ಯುಗ ಯುಗಗಳೇ ಕಳೆದರು ಈ 'ಕಿಶೋರ' ಅಜರಾಮರ

By Bharath Kumar

ಬಾಲಿವುಡ್ ಚಿತ್ರರಂಗ ಲೋಕದ ಸಂಗೀತ ದಿಗ್ಗಜ, ಗಾನ ಗಂಧರ್ವ ಕಿಶೋರ್ ಕುಮಾರ್ ಅವರಿಗೆ ಇಂದು (ಆಗಸ್ಟ್ 4) 88ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

ಬೆಂಗಾಲಿ ಗಂಗೂಲಿ ಫ್ಯಾಮಿಲಿಯಲ್ಲಿ ಜನಿಸಿದ ಕಿಶೋರ್ ಕುಮಾರ್ ಅವರು ನಟರಾಗಿ, ಗೀತರಚನೆಕಾರರಾಗಿ, ಮ್ಯೂಸಿಕ್ ಕಂಪೋಸರ್, ನಿರ್ಮಾಪಕ-ನಿರ್ದೇಶಕ ಹಾಗೂ ಸಂಕಲನಕಾರರಾಗಿ ಕೂಡ ದುಡಿದಿದ್ದಾರೆ. ಇಂತಹ ಅಪರೂಪದ ಅದ್ಭುತ ಪ್ರತಿಭೆ ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿದ್ದು ಮಾತ್ರ ಗಾಯಕರಾಗಿ.

ಆಗಸ್ಟ್ 4, 1929ರಂದು ಜನಿಸಿದ ಕಿಶೋರ್ ಕುಮಾರ್ ಅವರು ಅಕ್ಟೋಬರ್ 13, 1987ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರು ಇಂದು ನಮ್ಮ ಜೊತೆ ಇಲ್ಲವಾದರೂ, ಅವರ ಸಂಗೀತ, ಅವರ ಧ್ವನಿ ಮಾತ್ರ ಇಂದಿಗೂ ಅಮರವಾಗಿದೆ. ಜೊತೆಗೆ ಎಲ್ಲರ ಬಾಯಲ್ಲೂ ಅವರ ಹಾಡುಗಳೇ ನಲಿದಾಡುತ್ತಿವೆ. ಕಿಶೋರ್ ಕುಮಾರ್ ಅವರ ಬಗ್ಗೆ 7 ಇಂಟ್ರೆಸ್ಟಿಂಗ್ ಅಂಶಗಳು ಇಲ್ಲಿದೆ ಓದಿ.....

ಮೊದಲ ಹಾಡು, ಮೊದಲ ನಟನೆ

ಮೊದಲ ಹಾಡು, ಮೊದಲ ನಟನೆ

ಕಿಶೋರ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಪರಿಚಯವಾಗಿದ್ದು, ಅವರ ಸಹೋದರ ಅಶೋಕ್ ಕುಮಾರ್ ಅವರಿಂದ. ಕಿಶೋರ್ ಕುಮಾರ್ ಮೊದಲು ನಟಿಸಿದ ಚಿತ್ರ 1948ರಲ್ಲಿ ತೆರೆಕಂಡ 'ಶಿಕಾರಿ'. ಅವರು ಮೊದಲ ಬಾರಿಗೆ ಹಾಡಿದ್ದು, 1948ರಲ್ಲಿ ತೆರೆಕಂಡ 'ಜಿದ್ದಿ' ಚಿತ್ರಕ್ಕೆ.

ಬಹುಭಾಷಾ ಗಾಯಕ

ಬಹುಭಾಷಾ ಗಾಯಕ

ಹಿಂದಿ, ಬಂಗಾಳಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ, ಒರಿಯಾ ಮತ್ತು ಕನ್ನಡ ಭಾಷೆಗಳಲ್ಲಿ ಕಿಶೋರ್ ತಮ್ಮ ಛಾಪು ಮೂಡಿಸಿದವರು.

ಅತಿ ಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಸರದಾರ

ಅತಿ ಹೆಚ್ಚು ಫಿಲ್ಮ್ ಫೇರ್ ಪ್ರಶಸ್ತಿ ಸರದಾರ

ತಮ್ಮ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ 8 ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿರುವ ಖ್ಯಾತಿ ಅಪ್ರತಿಮ ಕಲಾವಿದ ಕಿಶೋರ್ ಕುಮಾರ್ ಅವರಿಗೆ ಸಲ್ಲುತ್ತದೆ.

