twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ನಟರಿಗೆ ಈ 'ಸ್ಟಾರ್'ಗಳು ಹೇಗೆ ಬರುತ್ತೆ: ಹಿಂದಿ ಮೀಡಿಯಾ ಪ್ರಶ್ನೆ.?

    |

    ಸಿನಿಮಾ ನಟರ ಹೆಸರುಗಳ ಹಿಂದೆ ಈ 'ಸ್ಟಾರ್' ಎಂಬ ಬಿರುದುಗಳು ಸಾಮಾನ್ಯ. ಅದರಲ್ಲೂ ದಕ್ಷಿಣ ಚಿತ್ರರಂಗದಲ್ಲಿ ಈ ಸಂಸ್ಕೃತಿ ಹೆಚ್ಚು. 'ರೆಬೆಲ್ ಸ್ಟಾರ್' ಅಂಬರೀಶ್, 'ರಾಕಿಂಗ್ ಸ್ಟಾರ್' ಯಶ್, 'ಚಾಲೆಂಜಿಂಗ್ ಸ್ಟಾರ್' ದರ್ಶನ್, 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಹೀಗೆ ಇನ್ನು ಹಲವು ಸ್ಟಾರ್ ಪಟ್ಟಗಳು ನಟರಿಗಿದೆ.

    ಇದನ್ನ ಹೊರತುಪಡಿಸಿ, ವಿಭಿನ್ನ ಬಗೆಯ ಬಿರುದುಗಳಿಂದ ತಮ್ಮ ನೆಚ್ಚಿನ ನಟರನ್ನ ಕರೆಯುವುದು ಸಂಪ್ರದಾಯ. ಇದು ನಮ್ಮ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಸೂಪರ್ ಸ್ಟಾರ್' ರಜನಿಕಾಂತ್, 'ಮೆಗಾಸ್ಟಾರ್' ಚಿರಂಜೀವಿ, 'ಪವರ್ ಸ್ಟಾರ್' ಪವನ್ ಕಲ್ಯಾಣ್, 'ಸ್ಟೈಲಿಶ್ ಸ್ಟಾರ್' ಅಲ್ಲು ಅರ್ಜುನ್ ಹೀಗೆ ಅವರಲ್ಲಿಯೂ ಇದೇ.

    ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್ ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

    ಸೌತ್ ಇಂಡಸ್ಟ್ರಿಗೆ ಹೋಲಿಸಿಕೊಂಡ್ರೆ, ಬಾಲಿವುಡ್ ನಲ್ಲಿ ಈ ರೀತಿ ಸ್ಟಾರ್ ಗಳು ಕಮ್ಮಿ. ಹೀಗಾಗಿ, ಸಹಜವಾಗಿ ಬಾಲಿವುಡ್ ಮಂದಿಗೆ ಈ ಕುತೂಹಲ ಕಾಡುವುದು ಸಹಜ. ಈ ಅನುಮಾನವನ್ನ ಯಶ್ ಮೂಲಕ ಬಗೆಹರಿಸಿಕೊಂಡಿದ್ದಾರೆ. ಹೌದು, ಇತ್ತೀಚಿಗಷ್ಟೆ 'ಕೆಜಿಎಫ್' ಪ್ರಚಾರದಲ್ಲಿ ಭಾಗವಹಿಸಿದ್ದ ಯಶ್ ಬಳಿ, ಹಿಂದಿ ಪತ್ರಕರ್ತರೊಬ್ಬರು ಈ ಬಗ್ಗೆ ಪ್ರಶ್ನಿಸಿದ್ದರು. ಅದಕ್ಕೆ ಯಶ್ ಏನಂದ್ರು.? ಮುಂದೆ ಓದಿ......

    ನಮಗೆ ಹೆಮ್ಮೆ ಇದೆ

    ನಮಗೆ ಹೆಮ್ಮೆ ಇದೆ

    ರಾಕಿಂಗ್ ಸ್ಟಾರ್, ರೆಬೆಲ್ ಸ್ಟಾರ್, ಚಾಲೆಂಜಿಂಗ್ ಸ್ಟಾರ್ ಏನಿದು ಸೌತ್ ನಟರಲ್ಲಿ ಈ ರೀತಿ ಸ್ಟಾರ್ ಗಳು ಹೇಗೆ ಬರುತ್ತೆ, ಇದರ ಬಗ್ಗೆ ತಿಳಿಸಿ ಎಂದು ಪತ್ರಕರ್ತರೊಬ್ಬರು ಯಶ್ ಬಳಿ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಯಶ್, ''ಇದು ನಮಗೆ ಸಿಗುವ ಪ್ರೀತಿ ಮತ್ತು ಗೌರವ. ಇದು ಅಭಿಮಾನಿಗಳು ನೀಡುವುದು'' ಎಂದಿದ್ದಾರೆ.

