'ರಶ್ಮಿಕಾ ಬ್ರಿಲಿಯಂಟ್' ಅಂದ್ರು ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್

Recommended Video

ರಶ್ಮಿಕಾ ಬ್ರಿಲಿಯಂಟ್' ಅಂದ್ರು ಬಾಲಿವುಡ್ ನ ಖ್ಯಾತ ನಿರ್ದೇಶಕ ಕರಣ್ ಜೋಹರ್ | FILMIBEAT KANNADA

ಸ್ಯಾಂಡಲ್ ವುಡ್ ನಟಿ ರಶ್ಮಿಕಾ ಮಂದಣ್ಣ ಈಗ ದಕ್ಷಿಣ ಭಾರತೀಯ ಚಿತ್ರರಂಗದ ಬಹುಬೇಡಿಯ ನಟಿ. ಅದರಲ್ಲು ಟಾಲಿವುಡ್ ಚಿತ್ರಪ್ರೇಕ್ಷಕರ ಹಾಟ್ ಫೇವರೆಟ್ ನಟಿಯಾಗಿದ್ದಾರೆ ಕಿರಿಕ್ ಸುಂದರಿ. ರಶ್ಮಿಕಾ ಹವಾ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲು ಸದ್ದು ಮಾಡುತ್ತಿದೆ.

ಸದ್ಯ ಡಿಯರ್ ಕಾಮ್ರೇಡ್ ಸಿನಿಮಾದ ಮೂಲಕ ಸಂಚಲನ ಮೂಡಿಸಿರುವ ರಶ್ಮಿಕಾ ಈಗ ಬಾಲಿವುಡ್ ನಿರ್ದೇಶಕರ ಕಣ್ಣುಕುಕ್ಕುತ್ತಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ಕರಣ್ ಜೋಹರ್ ರಶ್ಮಿಕಾರನ್ನು ಹಾಡಿ ಹೊಗಳಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾಗೆ ಶುಭ ಹಾರೈಸಿರುವ ಕರಣ್ ವಿಜಯ್ ಮತ್ತು ರಶ್ಮಿಕಾ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ.

Bollywood famous director and produser Karan Johar liked Rashmika performance in Dear Comrade

ವಿಶೇಷ ಅಂದ್ರೆ ಟಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ ಡಿಯರ್ ಕಾಮ್ರೇಡ್ ಹಿಂದಿಯಲ್ಲಿ ರಿಮೇಕ್ ಆಗುತ್ತಿದೆ. ರಿಲೀಸ್ ಗೂ ಮೊದಲೆ ಸದ್ದು ಮಾಡುತ್ತಿರುವ ಸಿನಿಮಾ ಹಿಂದಿಗೆ ರಿಮೇಕ್ ಆಗುತ್ತಿರುವ ವಿಚಾರವನ್ನು ಕರಣ್ ಜೋಹರ್ ಬಹಿರಂಗ ಪಡಿಸಿದ್ದಾರೆ. ಕರಣ್ ಮನಗೆದ್ದಿರುವ ರಶ್ಮಿಕಾ ಮುಂದಿನ ದಿನಗಳಲ್ಲಿ ಕರಣ್ ಸಿನಿಮಾದಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.

Bollywood famous director and produser Karan Johar liked Rashmika performance in Dear Comrade

ಇನ್ನು, ಸಿನಿಮಾದ ಬಗ್ಗೆ ಟ್ವೀಟ್ ಮಾಡಿರುವ ಕರಣ್ "ಇದೊಂದು ಪವರ್ ಫುಲ್ ಲವ್ ಸ್ಟೋರಿ, ಉತ್ತಮವಾದ ಅಭಿನಯ ಮಾಡಿದ್ದಾರೆ. ಚಿತ್ರದ ಸಂಗೀತ ಅದ್ಭುತವಾಗಿದೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಬ್ರಿಲಿಯಂಟ್. ಧರ್ಮ ಮೂವೀಸ್ ಈ ಅದ್ಭುತ ಸಿನಿಮಾವನ್ನು ಹಿಂದಿಗೆ ರಿಮೇಕ್ ಮಾಡುತ್ತಿದೆ" ಎಂದು ಚಿತ್ರದ ಬಗ್ಗೆ ಹಾಡಿಹೊಗಳಿದ್ದಾರೆ.

More from Filmibeat

English summary
Bollywood famous director and produser Karan Johar liked Rashmika Mandanna performance in 'Dear Comrade'. Karan Johar Announces Hindi remake of 'Dear Comrade'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X