'ಕೆಜಿಎಫ್-2' ಶೂಟಿಂಗಲ್ಲಿ ಸಂಜು ಬಾಬಾ: ಅಧೀರನಿಗೆ ಟೈಟ್ ಸೆಕ್ಯೂರಿಟಿ

Recommended Video

ಮೈಸೂರಿಗೆ ಬಂದ ಸಂಜು ದಾದ..?

ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆಯ ಕೆಜಿಎಪ್ ಚಾಪ್ಟರ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳೆ ಆಗಿವೆ. ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗಿ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.

ಬಹು ನಿರೀಕ್ಷೆಯ ಕೆಜಿಎಫ್-2 ಚಿತ್ರದಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ. ಚಿತ್ರೀಕರಣ ಸೆಟ್ ಗೆ ಅಧೀರನ ಎಂಟ್ರಿಯಾಗಿದೆಯಂತೆ. ಹೌದು ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರಂತೆ. ಈಗಾಗಲೆ ರಾಕಿಭಾಯ್ ವಿರುದ್ಧ ಬಾಲಿವುಡ್ ಮುನ್ನಾಭಾಯ್ ಕಣಕ್ಕಿಳಿದ್ದಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ.

'ಕೆಜಿಎಫ್-2' ಶೂಟಿಂಗ್ ನಲ್ಲಿ ಮುನ್ನಾಭಾಯ್

'ಕೆಜಿಎಫ್-2' ಶೂಟಿಂಗ್ ನಲ್ಲಿ ಮುನ್ನಾಭಾಯ್

ಇಡೀ ಭಾರತೀಯ ಚಿತ್ರರಂಗವೆ ಕುತೂಹದಿಂದ ಕಾಯುತ್ತಿರುವ 'ಕೆಜಿಎಫ್-2' ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರದಲ್ಲಿ ಪ್ರಮುಖ ವಿಲನ್ ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿರೋದೆ. ಆದ್ರೀಗ ಸಂಜಯ್ ದತ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಮೈಸೂರಿನಲ್ಲಿ ಚಿತ್ರೀಕರಣ

ಮೈಸೂರಿನಲ್ಲಿ ಚಿತ್ರೀಕರಣ

'ಕೆಜಿಎಫ್-2' ಚಿತ್ರೀಕರಣ ಸದ್ಯ ಮೈಸೂರಿನಲ್ಲಿ ನಡೆಯುತ್ತಿದೆ. ಸಂಜಯ್ ದತ್ ಭಾಗದ ಚಿತ್ರೀಕರಣದಲ್ಲಿ ಮೈಸೂರಿನಲ್ಲಿ ಸೆರೆಹಿಡಿಯಲಿದೆ ಚಿತ್ರತಂಡ. ಈ ವಾರ ಪೂರ್ತಿ ದತ್ ಪಾತ್ರದ ಭಾಗ ಚಿತ್ರೀಕರಣ ಇರಲಿದೆಯಂತೆ. ಹಾಗಾಗಿ ಈಗಾಗಲೆ ಸಂಜಯ್ ದತ್ ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ವಾರ ಪೂರ್ತಿ ಮೈಸೂರಿನಲ್ಲಿಯೆ ಇರಲಿದ್ದಾರೆ.

ದತ್ ಗೆ ಟೈಟ್ ಸೆಕ್ಯೂರಿಟಿ

ದತ್ ಗೆ ಟೈಟ್ ಸೆಕ್ಯೂರಿಟಿ

ಸದ್ಯ ಸಂಜಯ್ ದತ್ ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ತಂಗಿದ್ದಾರೆ. ಅಲ್ಲದೆ ಸಂಜು ಬಾಬಾಗೆ ಟೈಟ್ ಸೆಕ್ಯೂರಿಟಿ ಕೂಡ ನೀಡಲಾಗಿದೆಯಂತೆ. ಸಂಜಯ್ ದತ್ ಮೈಸೂರಿಗೆ ಬಂದಿರುವ ಮಾಹಿತಿ ಗೊತ್ತಾದರೆ ಅಭಿಮಾನಿಗಳು ಮುಗಿ ಬೀಳುತ್ತಾರೆ. ಅಲ್ಲದೆ ಚಿತ್ರೀಕರಣ ಮಾಡಲು ಸಹ ಸಮಸ್ಯೆಯಾಗುತ್ತದೆ. ಸಂಜಯ್ ದತ್ ಬಗ್ಗೆ ಮಾಹಿತಿ ಹೊರಬರದಂತೆ ಚಿತ್ರತಂಡ ಗೌಪ್ಯತೆ ಕಾಪಾಡುವಂತೆ ಎಲ್ಲರಿಗೂ ಸೂಚಿಸಿದೆಯಂತೆ.

ಫಸ್ಟ್ ಲುಕ್ ಹೆಚ್ಚಿಸಿದೆ ಕುತೂಹಲ

ಫಸ್ಟ್ ಲುಕ್ ಹೆಚ್ಚಿಸಿದೆ ಕುತೂಹಲ

ಸಂಜಯ್ ದತ್ ಫಸ್ಟ್ ಲುಕ್ ನೋಡಿದ ಚಿತ್ರಾಭಿಮಾನಿಗಳು ಪಾರ್ಟ್-2 ಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಯಾವಾಗ ತೆರೆಗೆ ಬರುತ್ತೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಕ್ರೂರಿ ಅಧೀರನ ಒಂದೇ ಒಂದು ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಮುನ್ನಾಭಾಯ್ ಪಾತ್ರ ಹೇಗಿರಲಿದೆ ಎನ್ನುವುದೇ ಈಗ ಎಲ್ಲರ ಕುತೂಹಲ.

More from Filmibeat

English summary
Bollywood Famous actor Sanjay Dutt start shooting for KGF-2 in Mysore. Yash starrer KGF-2 film directed by Prashanth neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X