For Quick Alerts
  ALLOW NOTIFICATIONS  
  For Daily Alerts

  ದರ್ಶನ್ ನಾಯಕಿಗೆ 2 ಲಕ್ಷ ದಂಡ, ಸಂಸದೆ ಸ್ಥಾನದಿಂದ ಅನರ್ಹ ಭೀತಿ?

  |

  ಮಹಾರಾಷ್ಟ್ರ ಸಂಸದೆ ಹಾಗೂ ಚಲನಚಿತ್ರ ನಟಿ ನವನೀತ್ ಕೌರ್‌ಗೆ ಬಾಂಬೆ ಹೈ ಕೋರ್ಟ್ 2 ಲಕ್ಷ ದಂಡ ವಿಧಿಸಿದೆ. ನಕಲಿ ದಾಖಲೆ ಪತ್ರ ಸಲ್ಲಿಕೆ ಮಾಡಿರುವ ಆರೋಪದಲ್ಲಿ ವಿಚಾರಣೆ ಮಾಡಿದ್ದ ನ್ಯಾಯಾಲಯ ಪ್ರಮಾಣ ಪತ್ರ ರದ್ದುಗೊಳಿಸಿದ್ದಲ್ಲದೇ ನಗದು ದಂಡ ವಿಧಿಸಿದೆ.

  ಕಳೆದ ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿದ್ದರು. ಈ ವೇಳೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿರುವುದಾಗಿ ಶಿವಸೇನಾ ಮುಖಂಡ ಆನಂದ್ ರಾವ್ ಕೇಸ್ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ನವನೀತ್ ಕೌರ್ ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರ ನಕಲು ಎಂದು ಆದೇಶಿಸಿ ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಜೊತೆಗೆ 2 ಲಕ್ಷ ದಂಡ ವಿಧಿಸಿದೆ. ಮುಂದೆ ಓದಿ...

  ಆರು ವಾರದಲ್ಲಿ ಸಾಬೀತು ಪಡಿಸಬೇಕು

  ಆರು ವಾರದಲ್ಲಿ ಸಾಬೀತು ಪಡಿಸಬೇಕು

  ಸಂಸದೆ ನವನೀತ್ ಕೌರ್‌ಗೆ ಆರು ವಾರ ಸಮಯದ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸೂಕ್ತ ಸಲ್ಲಿಸಿ ದಾಖಲೆ ಸಲ್ಲಿಸಿ ಜಾತಿ ಪ್ರಮಾಣಪತ್ರ ನಿಜವೆಂದು ಸಾಬೀತು ಪಡಿಸಿಕೊಳ್ಳಬೇಕಿದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

  ಸಂಸತ್ ಪ್ರವೇಶಿಸಿದ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಚಿತ್ರದ ನಾಯಕಿಸಂಸತ್ ಪ್ರವೇಶಿಸಿದ ಚಾಲೆಂಜಿಂಗ್ ಸ್ಟಾರ್ 'ದರ್ಶನ್' ಚಿತ್ರದ ನಾಯಕಿ

  ಸಂಸದೆ ಸ್ಥಾನ ಕಳೆದುಕೊಳ್ಳುವ ಭೀತಿ

  ಸಂಸದೆ ಸ್ಥಾನ ಕಳೆದುಕೊಳ್ಳುವ ಭೀತಿ

  ನ್ಯಾಯಾಲಯ ನೀಡಿರುವ ಕಾಲಾವಧಿಯಲ್ಲಿ ಸೂಕ್ತ ದಾಖಲೆ ಸಲ್ಲಿಸಬೇಕಾದ ಅನಿವಾರ್ಯತೆ ನವನೀತ್ ಕೌರ್‌ಗಿದೆ. ಒಂದು ವೇಳೆ ಸಾಬೀತು ಪಡಿಸದೆ ಹೋದಲ್ಲಿ, ಸಂಸದೆ ನವನೀತ್ ಕೌರ್‌ರನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಶಿವಸೇನಾ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ವಿಶ್ಲೇಷಿಸಲಾಗುತ್ತಿದೆ. ಈ ಕುರಿತು ನ್ಯಾಯಾಲಯ ಸ್ಪಷ್ಟನೆ ನೀಡಿಲ್ಲ.

  ಕೋರ್ಟ್ ಆದೇಶ ಗೌರವಿಸುತ್ತೇನೆ

  ಕೋರ್ಟ್ ಆದೇಶ ಗೌರವಿಸುತ್ತೇನೆ

  ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ನವನೀತ್ ಕೌರ್ ''ಈ ದೇಶದ ಪ್ರಜೆಯಾಗಿ ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ. ನಾನು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ, ನನಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ' ಎಂದು ತಿಳಿಸಿದ್ದಾರೆ.

  ಸಿನಿಮಾದಲ್ಲಿ ರೋಹಿಣಿ ಸಿಂಧೂರಿ ಪಾತ್ರ ಮಾಡ್ತಿರೋ ನಟಿ ಯಾರು ಗೊತ್ತಾ? | Filmibeat Kannada
  ದರ್ಶನ್ ಸಿನಿಮಾ ನಾಯಕಿ

  ದರ್ಶನ್ ಸಿನಿಮಾ ನಾಯಕಿ

  ನವನೀತ್ ಕೌರ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ದರ್ಶನ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2003ರಲ್ಲಿ ರಿಲೀಸ್ ಆಗಿದ್ದ ದರ್ಶನ್ ಸಿನಿಮಾ ನವನೀತ್ ಅಭಿನಯದ ಮೊದಲ ಸಿನಿಮಾ. ರಮೇಶ್ ಕಿಟ್ಟಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಚಿತ್ರದ ಬಳಿಕ ತೆಲುಗಿನಲ್ಲಿ ಹೆಚ್ಚು ಸಿನಿಮಾ ಮಾಡಿದರು.

  English summary
  Bombay HC Cancels Schedule Caste Certificate of Amravati MP Ms. Navneet Kaur Rana and has fined her of 2 lac Rs for fake documents.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X