Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಜನಾ-ರಾಗಿಣಿಯನ್ನು ಬಿಡುಗಡೆ ಮಾಡದಿದ್ದರೆ ಬಾಂಬ್ ಇಡುವುದಾಗಿ ಬೆದರಿಕೆ
ಡ್ರಗ್ಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಯನ್ನು ಜೈಲಿನಿಂದ ಬಿಡುಗಡೆ ಮಾಡದೇ ಇದ್ದರೆ ಬಾಂಬ್ ಇಡುವುದಾಗಿ ಬೆದರಿಕೆ ಪತ್ರವೊಂದು ಬಂದಿದೆ.
ಡ್ರಗ್ಸ್ ಪ್ರಕರಣ ಆರೋಪಿಗಳ ಪರವಾಗಿ ಮಾತ್ರವಲ್ಲದೆ, ಡಿಜೆ ಹಳ್ಳಿ ಗಲಭೆ ಆರೋಪಿಗಳನ್ನೂ ಬಿಡುಗಡೆ ಮಾಡಬೇಕಾಗಿ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಡ್ರಗ್ಸ್ ಪ್ರಕರಣದ ಆರೋಪಿಗಳು ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದ ಆರೋಪಿಗಳು ಅಮಾಯಕರು ಅವರನ್ನು ಬಿಡುಗಡೆ ಮಾಡಿ, ಇಲ್ಲದಿದ್ದರೆ ಬಾಂಬ್ ಇಡುವುದಾಗಿ ಸಿಸಿಎಚ್ ನ್ಯಾಯಾಲಯಕ್ಕೆ ಬೆದರಿಕೆ ಪತ್ರ ಬಂದಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
ನ್ಯಾಯಾಲಯಕ್ಕೆ ಮಾತ್ರವಲ್ಲದೆ ಪೊಲೀಸ್ ಕಮೀಷನರ್ ಕಚೇರಿಗೂ ಬೆದರಿಕೆ ಪತ್ರ ಬಂದಿದ್ದು, ಈ ಕುರಿತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತನಿಖೆ ನಡೆಸುತ್ತಿದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ತುಮಕೂರು ವಿಳಾಸದಿಂದ ಬಂದಿರುವ ಪತ್ರ
ತುಮಕೂರು ವಿಳಾಸದಿಂದ ಪತ್ರವು ಬಂದಿದ್ದು, ಕೂಡಲೇ ಶ್ವಾನದಳ ಹಾಗೂ ಪೊಲೀಸರು ನಡೆಸಿ ಸ್ಥಳದ ತಪಾಸಣೆ ನಡೆಸಿದ್ದಾರೆ. ಪತ್ರದಲ್ಲಿ ಬಾಂಬ್ ಸಿಡಿಸಲು ಬಳಸುವ ಡೆಟೊನೇಟರ್ ಇದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಕಮೀಷನರ್ ಕಚೇರಿ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ
ಕಮೀಷನರ್ ಕಚೇರಿಗೆ ಬಂದಿರುವ ಪತ್ರದಲ್ಲಿ 'ನಟಿಯರನ್ನು ಬಿಡುಗಡೆ ಮಾಡದೇ ಇದ್ದರೆ ಕಮೀಷನರ್ ಕಚೇರಿಯನ್ನು ಬ್ಲಾಸ್ಟ್ ಮಾಡುವುದಾಗಿ ಬರೆದಿದ್ದಾರೆ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸುಮ್ಮನಿದ್ದರೆ ಒಳ್ಳೆಯದು' ಎಂದು ಸಹ ಪತ್ರದಲ್ಲಿ ಬರೆಯಲಾಗಿದೆ.
Recommended Video

ಬಂಡೆ ಸ್ಫೋಟಿಸುವ ಡೆಟೊನೇಟರ್
ಕಮೀಷನರ್ ಕಚೇರಿಗೆ ಬಂದಿರುವ ಪತ್ರದಲ್ಲೂ ಸಹ ಬಂಡೆ ಸ್ಫೋಟಿಸುವ ಡಿಟೋನೇಟರ್ ಹಾಗೂ ಕೇಬಲ್ ಪತ್ತೆಯಾಗಿದೆ. ಕಮೀಷನರ್ ಕಚೇರಿಯನ್ನು ಸಹ ಶ್ವಾಸದಳದ ಮೂಲಕ ತಪಾಸಣೆ ನಡೆಸಲಾಗಿದೆ