‘ಸು ಫ್ರಮ್ ಸೋ’ ಸಾರಥಿಯನ್ನು ಹೈಜ್ಯಾಕ್ ಮಾಡಿದ ಬಾಲಿವುಡ್, ಸೂಪರ್ ಸ್ಟಾರ್‌ಗೆ ಜೆಪಿ ತುಮ್ಮಿನಾಡ್ ಆಕ್ಷನ್ ಕಟ್

ಯಾರಿಗೆ ಎಲ್ಲಿ ಯಾವಾಗ ಹೇಗೆ ಅದೃಷ್ಟ ಖುಲಾಯಿಸುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಮನುಷ್ಯ ಎಷ್ಟೇ ಪ್ರಯತ್ನ ಮಾಡಿದರು ಕೂಡ ಈ ಅದೃಷ್ಟ ಜೊತೆಯಾಗಲೇಬೇಕು. ಆಗಲೇ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತೆ. ಇಲ್ಲದಿದ್ದರೆ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗುತ್ತೆ. ಹೀಗಾಗಿಯೇ ಒಮ್ಮೊಮ್ಮೆ ಈ ಅದೃಷ್ಟ ಯಾರ್ಯಾರ ಬದುಕಿನಲ್ಲಿ ಏನೆಲ್ಲಾ ಆಟವಾಡಿದೆ ಎಂದು ನೋಡಿದರೆ ಆಶ್ಚರ್ಯವಾಗುತ್ತೆ.

ಅದರಲ್ಲಿಯೂ ಬಣ್ಣದ ಲೋಕದಲ್ಲಿ ಹಲವರ ಬದುಕು ಬದಲಾಗಿದ್ದು ಈ ಅದೃಷ್ಟದಿಂದಲೇ. ಒಂದೇ ಒಂದು ಹೆಜ್ಜೆಗೆ ಸಿಗುವ ಗೆಲುವು ಇಲ್ಲಿ ಪವಾಡವನ್ನೇ ಮಾಡಿ ಬಿಡುತ್ತೆ. ಇದಕ್ಕೆ ಜೆಪಿ ತುಮ್ಮಿನಾಡ್ ಸದ್ಯದ ಉದಾಹರಣೆ.

Bollywood-Sandalwood Crossover Ajay Devgn to Star in Su From So Director JP Tuminadu s New Film

ಜೆಪಿ ತುಮ್ಮಿನಾಡ್.. ''ಸು ಫ್ರಮ್ ಸೋ'' ಎಂಬ ಸುನಾಮಿಯ ಹಿಂದಿನ ಮಾಸ್ಟರ್ ಮೈಂಡ್. ನಿರ್ದೇಶನದ ಮೊದಲ ಚಿತ್ರದಲ್ಲಿಯೇ ಎಲ್ಲರನ್ನು ದಂಗು ಬಡಿಸಿದ ಜೆ.ಪಿ.ತುಮ್ಮಿನಾಡ್ ಪಾಲಿಗೆ ಸದ್ಯ ಬಾಲಿವುಡ್‌ನ ಹೆಬ್ಬಾಗಿಲು ತೆರೆದಿದೆ. ಅಜಯ್ ದೇವಗನ್‌ಗೆ ಆಕ್ಷನ್ ಕಟ್ ಹೇಳುವ ಯೋಗ ಕೂಡ ಬಂದಿದೆ. ಅಚ್ಚರಿ ಎನಿಸಿದರೂ ಇದು ನಿಜಾ.

ಹೌದು, ಅಸಲಿಗೆ ಕೆಲ ದಿನಗಳ ಹಿಂದೆಯಷ್ಟೇ ಅಜಯ್ ದೇವಗನ್ ಪಕ್ಕ ಜೆಪಿ ತುಮ್ಮಿನಾಡ್ ಪ್ರತ್ಯಕ್ಷವಾದಾಗಲೇ ಹಲವರಿಗೆ ಅನುಮಾನ ಬಂದಿತ್ತು. ಜೆಪಿ ತುಮ್ಮಿನಾಡ್ ಹಿಂದಿ ಚಿತ್ರರಂಗಕ್ಕೆ ಹೋಗುತ್ತಿದ್ದಾರಾ ಎನ್ನುವ ಪ್ರಶ್ನೆ ಎದ್ದಿತ್ತು. ಇದರ ನಡುವೆ ಅದು ಕೇವಲ ಆಪ್ತವಾದ ಮಾತುಕಥೆ ಅಷ್ಟೇ ಎಂದು ಹೇಳಿದ್ದರು. ಆದರೆ ಈಗ ಆ ಮಾತುಕಥೆಯ ಗುಟ್ಟು ರಟ್ಟಾಗಿದೆ. ಹಲವರಲ್ಲಿ ಇದ್ದ ಅನುಮಾನ ನಿಜಾ ಆಗಿದೆ.

