twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ಗೆ ಟಾಂಗ್, ಸೌತ್ ಇಂಡಸ್ಟ್ರಿಗೆ ಜೈಕಾರ ಹಾಕಿದ ಬಿಟೌನ್ ವಿಶ್ಲೇಷಕ

    |

    ಭಾರತೀಯ ಸಿನಿಮಾ ಅಂದ್ರೆ ಬರಿ ಬಾಲಿವುಡ್ ಚಿತ್ರಗಳನ್ನು ಮಾತ್ರ ಪರಿಗಣಿಸುವ ಸಂಸ್ಕೃತಿ ಇತ್ತು, ಈಗಲೂ ಇದೆ. ವಿದೇಶಗಳ ಪಾಲಿಗೆ ಶಾರೂಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಚಿತ್ರಗಳೇ ಭಾರತೀಯ ಚಿತ್ರರಂಗ. ಕೇಂದ್ರ ಸರ್ಕಾರಗಳ ಸರ್ಕಾರಿ ಕಾರ್ಯಕ್ರಮ ಆಗಲಿ ಅಥವಾ ಪ್ರಧಾನಿ ಕಚೇರಿಯ ಖಾಸಗಿ ಕಾರ್ಯಕ್ರಮವೇ ಆಗಲಿ ಬಾಲಿವುಡ್‌ ಸ್ಟಾರ್‌ಗಳಿಗೆ ಮಾತ್ರ ಮೊದಲ ಆಹ್ವಾನ.

    ಈಗ ಟ್ರೆಂಡ್ ಬದಲಾಗುತ್ತಿದೆ. ಬಾಲಿವುಡ್ ಚಿತ್ರರಂಗವನ್ನು ಸೆಡ್ಡು ಹೊಡೆದ ದಕ್ಷಿಣ ಚಿತ್ರರಂಗ ಬೆಳೆದು ನಿಂತಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಚಿತ್ರಗಳು ದೇಶ-ವಿದೇಶದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಸದ್ಯದ ಪರಿಸ್ಥಿತಿ ಮತ್ತು ಬೆಳವಣಿಗೆಯನ್ನು ಗಮನಿಸಿ ಬಾಲಿವುಡ್ ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ಬಾಲಿವುಡ್‌ಗೆ ಟಾಂಗ್ ಕೊಟ್ಟಿದ್ದಾರೆ. ಮುಂದೆ ಓದಿ....

    ನಟಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಚಿತ್ರರಂಗ: ನೀವೇನಂತೀರಿ?ನಟಿಯರನ್ನು ನಿರ್ಲಕ್ಷ್ಯ ಮಾಡುತ್ತಿರುವ ಚಿತ್ರರಂಗ: ನೀವೇನಂತೀರಿ?

    ಭಾರತೀಯ ಚಿತ್ರರಂಗಕ್ಕೆ ಪುನಶ್ಚೇತನ

    ಭಾರತೀಯ ಚಿತ್ರರಂಗಕ್ಕೆ ಪುನಶ್ಚೇತನ

    ''ಸೊರಗಿ ಹೋಗಿರುವ ಭಾರತೀಯ ಚಿತ್ರರಂಗಕ್ಕೆ ಧೈರ್ಯ, ನಂಬಿಕೆ, ಸಂಕಲ್ಪ, ವಿಶ್ವಾಸವನ್ನು ತುಂಬುವ ಮೂಲಕ ಪುನಶ್ಚೇತನ ನೀಡುತ್ತಿದೆ ಸೌತ್ ಸಿನಿಮಾ ಇಂಡಸ್ಟ್ರಿ'' ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ದಕ್ಷಿಣ ಭಾರತದ ಚಿತ್ರಗಳ ಈಗ ಬಾಲಿವುಡ್‌ ಮೀರಿಸಿ ಬೆಳೆದಿದೆ ಎಂದು ಪರೋಕ್ಷವಾಗಿ ಹಿಂದಿ ಚಿತ್ರರಂಗಕ್ಕೆ ಟಾಂಗ್ ನೀಡಿದ್ದಾರೆ.

    ಇದು ಕೇವಲ ಆರಂಭ.....

    ಇದು ಕೇವಲ ಆರಂಭ.....

