋನು ನಿಗಮ್ ಮತ್ತು ರಾಮ್ ಗೋಪಾಲ್ ವರ್ಮ ಕೂಡ ಮತ್ತೆ ಟ್ವಿಟ್ಟರ್ ಗೆ ಬಂದರು ಆಶ್ಚರ್ಯ ಪಡಬೇಕಾಗಿಲ್ಲ.

    English summary
    Bollywood celebrities who got tired of Twitter bashing and trolling and strolled off the network.
    Monday, May 29, 2017, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X