''ಪಿಂಕ್‌ವಿಲ್ಲಾ'' ಈ ಕುರಿತು ವರದಿಯನ್ನು ಮಾಡಿದ್ದು, ಮೊನ್ನೆ ನಡೆದ ಭೇಟಿಯ ಸಮಯದಲ್ಲಿಯೇ ಅಜಯ್ ದೇವಗನ್ ಮತ್ತು ಜೆಪಿ ತುಮ್ಮಿನಾಡ್ ನಡುವೆ ಚಿತ್ರದ ಮಾತುಕಥೆ ನಡೆದಿದೆ. ಅಜಯ್ ದೇವಗನ್‌ಗೆ ಜೆಪಿ ತುಮ್ಮಿನಾಡ್ ''ಹಾರರ್ ಕಾಮಿಡಿ'' ಜಾನರ್‌ನ ಕತೆಯೊಂದರ ಎಳೆ ಹೇಳಿದ್ದು, ಅಜಯ್ ದೇವಗನ್‌ಗೆ ಕತೆ ತುಂಬಾನೇ ಇಷ್ಟವಾಗಿದೆ. ಈ ಹಿನ್ನೆಲೆ ಪೂರ್ತಿ ಚಿತ್ರಕಥೆಯ ಜೊತೆ ಮತ್ತೊಮ್ಮೆ ಬಂದು ಭೇಟಿಯಾಗುವಂತೆ ಅಜಯ್ ದೇವಗನ್ ಹೇಳಿದ್ದಾರೆ.

ಇನ್ನು ಅಜಯ್ ದೇವಗನ್ ಹಾರರ್ ಕಾಮಿಡಿ ಸಿನಿಮಾಗಳನ್ನು ಮಾಡಿ ಹಲವು ವರ್ಷಗಳಾಗಿವೆ. 2017ರಲ್ಲಿ ಬಂದ ''ಗೋಲ್‌ಮಾಲ್ ಅಗೇನ್‌'' ಚಿತ್ರವೇ ಕೊನೆ. ಆ ನಂತರ ಅಜಯ್ ದೇವಗನ್ ಮತ್ತೆ ಹಾರರ್ ಕಾಮಿಡಿ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅಜಯ್ ದೇವಗನ್ ಕೂಡ ಈ ಜಾನರ್‌ನ ಕಥೆಯನ್ನು ಹುಡುಕುತ್ತಿದ್ದರು. ಇದೇ ಸಮಯದಲ್ಲಿ ಜೆಪಿ ತುಮ್ಮಿನಾಡ್ ಹಾರರ್ ಕಾಮಿಡಿ ಎಳೆಯನ್ನು ಹೇಳಿದ್ದಾರೆ. ಅಜಯ್ ದೇವಗನ್ ಈ ಚಿತ್ರ ಒಪ್ಪಿಕೊಳ್ಳಲು ಇದು ಕೂಡ ಪ್ರಮುಖವಾದ ಕಾರಣ.

bollywood-sandalwood-crossover-ajay-devgn-to-star-in-su-from-so-director-jp-tuminadu-s-new-film

ಅಜಯ್ ದೇವಗನ್ ಮತ್ತು ಜೆಪಿ ತುಮ್ಮಿನಾಡ್ ಕಾಂಬಿನೇಷನ್‌ನಲ್ಲಿ ಬರಲಿರುವ ಈ ಚಿತ್ರಕ್ಕೆ ಬಾಲಿವುಡ್‌ನ ನಿರ್ಮಾಣ ಸಂಸ್ಥೆ ಬಂಡವಾಳ ಹೂಡುತ್ತಿಲ್ಲ. ಬದಲಿಗೆ ಕನ್ನಡದ್ದೇ ನಿರ್ಮಾಣ ಸಂಸ್ಥೆಯಾದ ಯಶ್ ಅಭಿನಯದ ''ಟಾಕ್ಸಿಕ್'' ಚಿತ್ರಕ್ಕೂ ಹಣ ಹೂಡಿರುವ '' ಕೆವಿಎನ್'' ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಲಿದೆ ಎಂದು ''ಪಿಂಕ್‌ ವಿಲ್ಲಾ'' ವರದಿಯಲ್ಲಿ ಉಲ್ಲೇಖಿಸಿದೆ. ''ಕೆವಿಎನ್‌'' ಈಗಾಗಲೇ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಕಾಂಬಿನೇಷನ್‌ನ ಚಿತ್ರದ ಮೇಲೆ ಹಣ ಹೂಡುತ್ತಿದ್ದು ಬಾಲಿವುಡ್‌ನಲ್ಲಿ ಸ್ವತಂತ್ರ್ಯ ನಿರ್ಮಾಣದಡಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ ಜೆಪಿ ತುಮ್ಮಿನಾಡ್ ಮತ್ತು ಅಜಯ್‌ ದೇವಗನ್‌ ಅವರದ್ದಾಗಿರಲಿದೆ.

ಇನ್ನುಳಿದಂತೆ ಅಜಯ್ ದೇವಗನ್ ಸದ್ಯ ''ಶೈತಾನ್ 2''.. ''ದೃಶ್ಯ 3''.. ''ದೇ ದೇ ಪ್ಯಾರ್ ದೇ 2''.. ಚಿತ್ರಗಳನ್ನು ಮಾಡುತ್ತಿದ್ದಾರೆ. ಇದರ ನಡುವೆ ''ಧಮಾಲ್ 4'' ಕೂಡ ಇದೆ. ''ಗೋಲ್‌ಮಾಲ್‌'' ಸರಣಿಯನ್ನು ಕೂಡ ಮುಂದುವರೆಯಲಿದೆ. ಇದೆಲ್ಲದರ ನಡುವೆ ಜೆಪಿ ತುಮ್ಮಿನಾಡ್ ಅವರ ಚಿತ್ರವನ್ನು ಅಜಯ್ ದೇವಗನ್ ಯಾವಾಗ ಶುರು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Get the details on Ajay Devgn's next project, a horror-comedy directed by Kannada filmmaker JP Tuminadu. Learn more about the Bollywood-Sandalwood collaboration with KVN Productions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X