ದತ್ತಣ್ಣನ ಸಾಧನೆಗೆ ಸಲಾಂ ಎಂದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್

Recommended Video

ದತ್ತಣ್ಣನ ಸಾಧನೆಗೆ ಸಲಾಂ ಎಂದ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ | FILMIBEAT KANNADA

ಸ್ಯಾಂಡಲ್ ವುಡ್ ನ ಹಿರಿಯ ನಟ ದತ್ತಾತ್ರೇಯಾ, ಹೀಗೆನ್ನುವುದಕ್ಕಿಂತ ದತ್ತಣ್ಣ ಅಂದ್ರೇನೆ ಚಿತ್ರಾಭಿಮಾನಿಗಳಿಗೆ ತಟ್ ಅಂತ ಗೊತ್ತಾಗುತ್ತೆ. ಕನ್ನಡ ಚಿತ್ರಪ್ರೀಯರ ಪ್ರೀತಿಯ ದತ್ತಣ್ಣ ಇಂದು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಹೌದು, ಬಾಲಿವುಡ್ ಖಿಲಾಡಿ ಅಕ್ಷಯ್ ಕುಮಾರ್ ಅಭಿನಯದ 'ಮಿಷನ್ ಮಂಗಲ್' ಚಿತ್ರದಲ್ಲಿ ದತ್ತಣ್ಣ ಪ್ರಮುಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಮಿಷನ್ ಮಂಗಲ್' ಭಾರತದ ಹೆಮ್ಮೆಯ MOM(ಮಾರ್ಸ್ ಆರ್ಬಿಟ್ ಮಿಷನ್) ಉಡಾವಣೆಯ ಕತೆಯನ್ನು ಆಧಾರಿತ ಚಿತ್ರ ಇದಾಗಿದೆ. ಈ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಸೇರಿದಂತೆ ನಟಿಯರಾದ ತ್ಯಾಪ್ಸಿ ಪನ್ನು, ನಿತ್ಯಾ ಮೆನನ್, ವಿದ್ಯಾ ಬಾಲನ್ ಮತ್ತು ಸೋನಾಕ್ಷಿ ಸಿನ್ಹಾ ಕಾಣಿಸಿಕೊಂಡಿದ್ದಾರೆ. ದೊಡ್ಡ ತಾರಾಬಳಗವಿರುವ ಈ ಚಿತ್ರದಲ್ಲಿ ಕನ್ನಡಿಗ ದತ್ತಣ್ಣ ಅವರ ಪಾತ್ರ ಅಭಿಮಾನಿಗಳ ಗಮನ ಸಳೆಯುತ್ತಿದೆ.

ಇತ್ತೀಚಿಗಷ್ಟೆ 'ಮಿಷನ್ ಮಂಗಲ್' ಚಿತ್ರದ ಟ್ರೈಲರ್ ಅನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ದತ್ತಣ್ಣನ ಮಾತುಗಳು ಮತ್ತು ಅವರ ಸಾಧನೆಯನ್ನು ಕೇಳಿ ಅಕ್ಷಯ್ ಮತ್ತು ಬಾಲಿವುಡ್ ನಟಿಮಣಿಯರು ದಂಗ್ ಆಗಿ ಹೋಗಿದ್ದಾರೆ.

45ನೇ ವಯಸ್ಸಿನಲ್ಲಿ ಸಿನಿಮಾಗೆ ಎಂಟ್ರಿ

45ನೇ ವಯಸ್ಸಿನಲ್ಲಿ ಸಿನಿಮಾಗೆ ಎಂಟ್ರಿ

ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ದತ್ತಣ್ಣ ಅವರ ಸಾಧನೆಯನ್ನು ವರ್ಣಿಸುತ್ತ "ಇವರು ದತ್ತಣ್ಣ. 45ನೇ ವಯಸ್ಸಿನಲ್ಲಿ ನಟನಾಗಬೇಕೆಂದು ಚಿತ್ರರಂಗ ಪ್ರವೇಶಿಸಿದವರು" ಎಂದು ಪರಿಚಯಿಸಿ ದತ್ತಣ್ಣಗೆ ಮಾತನಾಡುವಂತೆ ಅಕ್ಷಯ್ ಕುಮಾರ್ ಮೈಕ್ ನೀಡುತ್ತಾರೆ. ದತ್ತಣ್ಣ ತಮ್ಮ ಸಾಧನೆಯನ್ನು ವಿವರಿಸುತ್ತಿದ್ದಂತೆ ವೇದಿಕೆ ಮೇಲಿದ್ದ ಬಾಲಿವುಡ್ ಸ್ಟಾರ್ಸ್ ಒಮ್ಮೆ ಶಾಕ್ ಆಗುತ್ತಾರೆ. ದತ್ತಣ್ಣ ಸಾಧನೆಗೆ ಎಲ್ಲರು ಚಪ್ಪಾಳೆ ತಟ್ಟಿ ಅವರನ್ನು ಅಭಿನಂದಿಸುತ್ತಾರೆ.

