2019ರ 'ಬುಕ್ ಮೈ ಶೋ' ಟಾಪ್ ರೇಟ್ ಚಿತ್ರಗಳ ಪಟ್ಟಿಯಲ್ಲಿ 'ಕೆಜಿಎಫ್'ಗೆ ಎಷ್ಟನೇ ಸ್ಥಾನ?

ಚಿತ್ರಜಗತ್ತಿನ ಅತಿ ದೊಡ್ಡ ವೇದಿಕೆಗಳಲ್ಲಿ ಬುಕ್ ಮೈ ಶೋ ಕೂಡ ಒಂದು. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಲು, ಸಿನಿಮಾ ವಿಮರ್ಶೆ, ಹೊಸ ಸಿನಿಮಾಗಳ ಹೀಗೆ ಸಿನಿಮಾಗೆ ಸಂಬಂಧಿಸಿದ ಅನೇಕ ವಿಷಯಗಳಿಗೆ ಇದು ಸಹಕಾರಿಯಾಗಿದೆ.

ಬುಕ್ ಮೈ ಶೋ ನೀಡುವ ರೇಟಿಂಗ್ ಪ್ರತಿಯೊಂದು ಚಿತ್ರಗಳಿಗೆ ಪ್ರಮುಖವಾಗಿರುತ್ತೆ. ಈ ರೇಟಿಂಗ್ ನೋಡ್ಕೊಂಡು ಸಿನಿಮಾಗೆ ಹೋಗುವ ಪ್ರೇಕ್ಷಕರಿದ್ದಾರೆ.

ಇದೀಗ, 2019ನೇ ಸಾಲಿನಲ್ಲಿ ಬುಕ್ ಮೈ ಶೋನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ 10 ಚಿತ್ರಗಳ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಕನ್ನಡದ ಕೆಜಿಎಫ್ ಕೂಡ ಇದೆ. ಎಷ್ಟನೇ ಸ್ಥಾನ? ಮುಂದೆ ಓದಿ...

ಮೊದಲ ಸ್ಥಾನದಲ್ಲಿ ಉರಿ

ಮೊದಲ ಸ್ಥಾನದಲ್ಲಿ ಉರಿ

ಜನವರಿ 11 ರಂದು ತೆರೆಕಂಡಿದ್ದ 'ಉರಿ: ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಈ ವರ್ಷದ ಅತ್ಯುತ್ತಮ ಚಿತ್ರಗಳ ಪೈಕಿ ಒಂದು. 2019ನೇ ವರ್ಷದ ಬುಕ್ ಮೈ ಶೋ ರೇಟಿಂಗ್ ಪಟ್ಟಿಯಲ್ಲೂ ಈ ಚಿತ್ರದ ಮೊದಲ ಸ್ಥಾನದಲ್ಲಿದೆ.

ಹಾಲಿವುಡ್ ಚಿತ್ರ

ಹಾಲಿವುಡ್ ಚಿತ್ರ

ಹಾಲಿವುಡ್ ಸಿನಿಮಾ 'ಅವೇಂಜರ್ ಎಂಡ್ ಗೇಮ್' ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಕಂಡಿತ್ತು. ಭಾರತದ ಬಾಕ್ಸ್ ಆಫೀಸ್ ನಲ್ಲೂ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಬುಕ್ ಮೈ ಶೋ ರೇಟಿಂಗ್ ಪಟ್ಟಿಯಲ್ಲಿ ಈ ಚಿತ್ರಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

ಧನುಶ್ ಅಸುರನ್

ಧನುಶ್ ಅಸುರನ್

ಅಕ್ಟೋಬರ್ ನಲ್ಲಿ ತೆರೆಕಂಡಿದ್ದ 'ಅಸುರನ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಧನುಶ್ ನಾಯಕನಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲೂ ಸದ್ದು ಮಾಡಿತ್ತು. ಈಗ ಬುಕ್ ಮೈ ಶೋ ಬಿಡುಗಡೆ ಮಾಡಿರುವ ಟಾಪ್ ರೇಟಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ.

