ಬಾಲಿವುಡ್‌ಗೆ ರಿಮೇಕ್ ಆಗುತ್ತಿರುವ ಟಾಪ್ ಸೌತ್ ಸಿನಿಮಾಗಳಿವು!

ಬಾಲಿವುಡ್ ಬೇರೆ, ಸೌತ್ ಸಿನಿಮಾರಂಗ ಬೇರೆ ಎನ್ನುವ ವಾಡಿಕೆ ಇಷ್ಟು ದಿನ ಜೀವಂತವಾಗಿ ಇತ್ತು. ಆದರೆ 'ಬಾಹುಬಲಿ', 'ಕೆಜಿಎಫ್', 'RRR' ಸಿನಿಮಾಗಳು ಈ ವಾಡಿಕೆಯನ್ನು ಹೊಡೆದು ಹಾಕಿವೆ. ಬಾಲಿವುಡ್ ಗಲ್ಲಾ ಪಟ್ಟಿಗೆಯನ್ನು ಸೌತ್ ಸಿನಿಮಾಗಳು ಶೇಕ್ ಮಾಡಿವೆ.

ಹಾಗಾಗಿ ಈಗೀಗ ಬಾಲಿವುಡ್ ಮಂದಿ ಕೂಡ, ಸೌತ್ ಸಿನಿಮಾಗಳನ್ನು ಬದಿಗಿಡುವ ಧೈರ್ಯ ಮಾಡುತ್ತಿಲ್ಲ. ಜೊತೆಗೆ ಸೌತ್ ಸಿನಿಮಾರಂಗದ ಉತ್ತಮ ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡಲು ಮುಂದಾಗಿದ್ದಾರೆ. ಈಗಾಗಲೆ ಹಲವು ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗಿವೆ.

'ಕೆಜಿಎಫ್' ಬಳಿಕ ಈಗ ಮತ್ತಷ್ಟು ಸೌತ್ ಇಂಡಿಯನ್ ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗುತ್ತಿವೆ. 10ಕ್ಕೂ ಹೆಚ್ಚು ಸಿನಿಮಾಗಳನ್ನು ಬಾಲಿವುಡ್‌ನಲ್ಲಿ ರಿಮೇಕ್ ಮಾಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ...

ಸೂರರೈ ಪೋಟ್ರು- ಅಕ್ಷಯ್ ಕುಮಾರ್!

ಸೂರರೈ ಪೋಟ್ರು- ಅಕ್ಷಯ್ ಕುಮಾರ್!

ತಮಿಳು ನಟ ಸೂರ್ಯ, ಅಪರ್ಣಾ ಬಾಲಮುರಳಿ ನಟಿಸಿದ 'ಸೂರರೈ ಪೋಟ್ರು' ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಈ ಚಿತ್ರ ಸಿಂಪ್ಲಿ ಫ್ಲೈ ಡೆಕ್ಕನ್ ಸಂಸ್ಥಾಪಕ ಜಿ ಆರ್ ಗೋಪಿನಾಥ್ ಅವರ ನಿಜ ಜೀವನ ಚರಿತ್ರೆ. ಬಯೋಪಿಕ್ ಆದರೂ ಕೂಡ ಈ ಚಿತ್ರ ಸೂಪರ್ ಹಿಟ್ ಲಿಸ್ಟ್ ಸೇರಿದೆ. ವರದಿಗಳ ಪ್ರಕಾರ, ಈ ಚಿತ್ರದ ಅಧಿಕೃತ ಹಿಂದಿ ರಿಮೇಕ್‌ನಲ್ಲಿ ನಟ ಅಕ್ಷಯ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

'ವಿಕ್ರಂ-ವೇದ'ದಲ್ಲಿ ಹೃತಿಕ್, ಸೈಫ್!

'ವಿಕ್ರಂ-ವೇದ'ದಲ್ಲಿ ಹೃತಿಕ್, ಸೈಫ್!

ತಮಿಳಿನ ಮತ್ತೊಂದು ಹಿಟ್ ಸಿನಿಮಾ 'ವಿಕ್ರಂ ವೇದ' ಸಿನಿಮಾ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಸೂಪರ್ ಹಿಟ್ ಲಿಸ್ಟ್ ಸೇರಿದೆ. ಚಿತ್ರದಲ್ಲಿ ಮಾಧವನ್, ವಿಜಯ್ ಸೇತುಪತಿ, ಶ್ರದ್ಧಾ ಶ್ರೀನಾಥ್ ಮತ್ತು ವರಲಕ್ಷ್ಮಿ ಶರತ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಪುಷ್ಕರ್-ಗಾಯತ್ರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಹಿಂದಿ ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ.