    ''ಇದು ಕೇವಲ ಆರಂಭ,,,,ನನ್ನ ಈ ಮಾತನ್ನು ಬರೆದು ಇಟ್ಕೊಳ್ಳಿ'' ಎಂದು ತರಣ್ ಆದರ್ಶ್ ಹೇಳಿದ್ದಾರೆ. ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ತಯಾರಾಗುತ್ತಿರುವ ಚಿತ್ರಗಳನ್ನು ಗಮನದಲ್ಲಿಟ್ಟುಕೊಂಡು ಹಿಂದಿ ಚಿತ್ರರಂಗದ ವಿಶ್ಲೇಷಕ ಈ ಮಾತುಗಳನ್ನು ಹೇಳಿರುವುದು ಸೌತ್ ಅಭಿಮಾನಿಗಳಿಗೆ ಖುಷಿ ತಂದಿದೆ.

    ಬಾಕ್ಸ್ ಆಫೀಸ್ ಎಂದರೆ ಏನು? ಇದರ ಲೆಕ್ಕಾಚಾರ ಹೇಗೆ?ಬಾಕ್ಸ್ ಆಫೀಸ್ ಎಂದರೆ ಏನು? ಇದರ ಲೆಕ್ಕಾಚಾರ ಹೇಗೆ?

    ಟ್ರೆಂಡ್ ಬದಲಿಸಿದ ಸೌತ್ ಸಿನಿಮಾಗಳು

    ಟ್ರೆಂಡ್ ಬದಲಿಸಿದ ಸೌತ್ ಸಿನಿಮಾಗಳು

    ಭಾರತೀಯ ಚಿತ್ರರಂಗ ಅಂದ್ರೆ ಕೇವಲ ಬಾಲಿವುಡ್ ಮಾತ್ರವಲ್ಲ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳು ಸಹ ಇದೆ ಎಂದು ಜಗತ್ತಿಗೆ ಸಾರಿ ಹೇಳಿದೆ. ಸೌತ್ ಇಂಡಿಯಾ ಸಿನಿಮಾಗಳ ಈಗ ಗಡಿಯಾಚೆ ಅಬ್ಬರಿಸುತ್ತಿದೆ. ವಿಶೇಷವಾಗಿ ಹಿಂದಿ ಚಿತ್ರಗಳಿಗಿದ್ದ ಮಾರ್ಕೆಟ್ ಮೀರಿ ಬೆಳೆಯುತ್ತಿದೆ. ಸೌತ್ ಸಿನಿಮಾಗಳನ್ನು ಹಿಂದಿ ಪ್ರೇಕ್ಷಕರೇ ಎರಡು ಕೈಗಳಿಂದ ಅಪ್ಪಿಕೊಂಡು ಸ್ವಾಗತಿಸುವ ಸಮಯ ಬಂದಿದೆ.

    2021ರ ಬಹುನಿರೀಕ್ಷೆಯ ಚಿತ್ರಗಳು

    2021ರ ಬಹುನಿರೀಕ್ಷೆಯ ಚಿತ್ರಗಳು

    2021ರಲ್ಲಿ ಬಾಲಿವುಡ್‌ಗಿಂತ ಸೌತ್ ಇಂಡಸ್ಟ್ರಿ ಮೇಲೆ ಹೆಚ್ಚು ಗಮನವಿದೆ. ಯಶ್ ನಟನೆಯ ಕೆಜಿಎಫ್, ರಾಜಮೌಳಿಯ ಆರ್‌ಆರ್‌ಆರ್‌, ಅಲ್ಲು ಅರ್ಜುನ್ ಪುಷ್ಪ, ಪ್ರಭಾಸ್ ರಾಧೇ ಶ್ಯಾಮ್, ವಿಕ್ರಾಂತ್ ರೋಣ, ರಜನಿಕಾಂತ್ ಅಣ್ಣಾತ್ತೆ ಸೇರಿ ಹಲವು ಚಿತ್ರಗಳು ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಈ ಸಿನಿಮಾಗಳ ಗಳಿಕೆ ಭಾರಿ ದೊಡ್ಡ ಮಟ್ಟಕ್ಕೆ ಆಗಬಹುದು ಎಂಬ ನಿರೀಕ್ಷೆ ಇದೆ.

    20 ವರ್ಷ ಹೋದ್ರು ಯಶ್ ನಟನೆಯ ಈ ಆರು ಪಾತ್ರಗಳು ಆಲ್‌ಟೈಂ ಫೇವರಿಟ್20 ವರ್ಷ ಹೋದ್ರು ಯಶ್ ನಟನೆಯ ಈ ಆರು ಪಾತ್ರಗಳು ಆಲ್‌ಟೈಂ ಫೇವರಿಟ್

    English summary
    Bollywood Famous critic Taran Adarsh tweeted about south indian films.
    Monday, February 15, 2021, 14:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X