For Quick Alerts
  ALLOW NOTIFICATIONS  
  For Daily Alerts

  ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಸಿನಿಮಾಗೆ ಕೆಜಿಎಫ್ ವಿತರಕನ ಸಾಥ್: ಮತ್ತೊಂದು ದಾಖಲೆಗೆ ರೆಡಿ!

  |

  ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿನೇಷನ್‌ ಸಿನಿಮಾ ಇನ್ನೂ ಅನೌನ್ಸ್ ಆಗಿಲ್ಲ. ಅಷ್ಟರಲ್ಲೇ ದೊಡ್ಡ ಮಟ್ಟಕ್ಕೆ ಸದ್ದು ಮಾಡುವುದಕ್ಕೆ ಶುರು ಮಾಡಿದೆ. ಕಳೆದ ಕೆಲವು ದಿನಗಳಿಂದ ಇದೇ ಸಿನಿಮಾ ಟೀಸರ್ ಲಾಂಚ್‌ ಬಗ್ಗೆ ದೊಡ್ಡ ಮಟ್ಟಕ್ಕೆ ಸೌಂಡ್ ಮಾಡಿತ್ತು.

  ಜೋಗಿ ಪ್ರೇಮ್ ಹಾಗೂ ಧ್ರುವ ಇವರಿಬ್ಬರ ಮೊದಲ ಕಾಂಬಿನೇಷನ್ ಇದು. ಇದರೊಂದಿಗೆ ಕನ್ನಡದ ಮತ್ತೊಂದು ಬಿಗ್ ಪ್ರೊಡಕ್ಷನ್ ಕಂಪನಿ ಕೆವಿನ್ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದೆ. ಈ ಬೆನ್ನಲ್ಲೇ ಚಿತ್ರತಂಡ ಸಿನಿಪ್ರಿಯರಿಗೆ ಬಂಪರ್ ಸುದ್ದಿಯೊಂದನ್ನು ನೀಡಿದೆ.

  ಮುಂಬೈನಲ್ಲಿ ಬೀಡು ಬಿಟ್ಟ ಪ್ರೇಮ್-ಅರ್ಜುನ್ ಜನ್ಯ: ದಸರಾದಂದು ಧ್ರುವ ಫ್ಯಾನ್ಸ್‌ಗೆ ಗಿಫ್ಟ್?ಮುಂಬೈನಲ್ಲಿ ಬೀಡು ಬಿಟ್ಟ ಪ್ರೇಮ್-ಅರ್ಜುನ್ ಜನ್ಯ: ದಸರಾದಂದು ಧ್ರುವ ಫ್ಯಾನ್ಸ್‌ಗೆ ಗಿಫ್ಟ್?

  ಜೋಗಿ ಪ್ರೇಮ್ 'ಏಕ್‌ ಲವ್ ಯಾ' ಸಿನಿಮಾ ಬಳಿಕ ಮತ್ತೆ ಆಕ್ಟಿವ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಆಕ್ಷನ್ ಪ್ರಿನ್ಸ್‌ಗೆ ಧ್ರುವ ಸರ್ಜಾಗೆ ಆಕ್ಷನ್ ಕಟ್ ಹೇಳುತ್ತಿದ್ದು, ಕಳೆದ ದಿನಗಳಿಂದ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಧ್ರುವ ಫ್ಯಾನ್ಸ್‌ಗೆ ಚಿತ್ರತಂಡ ಸಿಹಿ ಸುದ್ದಿಯನ್ನು ನೀಡಿದೆ.

