For Quick Alerts
  ALLOW NOTIFICATIONS  
  For Daily Alerts

  ಸೈಮಾ 2022: ಪ್ರಶಸ್ತಿ ಪಡೆಯಲು ಬಂದ ಬಾಲಿವುಡ್‌ನ ರಣ್ವೀರ್ ಸಿಂಗ್‌ ಕೆನ್ನೆಗೆ ಬಿತ್ತು ಏಟು!

  |

  ಶನಿವಾರ ಹಾಗೂ ಭಾನುವಾರ ನಮ್ಮ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಪ್ರತಿಷ್ಠಿತ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

  ಈ 2 ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನ ಕನ್ನಡ ಹಾಗೂ ತೆಲುಗು ಚಿತ್ರಗಳ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿದರೆ, ಎರಡನೇ ದಿನ ತಮಿಳು ಹಾಗೂ ಮಲಯಾಳಂ ಸಿನಿಮಾಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

  ಸೈಮಾ 2022: ತೆಲುಗು ಬೆಸ್ಟ್ ನಟ, ಚಿತ್ರ, ನಟಿ, ನಿರ್ದೇಶಕ ಪ್ರಶಸ್ತಿ ಯಾರ ಪಾಲು? ಪುಷ್ಪ ತಂಡದ್ದೇ ಅಬ್ಬರ! ಸೈಮಾ 2022: ತೆಲುಗು ಬೆಸ್ಟ್ ನಟ, ಚಿತ್ರ, ನಟಿ, ನಿರ್ದೇಶಕ ಪ್ರಶಸ್ತಿ ಯಾರ ಪಾಲು? ಪುಷ್ಪ ತಂಡದ್ದೇ ಅಬ್ಬರ!

  ಮೊದಲ ದಿನ ಕನ್ನಡ ಮತ್ತು ತೆಲುಗು ನಟರ ಜತೆಗೆ ಹಿಂದಿ ಚಲನಚಿತ್ರರಂಗದ ನಟ ರಣ್ವೀರ್ ಸಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡದ್ದು ಆಶ್ಚರ್ಯವಾಗಿತ್ತು. ದಕ್ಷಿಣ ಭಾರತ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಾಲಿವುಡ್ ನಟನಿಗೇನು ಕೆಲಸ ಎಂದು ಎಲ್ಲರೂ ಅಚ್ಚರಿಪಟ್ಟಿದ್ದರು. ರಣ್ವೀರ್ ಸಿಂಗ್ ವೈಟ್ & ವೈಟ್ ಸೂಟ್ ಧರಿಸಿ ಸೈಮಾ ಕಾರ್ಯಕ್ರಮದಲ್ಲಿ ಮಿಂಚಿದ್ದರು. ರಣ್ವೀರ್ ಸಿಂಗ್ ಅವರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ರೀತಿಸಲ್ಪಡುವ ಹಿಂದಿ ನಟ ಎಂಬ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹೀಗೆ ದಕ್ಷಿಣ ಭಾರತ ಚಿತ್ರರಂಗದ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದು ಹೆಮ್ಮೆ ಪಟ್ಟ ರಣ್ವೀರ್ ಸಿಂಗ್ ಅವರಿಗೆ ಕಾರ್ಯಕ್ರಮಕ್ಕೆ ಆರಂಭವಾದಾಗ ಕೆನ್ನೆಗೆ ಏಟು ಬಿದ್ದಿರುವ ಘಟನೆ ನಡೆದಿದೆ.

  ಕಾರ್ಯಕ್ರಮದ ಆರಂಭದಲ್ಲೇ ಕೆನ್ನೆಗೆ ಏಟು

  ಕಾರ್ಯಕ್ರಮದ ಆರಂಭದಲ್ಲೇ ಕೆನ್ನೆಗೆ ಏಟು

  ಬಾಲಿವುಡ್ ಹಂಗಾಮಾ ವರದಿ ಮಾಡಿರುವ ಪ್ರಕಾರ ಸೈಮಾ ಕಾರ್ಯಕ್ರಮದ ಕುರಿತು ಮೀಡಿಯಾ ಜತೆ ರಣ್ವೀರ್ ಸಿಂಗ್ ಮಾತನಾಡಿದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಳನಡೆದಿದ್ದರು ಹಾಗೂ ಇದೇ ಸಂದರ್ಭದಲ್ಲಿ ಅಲ್ಲಿಯೇ ನೆರೆದಿದ್ದ ಅಭಿಮಾನಿಗಳು ರಣ್ವೀರ್ ಸಿಂಗ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ರಣವೀರ್ ಸಿಂಗ್ ಕೆನ್ನೆಗೆ ಏಟು ಬಿದ್ದಿದೆ ಎನ್ನಲಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಶಿವಣ್ಣ ಮತ್ತು ವಿಜಯ್ ಜತೆ ಸ್ಟೆಪ್ ಹಾಕಿದ ರಣ್ವೀರ್ ಸಿಂಗ್

