For Quick Alerts
  ALLOW NOTIFICATIONS  
  For Daily Alerts

  ಪುಲ್ವಾಮಾ ದಾಳಿ, ಅಭಿನಂದನ್ ಕಥೆ ಮೇಲೆ ಬಾಲಿವುಡ್ ಕಣ್ಣು: ನಿರ್ಮಾಪಕರ ಫೈಟ್.!

  |

  ಆ ಕಡೆ ಗಡಿಯಲ್ಲಿ ಪಾಕಿಸ್ತಾನ ಮತ್ತು ಭಾರತ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿದ್ದರೇ, ಈ ಕಡೆ ಬಾಲಿವುಡ್ ನಿರ್ಮಾಪಕರು ಫಿಲಂ ಚೇಂಬರ್ ನಲ್ಲಿ ಚಿತ್ರದ ಟೈಟಲ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ.

  ಫೆಬ್ರವರಿ 14 ರಂದು ಜಮ್ಮು ಕಾಶ್ಮೀರದ ಪುಲ್ವಾಮಾ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 44ಕ್ಕೂ ಹೆಚ್ಚು ಭಾರತೀಯ ಯೋಧರನ್ನ ಹತ್ಯೆ ಮಾಡಿದ್ದರು. ಅದಾದ ಬಳಿಕ ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲ್ ಕೋಟ್ ಸೇರಿದಂತೆ ಮೂರು ಕಡೆ ಏರ್ ಸ್ಟ್ರೈಕ್ ದಾಳಿ ನಡೆಸಿತ್ತು.

  ಅಮೆರಿಕ, ಸೌದಿ ಅರೇಬಿಯಾ, ಯುಎಇ ಒತ್ತಡಕ್ಕೆ ಮಣಿದು ಅಭಿನಂದನ್ ಬಿಡುಗಡೆ

  ಈ ಮಧ್ಯೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಪಾಕಿಸ್ತಾನ ವಶಪಡಿಸಿಕೊಂಡಿದ್ದರು. ಬಳಿಕ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಎಲ್ಲ ಘಟನೆಗಳಿಟ್ಟು ಸಿನಿಮಾ ಮಾಡಲು ಬಾಲಿವುಡ್ ಸಿನಿಮಾ ಮಂದಿ ಮುಂದಾಗಿದ್ದಾರೆ.

  ಸ್ವಾಗತ 'ಸಿಂಗಂ' ವಿಂಗ್ ಕಮಾಂಡರ್ ಅಭಿನಂದನ್, ನೀವೇ ನಿಜವಾದ ಹೀರೋ!

  ಇದರ ಮೊದಲ ಹಂತ ಎಂಬಂತೆ ಚಿತ್ರದ ಟೈಟಲ್ ರಿಜಿಸ್ಟಾರ್ ಮಾಡಲು ನಾಲ್ಕೈದು ಪ್ರೊಡಕ್ಷನ್ ಸಂಸ್ಥೆ ಮುಂಬೈನ ಫಿಲಂ ಚೇಂಬರ್ ನಲ್ಲಿ ಸಾಲುಗಟ್ಟಿ ನಿಂತಿದೆಯಂತೆ. ಪುಲ್ವಾಮಾ: ದಿ ಟೆರರ್ ಅಟ್ಯಾಕ್, ಪುಲ್ವಾಮಾ ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್ 2, ಸರ್ಜಿಕಲ್ ಸ್ಟ್ರೈಕ್ ಅಂಡ್ ಬಾಲ್ ಕೋಟ್ ಎಂಬ ಟೈಟಲ್ ಗಳಿಗಾಗಿ ನಿರ್ಮಾಪಕರು ಮುಗಿಬಿದ್ದಿದ್ದಾರೆ ಎನ್ನಲಾಗಿದೆ.

  ಸೇನಾ ಹೀರೋ ಅಭಿನಂದನ್ ಬೇಷರತ್ ಬಿಡುಗಡೆಗೆ 7 ಕಾರಣ

  ಈಗಾಗಲೇ ಉರಿ ಅಟ್ಯಾಕ್ ಕುರಿತು, ಉರಿ ಸರ್ಜಿಕಲ್ ಸ್ಟ್ರೈಕ್ ಎಂಬ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿರುವ ಹಿನ್ನೆಲೆ ಈಗ ನಡೆದ ದಾಳಿಯ ಕುರಿತು ಸಿನಿಮಾ ಮಾಡಬೇಕು ಎಂಬ ಆಸೆ ಬಣ್ಣದ ಜಗತ್ತಿನಲ್ಲಿ ಮೂಡಿದೆ. ಆದ್ರೆ, ಈ ಸಿನಿಮಾ ಮಾಡಲು ಅನುಮತಿ ಸಿಗುತ್ತಾ? ಕಾದುನೋಡಬೇಕು.

  ಇನ್ನೊಂದೆಡೆ ತೆಲುಗು ನಟ ಮಹೇಶ್ ಬಾಬು 26/11 ಮುಂಬೈ ದಾಳಿಯಲ್ಲಿ ಹುತಾತ್ಮರಾದ ಯೋಧ ಸಂದೀಪ್ ಉನ್ನಿಕೃಷ್ಣನ್ ಅವರು ಕುರಿತು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಮೇಜರ್ ಎಂದು ಟೈಟಲ್ ಇಟ್ಟಿದ್ದು, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಮೂಡಿಬರಲಿದೆ.

  English summary
  Bollywood Production houses rushed to Indian Motion Pictures’ Producers’ Association (IMMPA) to reserve titles for films based on Balakot surgical strike and the Pulwama terror attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X