  ಪ್ರೇಮ್-ಧ್ರುವ ಚಿತ್ರಕ್ಕೆ 'ಕೆಜಿಎಫ್' ವಿತರಕ ಸಾಥ್

  ಪ್ರೇಮ್-ಧ್ರುವ ಚಿತ್ರಕ್ಕೆ 'ಕೆಜಿಎಫ್' ವಿತರಕ ಸಾಥ್

  ಜೋಗಿ ಪ್ರೇಮ್ ಸಿನಿಮಾ ಬಿಡುಗಡೆಗೂ ಮುನ್ನ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ. ಈಗ ಧ್ರುವ ಸರ್ಜಾ ಸಿನಿಮಾ ಆರಂಭ ಆಗುವುದಕ್ಕೂ ಮುನ್ನವೇ ಸೌಂಡ್ ಮಾಡುವುದಕ್ಕೆ ಶುರು ಮಾಡಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ನಿರ್ಮಿಸುತ್ತಿರುವ ಈ ಸಿನಿಮಾ ಜೊತೆ ಬಾಲಿವುಡ್‌ನಲ್ಲಿ 'ಕೆಜಿಎಫ್' ಸಿನಿಮಾ ವಿತರಿಸಿದ್ದ ಅನಿಲ್ ತಡಾನಿ ಕೈ ಜೋಡಿಸಿದ್ದಾರೆ. ಅನಿಲ್ ತಡಾನಿಯನ್ನು ಭೇಟಿ ಮಾಡಿದ್ದ ಫೋಟೊವನ್ನು ನಿರ್ದೇಶಕ ಜೋಗಿ ಪ್ರೇಮ್ ಹಂಚಿಕೊಂಡಿದ್ದಾರೆ.

  ಧ್ರುವ ಸರ್ಜಾಗೆ ಕಷ್ಟದ ಕೆಲಸ ಕೊಟ್ಟ ಪ್ರೇಮ್; ಕನ್ನಡ ನಟರಲ್ಲಿ ಈ ಕೆಲಸ ಇದೇ ಮೊದಲುಧ್ರುವ ಸರ್ಜಾಗೆ ಕಷ್ಟದ ಕೆಲಸ ಕೊಟ್ಟ ಪ್ರೇಮ್; ಕನ್ನಡ ನಟರಲ್ಲಿ ಈ ಕೆಲಸ ಇದೇ ಮೊದಲು

  ಬಿಗ್ ಸಿನಿಮಾಗಳ ವಿತಕರ ಅನಿಲ್ ತಡಾನಿ

  ಬಿಗ್ ಸಿನಿಮಾಗಳ ವಿತಕರ ಅನಿಲ್ ತಡಾನಿ

  ಬಾಲಿವುಡ್ ವಿತರಕ ಅನಿಲ್ ತಡಾನಿ ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ವಿತರಣೆ ಮಾಡಿದ್ದಾರೆ. ರಾಜಮೌಳಿ ನಿರ್ಮಿಸಿದ್ದ 'ಬಾಹುಬಲಿ', ರಾಕಿಂಗ್‌ ಸ್ಟಾರ್ ಯಶ್ ನಟಿಸಿದ್ದ 'ಕೆಜಿಎಫ್', ಅಲ್ಲು ಅರ್ಜನ್ ಸಿನಿಮಾ 'ಪುಷ್ಪ'ವನ್ನು ಬಾಲಿವುಡ್‌ನಲ್ಲಿ ವಿತರಣೆ ಮಾಡಿದ್ದಾರೆ. ಈಗ ಕೆವಿಎನ್ ಪ್ರೊಡಕ್ಷನ್ ಜೊತೆನೂ ಕೈ ಜೋಡಿಸಿದ್ದಾರೆ. ಈ ಮೂಲಕ ಪ್ರೇಮ್ ಹಾಗೂ ಧ್ರುವ ಕಾಂಬಿನೇಷನ್‌ ಸಿನಿಮಾ ಆನೆಬಲ ಬಂದಂತಾಗಿದೆ. ಮುಂಬೈನಲ್ಲಿ ಅನಿಲ್ ತಡಾನಿಯನ್ನು ಪ್ರೇಮ್ ಹಾಗೂ ಕೆವಿಎನ್ ಸಂಸ್ಥೆಯ ಬ್ಯುಸಿನೆಸ್ ಹಾಗೂ ಆಪರೇಷನ್ ಹೆಡ್ ಸುಪ್ರಿತ್ ಭೇಟಿ ಮಾಡಿದ್ದು, ಆ ಫೋಟೊ ವೈರಲ್ ಆಗಿದೆ.