ನಾನಿ 'ಜೆರ್ಸಿ'

ನಾನಿ 'ಜೆರ್ಸಿ'

ಈ ವರ್ಷದ ಹಿಟ್ ಚಿತ್ರಗಳ ಪೈಕಿ ತೆಲುಗಿನ ಜೆರ್ಸಿ ಕೂಡ ಪ್ರಮುಖವಾದದು. ನಾನಿ ನಟಿಸಿದ್ದ ಈ ಚಿತ್ರ ಸೌತ್ ಇಂಡಿಯಾದಲ್ಲಿ ದೊಡ್ಡ ಸಕ್ಸಸ್ ಕಂಡಿತ್ತು. ಈಗ ಬಾಲಿವುಡ್ನಲ್ಲೂ ರೀಮೇಕ್ ಆಗ್ತಿದೆ. ಈ ಚಿತ್ರ ಬುಕ್ ಮೈ ಶೋ ರೇಟಿಂಗ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ದಕ್ಕಿಸಿಕೊಂಡಿದೆ.

ಐದನೇ ಸ್ಥಾನದಲ್ಲಿ 'ಖೈದಿ'

ಐದನೇ ಸ್ಥಾನದಲ್ಲಿ 'ಖೈದಿ'

ಅಕ್ಟೋಬರ್ ತಿಂಗಳಲ್ಲಿ ರಿಲೀಸ್ ಆಗಿದ್ದ ತಮಿಳಿನ ಖೈದಿ ಸಿನಿಮಾ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಚಿತ್ರಕ್ಕೆ ಬುಕ್ ಮೈ ಶೋ ರೇಟಿಂಗ್ ಕೂಡ ಹೆಚ್ಚು ಸಿಕ್ಕಿತ್ತು. ಇದೀಗ, ಟಾಪ್ ಹತ್ತರ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ.

ಕನ್ನಡದ ಕೆಜಿಎಫ್

ಕನ್ನಡದ ಕೆಜಿಎಫ್

ಬುಕ್ ಮೈ ಶೋ ಟಾಪ್ ರೇಟಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಕನ್ನಡ ಸಿನಿಮಾ ಕೆಜಿಎಫ್. ಐದು ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ 2018ರ ಕೊನೆಯಲ್ಲಿ ರಿಲೀಸ್ ಆಗಿತ್ತು. ಆದರೂ 2019ರಲ್ಲಿ ಹೆಚ್ಚು ಸಕ್ಸಸ್ ಕಂಡ ಸಿನಿಮಾ ಆಗಿದೆ. ಬುಕ್ ಮೈ ಶೋ ರೇಟಿಂಗ್ ಆಧಾರದಲ್ಲಿ ಹೇಳುವುದಾದರೇ ಕೆಜಿಎಫ್ ಗೆ ಆರನೇ ಸ್ಥಾನ.

ಉಳಿದಂತೆ ಯಾವ ಚಿತ್ರಗಳು

ಉಳಿದಂತೆ ಯಾವ ಚಿತ್ರಗಳು

ಇನ್ನುಳಿದಂತೆ ಏಳನೇ ಸ್ಥಾನದಲ್ಲಿ ತೆಲುಗಿನ ಎವರು, ಏಂಟನೇ ಸ್ಥಾನದಲ್ಲಿ ಹಿಂದಿಯ ಚಿಚ್ಚೋರೆ, ಒಂಬತ್ತನೇ ಸ್ಥಾನದಲ್ಲಿ ಮಲಯಾಳಂ ಭಾಷೆಯ ತನ್ನೀರ್ ಮಾಥನ್ ದಿನಗಳ್ ಮತ್ತು ಹತ್ತನೇ ಸ್ಥಾನದಲ್ಲಿ ಹಾಲಿವುಡ್ ಚಿತ್ರ ಸ್ಪೈಡರ್ ಮ್ಯಾನ್ ಫಾರ್ ಫ್ರಮ್ ಹೋಮ್ ಸಿನಿಮಾ ಇದೆ.

More from Filmibeat

English summary
Book My Show 2019: South Indian film Critics Ramesh Bala reveals top rated movies list in Book My Show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X