ಮೂರು ರಾಷ್ಟ್ರ ಪ್ರಶಸ್ತಿ

ಮೂರು ರಾಷ್ಟ್ರ ಪ್ರಶಸ್ತಿ

ದತ್ತಣ್ಣ ಅವರನ್ನು ಪರಿಚಯಿಸಿದ ಅಕ್ಷಯ್ ಕುಮಾರ್ ಎಷ್ಟು ಅವಾರ್ಡ್ ಪಡೆದಿದ್ದೀರಿ ಎಂದು ಕೇಳುತ್ತಾರೆ. ಆಗ ದತ್ತಣ್ಣ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಮೂರು ರಾಷ್ಟ್ರ ಪ್ರಶಸ್ತಿಯೂ ಕನ್ನಡ ಚಿತ್ರಕ್ಕೆ ಪಡೆದಿರುವುದಾಗಿ ಹೆಮ್ಮೆಯಿಂದ ಹೇಳಿದ್ದಾರೆ. ದತ್ತಣ್ಣ ಮಾತನ್ನು ಕೇಳಿ ವಿದ್ಯಾ ಬಾಲನ್, ಸೋನಾಕ್ಷಿ ಸಿನ್ಹಾ, ತ್ಯಾಪ್ಸಿ ಪನ್ನು ಸೇರಿದಂತೆ ಎಲ್ಲರು ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.

ದತ್ತಣ್ಣ ಲೈಫ್ ಜರ್ನಿ ಕೇಳಿ ಅಕ್ಷಯ್ ಶಾಕ್

ದತ್ತಣ್ಣ ಲೈಫ್ ಜರ್ನಿ ಕೇಳಿ ಅಕ್ಷಯ್ ಶಾಕ್

ದತ್ತಣ್ಣ ಕೇವಲ ನಟನಾಗಿ ಮಾತ್ರ ಗುರುತಿಸಿಕೊಡವರಲ್ಲ. ನಟನಾಗುವುದ್ದಕ್ಕಿಂತ ಮೊದಲು ಏರ್ ಫೋರ್ಸ್ ನಲ್ಲಿ 23 ವರ್ಷ ಕೆಲಸ ಮಾಡಿದ್ದಾರೆ. ಅಲ್ಲದೆ 9 ವರ್ಷಗಳ ಕಾಲ ಹೆಚ್ ಎ ನಲ್ಲಿ ಕೆಲಸ ಮಾಡಿದ್ದಾರೆ. ಪಿ ಎಸ್ ಎಲ್ ವಿಯನ್ನು ಸ್ಪರ್ಶಿಸಿದ್ದಾರೆ. ಈ ಎಲ್ಲಾ ಸಾಧನೆಗಳನ್ನು ಹೇಳುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸೋನಾಕ್ಷಿ "ಇದನ್ನೆಲ್ಲ ನಮಗೆ ಹೇಳೆ ಇಲ್ಲವಲ್ಲಾ ದತ್ತಣ್ಣ" ಎಂದುಕೇಳುತ್ತಾರೆ. ದತ್ತಣ್ಣ ಅವರ ಹಲವಾರು ಸ್ನೇಹಿತರು ಇಸ್ರೋದಲ್ಲಿ ಕೆಲಸ ಮಡುತ್ತಿದ್ದಾರಂತೆ.

ರಂಗಭೂಮಿ ಕಲಾವಿದ

ರಂಗಭೂಮಿ ಕಲಾವಿದ

ದತ್ತಣ್ಣ 45 ವರ್ಷಕ್ಕೆ ಚಿತ್ರರಂಗಕ್ಕೆ ಬಂದರು, ಅದಕ್ಕು ಮೊದಲು ಅಂದ್ರೆ ಬಾಲ್ಯದಿಂದನೆ ರಂಗಭೂಮಿಯಲ್ಲಿ ಇದ್ದರು. ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡಿದ್ದವರು. ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ದತ್ತಣ್ಣ ಈಗ ಮಿಷನ್ ಮಂಗಲ್ ನಲ್ಲಿ ಮಿಂಚುತ್ತಿದ್ದಾರೆ. "ದೂರದಿಂದ ಈ ಎಲ್ಲಾ ಸ್ಟಾರ್ ಗಳನ್ನು ನೋಡುತ್ತಿದ್ದೆ. ಆದ್ರೆ ಇಲ್ಲಿಗೆ ಎಂಟ್ರಿ ಕೊಟ್ಟಮೇಲೆ ಇವರೆಲ್ಲ ನನ್ನ ಸ್ನೇಹಿತರಾಗಿದ್ದಾರೆ. ಚಿತ್ರೀಕರಣ ವೇಳೆ ನನಗೆ ಆತ್ಮ ವಿಶ್ವಾಸ ತುಂಬಿದ್ದಾರೆ. ಚೆನ್ನಾಗಿ ನೋಡಿಕೊಂಡಿದ್ದಾರೆ" ಎಂದು ಚಿತ್ರತಂಡವನ್ನು ಹಾಡಿಹೊಗಳಿದ್ದಾರೆ.

More from Filmibeat

English summary
Bollywood stars are shocked to hearing Kannada actor Dattanna achievement. Senior actor Dattanna playing an important role in Akshay Kumar starrer Mission Mangal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X