  ಟೈಟಲ್ ಟೀಸರ್ ಯಾವಾಗ?

  ಟೈಟಲ್ ಟೀಸರ್ ಯಾವಾಗ?

  ಜೋಗಿ ಪ್ರೇಮ್ ಟೈಟಲ್‌ನಿಂದಲೇ ಕುತೂಹಲವನ್ನು ಮೂಡಿಸುತ್ತಾರೆ. ಕೆಲವು ದಿನಗಳಿಂದ ಟೈಟಲ್‌ ಟೀಸರ್ ಲಾಂಚ್‌ಗಾಗಿಯೇ ಮುಂಬೈನಲ್ಲಿ ಬೀಡು ಬಿಟ್ಟಿದ್ದರು. ಸದ್ಯ ಈ ಟೈಟಲ್ ಟೀಸರ್ ಅನ್ನು ಯಾವಾಗ ರಿಲೀಸ್ ಮಾಡುತ್ತಾರೆ ಅನ್ನೋ ಕುತೂಹಲವಿತ್ತು. ಆ ಕ್ಯೂರಿಯಾಸಿಟಿಗೂ ಈಗ ತೆರೆಬಿದ್ದಿದೆ. ಸಿನಿಮಾದ ಟೈಟಲ್ ಯಾವಾಗ ರಿಲೀಸ್ ಆಗುತ್ತೆ ಅನ್ನೋದನ್ನುದಸರಾ ಹಬ್ಬ (ಅಕ್ಟೋಬರ್ 05)ದಂದು ರಿವೀಲ್ ಮಾಡುತ್ತಿದ್ದಾರೆ.

  ಯಶ್ ರಾಜ್ ಸ್ಟುಡಿಯೋದಲ್ಲಿ ಅರ್ಜುನ್ ಜನ್ಯ,ಪ್ರೇಮ್: ಪಕ್ಕದಲ್ಲಿರೋ ದಿಗ್ಗಜ ಯಾರು?ಯಶ್ ರಾಜ್ ಸ್ಟುಡಿಯೋದಲ್ಲಿ ಅರ್ಜುನ್ ಜನ್ಯ,ಪ್ರೇಮ್: ಪಕ್ಕದಲ್ಲಿರೋ ದಿಗ್ಗಜ ಯಾರು?

  ಜೋಗಿ ಪ್ರೇಮ್ ಫುಲ್ ಬ್ಯುಸಿ

  ಜೋಗಿ ಪ್ರೇಮ್ ಫುಲ್ ಬ್ಯುಸಿ

  ದೊಡ್ಡ ಮಟ್ಟದಲ್ಲಿ ಟೇಕ್ ಆಫ್ ಮಾಡುವುದಕ್ಕೆಂದೇ ಜೋಗಿ ಪ್ರೇಮ್ ಸ್ಕೆಚ್ ಹಾಕಿದಂತಿದೆ. ಅದಕ್ಕಾಗಿಯೇ ಕಳೆದ ಕೆಲವು ದಿನಗಳು ಅರ್ಜುನ್ ಜನ್ಯ ಜೊತೆ ಮುಂಬೈನಲ್ಲಿ ನೆಲೆಸಿದ್ದರು. ಹಗಲು ರಾತ್ರಿ ಎನ್ನದೆ ಪ್ರೇಮ್ ಹಾಗೂ ಅರ್ಜುನ್ ಹಿನ್ನೆಲೆ ಸಂಗೀತವನ್ನು ರೆಕಾರ್ಡ್ ಮಾಡಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಜೊತೆನೂ ಪ್ರೇಮ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು.

  English summary
  Bollywood Distributors Anil Thadani and AA Films Join Hands with Prem, Dhruva Sarja Movie, Know More.
  Friday, September 30, 2022, 14:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X