  ಶಿವಣ್ಣ ಮತ್ತು ವಿಜಯ್ ಜತೆ ಸ್ಟೆಪ್ ಹಾಕಿದ ರಣ್ವೀರ್ ಸಿಂಗ್

  ಇನ್ನು ಇದೇ ಕಾರ್ಯಕ್ರಮದಲ್ಲಿ ರಣ್ವೀರ್ ಸಿಂಗ್ ಕನ್ನಡ ನಟ ಶಿವರಾಜ್ ಕುಮಾರ್ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಜತೆ ವೇದಿಕೆಯಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಈ ಮೂವರು ಕುಣಿದು ಕುಪ್ಪಳಿಸಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಹಾಗೂ ಈಗಿನ ಯುವ ನಟರ ಜತೆ ಹಿರಿಯ ನಟ ಶಿವಣ್ಣ ಯುವಕನಂತೆ ಸ್ಟೆಪ್ಸ್ ಹಾಕಿದ್ದನ್ನು ಕಂಡು ಅವರ ಅಭಿಮಾನಿಗಳು ಫಿದಾ ಆಗಿದ್ದರು.

  ಸೌತ್ ಇಂಡಸ್ಟ್ರಿ ಮೇಲೆ ರಣ್ವೀರ್ ಸಿಂಗ್‌ಗೆ ಬಲು ಪ್ರೀತಿ

  ಸೌತ್ ಇಂಡಸ್ಟ್ರಿ ಮೇಲೆ ರಣ್ವೀರ್ ಸಿಂಗ್‌ಗೆ ಬಲು ಪ್ರೀತಿ

  ಹಿಂದಿ ಭಾಷೆಯ ನಟರ ಪೈಕಿ ದಕ್ಷಿಣ ಭಾರತದ ಚಿತ್ರರಂಗವನ್ನು ಹೊಗಳಿದವರಲ್ಲಿ ಮುಂಚೂಣಿಯಲ್ಲಿ ನಿಲ್ಲುವ ನಟ ರಣ್ವೀರ್ ಸಿಂಗ್. ಸಾಕಷ್ಟು ಬಾರಿ ದಕ್ಷಿಣ ಭಾರತ ಚಿತ್ರರಂಗದ ಸಿನಿಮಾಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿರುವ ರಣ್ವೀರ್ ಸಿಂಗ್ ಕೆಜಿಎಫ್, RRR ಸಿನಿಮಾಗಳ ಕುರಿತು ಕೆಲ ಸಂದರ್ಶನಗಳಲ್ಲಿ ವಿಶೇಷವಾಗಿ ಮಾತನಾಡಿದ್ದಾರೆ. ಅಷ್ಟೆ ಅಲ್ಲದೆ ಪ್ರಸ್ತುತ ಬಾಲಿವುಡ್ ಚಿತ್ರರಂಗದ ನಂಬರ್ ಒನ್ ನಟ ಯಶ್ ಎಂಬ ದೊಡ್ಡ ಹೇಳಿಕೆಯನ್ನು ಸಂದರ್ಶನವೊಂದರಲ್ಲಿ ನೀಡಿದ್ದರು ರಣ್ವೀರ್ ಸಿಂಗ್.

  ಅಗಲಿದ ಪುನೀತ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ

  ಅಗಲಿದ ಪುನೀತ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ

  ಈ ಬಾರಿಯ ಸೈಮಾದಲ್ಲಿ ಕನ್ನಡದ ಪೈಕಿ ಪುನೀತ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರೆ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡಗಮನ ವೃಷಭವಾಹನ ಅತ್ಯುತ್ತಮ ಚಿತ್ರ ಎನಿಸಿಕೊಂಡಿತು, ಆಶಿಕಾ ರಂಗನಾಥ್ ಮತ್ತು ಅಮೃತಾ ಅಯ್ಯಂಗಾರ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು ಹಾಗೂ ತರುಣ್ ಸುಧೀರ್ ರಾಬರ್ಟ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು.

  English summary
  Bollywood star Ranveer Singh gets hit on his face during SIIMA Awards 2022. Read on
  Monday, September 12, 2022, 8:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X