    10 ವರ್ಷದ ಹಿಂದೆ ಇದ್ದ ಯಶ್ ಬೇರೆ, ಈಗಿರೋ ಯಶ್ ಬೇರೆ.!10 ವರ್ಷದ ಹಿಂದೆ ಇದ್ದ ಯಶ್ ಬೇರೆ, ಈಗಿರೋ ಯಶ್ ಬೇರೆ.!

    ಪ್ರತಿಯೊಬ್ಬ ಹೀರೋಗೂ ಐದಾರು ಬಿರುದು ಇದೆ

    ಪ್ರತಿಯೊಬ್ಬ ಹೀರೋಗೂ ಐದಾರು ಬಿರುದು ಇದೆ

    ''ನಮ್ಮಲ್ಲಿ ಪ್ರತಿಯೊಬ್ಬ ಹೀರೋಗೂ ಐದಾರು ಬಿರುದುಗಳು ಇರುತ್ತೆ. ಪ್ರತಿಯೊಬ್ಬರಿಗೂ ಅವರ ಅಭಿಮಾನಿಗಳ ಸಂಘ ಇರುತ್ತೆ. ಅವರು ಪ್ರೀತಿಯಿಂದ ಒಂದೊಂದು ಹೆಸರಿನಿಂದ ಕರೆಯುತ್ತಾರೆ. ಯಾವುದು ಹೆಚ್ಚು ಖ್ಯಾತಿಗಳಿಸುತ್ತೋ ಅದನ್ನ ನಿರ್ದೇಶಕರು ಸ್ಕ್ರೀನ್ ಮೇಲೆ ಹಾಕ್ತಾರೆ. ಜನರು ನಿರೀಕ್ಷೆ ಮಾಡಿದ್ದನ್ನ ಈ ರೀತಿ ಕೊಡ್ತಿದ್ದೀವಿ ಎಂದು ಅಲ್ಲಿ ತೋರಿಸ್ತಾರೆ. ಹೀಗೆ ಈ ಸ್ಟಾರ್ ಗಳು ಹುಟ್ಟುತ್ತಿವೆ'' ಎಂದು ಅವರಿಗೆ ತಿಳಿಸಿದರು.

    ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.? ಪ್ರಭಾಸ್ ಮತ್ತು ಯಶ್ ನಡುವೆ ಇಷ್ಟೊಂದು ಸಾಮ್ಯತೆ ಇದ್ಯಾ.?

    ಹಿಂದಿಯಲ್ಲಿ ಸ್ಟಾರ್ ಬೇಡ

    ಹಿಂದಿಯಲ್ಲಿ ಸ್ಟಾರ್ ಬೇಡ

    ಅಂದ್ಹಾಗೆ, ಹಿಂದಿಯಲ್ಲಿ ಕೆಜಿಎಫ್ ಸಿನಿಮಾ ರಿಲೀಸ್ ಆಗ್ತಿದೆ. ಹೀಗಾಗಿ, ಈ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಯಾವುದಾದರೂ ಬಿರುದು ನೀಡಬಹುದು ಎನ್ನಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಶ್ 'ನ್ಯಾಷನಲ್ ಸ್ಟಾರ್' ಎಂದು ಬಿಂಬಿತವಾಗ್ತಿದ್ದಾರೆ. ಆದ್ರೆ, 'ಹಿಂದಿಯಲ್ಲಿ ಈ ರೀತಿ ಯಾವುದು ಬೇಡ' ಎಂದು ಯಶ್ ಮೊದಲೇ ಸೂಚಿಸಿದ್ದಾರಂತೆ.

    ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.! ಪ್ರಶಾಂತ್ ನೀಲ್ ಹೇಳಿದ 'ಆ ಒಂದು' ಮಾತು ಈಗ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ.!

    ಫರಾನ್ ಅಖ್ತರ್ ಏನಂದ್ರು

    ಫರಾನ್ ಅಖ್ತರ್ ಏನಂದ್ರು

    ಸ್ಟಾರ್ ಪಟ್ಟದ ಬಗ್ಗೆ ಯಶ್ ಹೇಳಿದ್ದನ್ನ ಕೇಳಿದ ವಿತರಕ ಫರಾನ್ ಅಖ್ತರ್'' ಯಶ್ ಮಾತಿಗೆ ಬೆಂಬಲ ನೀಡಿದ್ದಾರೆ. ಹೌದು, ಅವರಿಗಾಗಿಯೇ ಸಿನಿಮಾ ಮಾಡೋದು, ಅವರೇ ಎಲ್ಲವನ್ನು ಕೊಡೋದು. ಅವರು ಇಷ್ಟಪಟ್ಟು ಕೊಡೋದನ್ನ ತಗೋಬೇಕಾಗುತ್ತೆ'' ಎಂದು ಅಭಿಪ್ರಾಯಪಟ್ಟರು.

    ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

    English summary
    Bollywood media questioned about kannada actors titles. rebel star, rocking star, challenging star, how you are get these titles.?.
    Tuesday, December 11, 2018, 16:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X