ಮಾಸ್ಟರ್‌ ರಿಮೇಕ್‌ನಲ್ಲಿ ಸಲ್ಮಾನ್ ಖಾನ್!

ಮಾಸ್ಟರ್‌ ರಿಮೇಕ್‌ನಲ್ಲಿ ಸಲ್ಮಾನ್ ಖಾನ್!

ಮಾಸ್ಟರ್ ಲೋಕೇಶ್ ಕನಕರಾಜ್ ನಿರ್ದೇಶನದ ಈ ಆಕ್ಷನ್-ಪ್ಯಾಕ್ಡ್ ಸಿನಿಮಾ ಮಾಸ್ಟರ್ ಹಿಂದಿಗೆ ರಿಮೇಕ್ ಆಗುತ್ತಿದೆ. ನಟ ವಿಜಯ್ ಮತ್ತು ವಿಜಯ್ ಸೇತುಪತಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರದ ಹಿಂದಿ ರಿಮೇಕ್ ಹಕ್ಕನ್ನು ಎಂಡೆಮೊಲ್ ಶೈನ್ ಇಂಡಿಯಾ ಮತ್ತು ಮುರಾದ್ ಖೇತಾನಿ ಅವರಿಂದ ಖರೀದಿಸಲಾಗಿದೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಾಯಕನಾಗಿ ನಟ ಸಲ್ಮಾನ್ ಖಾನ್ ಅಭಿನಯಿಸಲಿದ್ದಾರೆ ಎನ್ನಲಾಗಿದೆ.

'ಅಲಾವೈಕುಂಠ ಪುರಂಲೋ'- ಕಾರ್ಕಿಕ್ ಆರ್ಯನ್!

'ಅಲಾವೈಕುಂಠ ಪುರಂಲೋ'- ಕಾರ್ಕಿಕ್ ಆರ್ಯನ್!

ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಅಲಾ ವೈಕುಂಠ ಪುರಂಲೋ' ತೆಲುಗಿನ ಹಿಟ್ ಚಿತ್ರ. ಈ ಚಿತ್ರದ ಬಾಲಿವುಡ್ ರೈಟ್ಸ್ ಈಗಾಗಲೇ ಖರೀದಿ ಆಗಿದೆ. ಈ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಧಿಕೃತ ಹಿಂದಿ ರಿಮೇಕ್‌ನಲ್ಲಿ ಕೃತಿ ಸನೋನ್ ಮತ್ತು ಕಾರ್ತಿಕ್ ಆರ್ಯನ್ ಜೋಡಿಯಾಗಿದ್ದಾರೆ. ರೋಹಿತ್ ಧವನ್ ನಿರ್ದೇಶನದ ಮಾಡುತ್ತಿದ್ದು, ಈ ಸಿನಿಮಾ ಇದೇ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

'ದಿ ಗ್ರೇಟ್ ಇಂಡಿಯನ್ ಕಿಚನ್'- ಸಾನ್ಯಾ!

'ದಿ ಗ್ರೇಟ್ ಇಂಡಿಯನ್ ಕಿಚನ್'- ಸಾನ್ಯಾ!

ಕೇವಲ ತಮಿಳು, ತೆಲುಗು ಸಿನಿಮಾಗಳು ಮಾತ್ರ ಅಲ್ಲ. ಮಲಯಾಲಂ ಸಿನಿಮಾಗಳು ಕೂಡ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಮಲಯಾಳಂನಲ್ಲಿ ಬಂದ 'ದಿ ಗ್ರೇಟ್ ಇಂಡಿಯನ್ ಕಿಚನ್' ಸಿನಿಮಾ ಅಧಿಕೃತವಾಗಿ ಬಾಲಿವುಡ್‌ಗೆ ರಿಮೇಕ್ ಆಗುತ್ತಿದೆ. ಈ ಸಿನಿಮಾ ಕಂಟೆಂಟ್ ಮೂಲಕವೇ ಹೆಚ್ಚು ಸದ್ದು ಮಾಡಿದೆ. ಹಿಂದಿಯಲ್ಲಿ ನಟಿ ಸನ್ಯಾ ಮಲ್ಹೋತ್ರಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

More from Filmibeat

English summary
Bollywood Stars Running Behind South Movies, List Of South Movies Going to Remake In Bollywood, Know More Details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X