ಕಿಶೋರ್ ಕುಮಾರ್ ಹೆಸರಿನಲ್ಲಿ ಪ್ರಶಸ್ತಿ

ಕಿಶೋರ್ ಕುಮಾರ್ ಹೆಸರಿನಲ್ಲಿ ಪ್ರಶಸ್ತಿ

ಮಧ್ಯಪ್ರದೇಶ ಸರ್ಕಾರ ಈ ಲೆಜೆಂಡ್ ಕಲಾವಿದನ ಹೆಸರಿನಲ್ಲಿ ಹಿಂದಿ ಸಿನಿಮಾಗಳಿಗೆ ಪ್ರಶಸ್ತಿ ನೀಡುತ್ತಿದೆ.

ನಾಲ್ಕು ಮದುವೆ ಆಗಿದ್ದಾರೆ

ನಾಲ್ಕು ಮದುವೆ ಆಗಿದ್ದಾರೆ

ಕಿಶೋರ್ ಕುಮಾರ್ ಅವರು ಒಟ್ಟು ನಾಲ್ಕು ಮದುವೆ ಆಗಿದ್ದಾರೆ. 1950ರಲ್ಲಿ ರುಮಾ ಗುಹಾ ತಕುರ್ತಾ (Ruma Guha Thakurta) ಅವರ ಜೊತೆ ಮೊದಲ ವಿವಾಹವಾಗಿದ್ದರು. ನಂತರ 1960ರಲ್ಲಿ ಮಧುಬಾಲ ಅವರನ್ನ ಮದುವೆ ಆಗಿದ್ದರು. 1975ರಲ್ಲಿ ನಟಿ ಯೋಗಿತಾ ಬಾಲಿ ಅವರೊಂದಿಗೆ ಮೂರನೇ ಮದುವೆ ಮಾಡಿಕೊಂಡಿದ್ದರು. ಕೊನೆಯದಾಗಿ 1980ರಲ್ಲಿ ಲೀನಾ ಚಂದರ್ಕರ್ ಅವರನ್ನ ಕೂಡ ಮದುವೆ ಆಗಿದ್ದರು.

ಎರಡು ದ್ವನಿಯಲ್ಲಿ ಗಾಯನ ಮಾಡುತ್ತಿದ್ದ ಕಲಾವಿದ

ಎರಡು ದ್ವನಿಯಲ್ಲಿ ಗಾಯನ ಮಾಡುತ್ತಿದ್ದ ಕಲಾವಿದ

ಕಿಶೋರ್ ಕುಮಾರ್ ಗಂಡು ಮತ್ತು ಹೆಣ್ಣು ದ್ವನಿಯಲ್ಲಿ ಹಾಡು ಹೇಳುತ್ತಿದ್ದರು. 'ಹಾಫ್ ಟಿಕೆಟ್' ಚಿತ್ರದ ಹಾಡನ್ನ ಲತಾ ಮಂಗೇಶ್ಕರ್ ಅವರು ಹಾಡಬೇಕಿತ್ತು ಆದ್ರೆ, ಅವರು ಕಾರಣಾಂತರಗಳಿಂದ ಬರಲು ಸಾಧ್ಯವಾಗದಿದ್ದಾಗ ಕಿಶೋರ್ ಕುಮಾರ್ ಅವರೇ ಎರಡು ದ್ವನಿಯಲ್ಲಿ ಹಾಡಿದ್ದರು.

ಕನ್ನಡದಲ್ಲಿ ಹಾಡಿದ್ದು ಒಂದೇ ಹಾಡು

ಕನ್ನಡದಲ್ಲಿ ಹಾಡಿದ್ದು ಒಂದೇ ಹಾಡು

ಕನ್ನಡ ನಟ ಕಮ್ ನಿರ್ಮಾಪಕ ದ್ವಾರಕೀಶ್ ಅವರ ಅಭಿನಯದ 'ಕುಳ್ಳ ಏಜೆಂಟ್ 000' ಚಿತ್ರದ 'ಆಡು ಆಟ ಆಡು, ನೀ ಆಡು ಆಡು ಆಡಿ ನೋಡು' ಹಾಡನ್ನ ಕಿಶೋರ್ ಕುಮಾರ್ ಅವರೇ ಹಾಡಿದ್ದರು. ಇದು ಕನ್ನಡದಲ್ಲಿ ಇವರು ಹಾಡಿದ ಮೊದಲ ಹಾಗೂ ಕೊನೆಯ ಹಾಡು.

More from Filmibeat

English summary
Kishore Kumar 88th Birthday Special: 7 Interesting And Lesser Known Facts About The Iconic Bollywood Singing Legend
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X