"ಕನ್ನಡಿಗರೇ ನಿಮಗೆ ಧ್ರುವ ಬೇಡ ಅಂದ್ರೆ ನಮ್ ಇಂಡಸ್ಟ್ರಿಗೆ ಕಳ್ಸಿ, ನಮಗೆ ಇಂತಹ ಆಕ್ಷನ್ ಹೀರೋ ಬೇಕು"

ಎಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಮೂರನೇ ದಿನಕ್ಕೆ ಕಾಲಿಟ್ಟಿದೆ. ಉದಯ್ ಕೆ ಮೆಹ್ತಾ ನಿರ್ಮಾಣದ ಚಿತ್ರದಲ್ಲಿ ಧ್ರುವ ಸರ್ಜಾ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಮನರಂಜನೆಯ ಹಬ್ಬದೂಟ ಉಣಬಡಿಸುತ್ತಿದೆ. ಸಿನಿಮಾ ನಿಧಾನವಾಗಿ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡ್ತಿದೆ.

'ಮಾರ್ಟಿನ್' ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವರು ಒಳ್ಳೆ ಆಕ್ಷನ್ ಥ್ರಿಲ್ಲರ್ ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಸಿನಿಮಾ ಚೆನ್ನಾಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಭಾಷೆಗಳಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿದೆ. ಪರಭಾಷಾ ಪ್ರೇಕ್ಷಕರು ಸಿನಿಮಾ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Bollywood People are Inviting Martin actor Dhruva Sarja to their Industry

ಧ್ರುವ ಸರ್ಜಾ ಡೆಡಿಕೇಷನ್ ಹಾಗೂ ಮಾಸ್ ಪರ್ಫಾರ್ಮನ್ಸ್ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ಸಿನಿಮಾ ಬಹಳ ಇಷ್ಟವಾಗಿದೆ. ಸುಖಾಸುಮ್ಮನೆ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾ ನೋಡದೆಯೇ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವ ವಾದವೂ ಇದೆ. ಯಾವುದೋ ದ್ವೇಷಕ್ಕೆ ಒಂದು ಕನ್ನಡ ಸಿನಿಮಾವನ್ನು ತುಳಿಯಬೇಡಿ ಎನ್ನುವ ಆಗ್ರಹವೂ ವ್ಯಕ್ತವಾಗುತ್ತಿದೆ.

ಹಿಂದಿ ಯೂಟ್ಯೂಬರ್ ಒಬ್ಬರ ಮಾರ್ಟಿನ್ ರಿವ್ಯೂ ವೀಡಿಯೋ ಬಹಳ ವೈರಲ್ ಆಗುತ್ತಿದೆ. 'ಬಾಲಿವುಡ್‌ವಾಲಾ' ಯೂಟ್ಯೂಬ್ ಚಾನಲ್‌ನ ಸೋನುಪ್ ಸಹದೇವನ್ 'ಮಾರ್ಟಿನ್' ಸಿನಿಮಾ ನೋಡಿ ಕೊಂಡಾಡಿದ್ದಾರೆ. ನಿಮಗೆ ಧ್ರುವ ಸರ್ಜಾ ಬೇಡ ಅಂದ್ರೆ ನಮ್ಮ ಇಂಡಸ್ಟ್ರಿಗೆ ಕಳ್ಸಿ ಎಂದು ಅವರು ಹೇಳಿರುವ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

"ನಾನು 'ಮಾರ್ಟಿನ್' ಸಿನಿಮಾ ನೋಡಿಬಂದೆ. ವಿಷ್ಯುವಲ್ಸ್, ಆಕ್ಷನ್ ಹಾಗೂ ಧ್ರುವ ಸರ್ಜಾ ಪರ್ಫಾರ್ಮನ್ಸ್ ಎಲ್ಲವೂ ಸೂಪರ್. ಆ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ನೆಗೆಟಿವ್ ನೋಡ್ದೆ. ನನಗೆ ಅನ್ನಿಸ್ತು ಇಷ್ಟು ನೆಗೆಟಿವಿಟಿ ಯಾಕೆ ಅನ್ನಿಸ್ತಿದೆ. ಹೋಗಿ ಸಿನಿಮಾ ನೋಡಿ. ಜನ ನಿರ್ಧರಿಸಲಿ. ಇದು ಅದ್ಭುತ ಸಿನಿಮಾ." ಎಂದು ಸೋನುಪ್ ಸಹದೇವನ್ ಹೇಳಿದ್ದಾರೆ.

"ಮಾರ್ಟಿನ್ ಸಿನಿಮಾ ಸ್ಕೇಲ್ ನೋಡಿ, ಬಹಳ ದೊಡ್ಡ ಸಿನಿಮಾ. ಬಹಳ ಹಣ ಸುರಿದು ಸಿನಿಮಾ ಮಾಡಿದ್ದಾರೆ. ಚಿತ್ರ ಹೇಗೆ ಮಾಡಿದ್ದಾರೆ? ಧ್ರುವ ಹೇಗೆ ನಟಿಸಿದ್ದಾರೆ ನೋಡಿ. ನೆಗೆಟಿವ್ ಕಾಮೆಂಟ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡ್ತೀರಾ. ನನಗೂ ಕನ್ನಡ ಇಷ್ಟ. ಕನ್ನಡಿಗರು ಇಷ್ಟ. ಈ ನೆಗೆಟಿವ್ ಕಾಮೆಂಟ್ಸ್ ನೋಡಿದ ಮೇಲೆ ಒಂದು ಮಾತು ಹೇಳ್ತೀನಿ. ನಿಮಗೆ ಧ್ರುವ ಸರ್ಜಾ ಬೇಡ ಅಂದ್ರೆ ನಮ್ಮ ಬಾಲಿವುಡ್‌ಗೆ ಕಳ್ಸಿ. ನಾವು ಅವರ ಬಗ್ಗೆ ಕೇರ್ ತಗೋತ್ತೀವಿ. ನಮಗೆ ಇಂತಹ ಆಕ್ಷನ್ ಹೀರೋ ಬೇಕು" ಎಂದಿದ್ದಾರೆ.

ಚಿತ್ರದಲ್ಲಿ ಧ್ರುವ ಸರ್ಜಾ ಎಂಟ್ರಿ, ಆಕ್ಷನ್ ಸೀಕ್ವೆನ್ಸ್ ಎಲ್ಲವೂ ಸಖತ್ತಾಗಿದೆ. ಮಾರ್ಟಿನ್ ಯಾರು? ಅರ್ಜುನ್ ಯಾರು? ಎನ್ನುವ ಪ್ರಶ್ನೆಯೇ ಪ್ರೇಕ್ಷಕರನ್ನು ಬಹಳ ಹೊತ್ತು ಸಿನಿಮಾ ನೋಡುವಂತೆ ಮಾಡುತ್ತದೆ ಎಂದು ಸೋನುಪ್ ಹೇಳಿರುವುದು ವೈರಲ್ ಆಗುತ್ತಿದೆ. ಧ್ರುವ ಸರ್ಜಾ ಫ್ಯಾನ್ಸ್ ಈ ವೀಡಿಯೋ ಶೇರ್ ಮಾಡಿ ಕನ್ನಡದ ಸಿನಿಮಾಗಳನ್ನು ತುಳಿಯಲು ಯತ್ನಿಸುವವರು ಇದನ್ನು ಒಮ್ಮೆ ನೋಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಒಟ್ಟಾರೆ ನೆಗೆಟಿವ್ ಕಾಮೆಂಟ್ಸ್ ನಡುವೆಯೂ ಸಿನಿಮಾ ಫಸ್ಟ್ ವೀಕೆಂಡ್ ಉತ್ತಮ ಪ್ರದರ್ಶನ ಕಾಣುತ್ತಿದೆ. ನಾಳೆ(ಅಕ್ಟೋಬರ್ 14)ಯಿಂದ 'ಮಾರ್ಟಿನ್' ಚಿತ್ರಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಅಂದಾಜು 75 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.

ಧ್ರುವ ಸರ್ಜಾ 'ವಾರ್‌-2' ಚಿತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಈ ಬಗ್ಗೆ ಧ್ರುವ ಕೂಡ ಕಾದು ನೋಡೋಣ ಎಂದಿದ್ದಾರೆ. ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಆಕ್ಷನ್ ಪ್ರಿನ್ಸ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
Bollywood People are Going mad for Dhruva Sarja starrer Martin film;
Read more about: bollywood dhruva sarja martin
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X