twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡದ ಅದ್ಬುತ ಸಿನಿಮಾವನ್ನು ತುಳಿಯುತ್ತಿದೆ ಬುಕ್ ಮೈ ಶೋ!

    By Naveen
    |

    ಕನ್ನಡದಲ್ಲಿ ಒಳ್ಳೆ ಸಿನಿಮಾ ಬರುತ್ತಿಲ್ಲ ಎನ್ನುವರು ಸೀದಾ ಚಿತ್ರಮಂದಿರಕ್ಕೆ ಹೋಗಿ. ಈಗ ಒಂದು ಸುಂದರ ಸಿನಿಮಾ ಬಂದಿದೆ ಅದೇ 'ಒಂದಲ್ಲ ಎರಡಲ್ಲಾ.' ಒಂದಲ್ಲ ಎರಡಲ್ಲಾ ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಅಪರೂಪದ ಅದ್ಬುತ ಸಿನಿಮಾ.

    ಇಂತಹ ಒಳ್ಳೆಯ ಸಿನಿಮಾಗೆ ಈಗ ಪದೇ ಪದೇ ಅನ್ಯಾಯ ಆಗುತ್ತಿದೆ. ಸಿನಿಮಾ ಬಿಡುಗಡೆಯ ದಿನ ಯೂ ಎಫ್‌ ಓ ಸಮಸ್ಯೆಯಿಂದ ಚಿತ್ರದ 58ಕ್ಕೂ ಹೆಚ್ಚು ಪ್ರದರ್ಶನಗಳು ರದ್ದಾಗಿತ್ತು. ಇದರಿಂದ ಕಂಗಾಲಾದ ಚಿತ್ರತಂಡ ಯಾಕೆ? ಏನು? ಎಂದು ವಿಚಾರಿಸಿದರೆ, ಅಲ್ಲಿ ಹೋಗಿ.. ಇಲ್ಲಿ ಹೋಗಿ.. ಎಂಬ ಬೇಜವಾಬ್ದಾರಿ ಉತ್ತರ ಬಂದವು.

    ಒಳ್ಳೆ ಸಿನಿಮಾ ಮಾಡಿದ್ರೂ ಆಗ್ತಿದೆ ಅನ್ಯಾಯ : 'ಒಂದಲ್ಲಾ ಎರಡಲ್ಲಾ' 56 ಶೋಗಳು ರದ್ದು! ಒಳ್ಳೆ ಸಿನಿಮಾ ಮಾಡಿದ್ರೂ ಆಗ್ತಿದೆ ಅನ್ಯಾಯ : 'ಒಂದಲ್ಲಾ ಎರಡಲ್ಲಾ' 56 ಶೋಗಳು ರದ್ದು!

    ಯೂ ಎಫ್‌ ಓ ಸಮಸ್ಯೆಯ ನಂತರ ಇದೀಗ ಬುಕ್ ಮೈ ಶೋ ಸಿನಿಮಾವನ್ನು ಕೊಲ್ಲುತ್ತಿದೆ. ಅಂದಹಾಗೆ, 'ಒಂದಲ್ಲಾ ಎರಡಲ್ಲಾ' ಚಿತ್ರಕ್ಕೆ ಆಗುತ್ತಿರುವ ಪ್ರಮುಖ ತೊಂದರೆ ಇಲ್ಲಿದೆ..

    ಯೂಸರ್ ರೇಟಿಂಗ್ ಜೊತೆ ಕ್ರಿಟಿಕ್ಸ್ ರೇಟಿಂಗ್ ಸೇರಿಸಿದ್ದಾರೆ

    ಯೂಸರ್ ರೇಟಿಂಗ್ ಜೊತೆ ಕ್ರಿಟಿಕ್ಸ್ ರೇಟಿಂಗ್ ಸೇರಿಸಿದ್ದಾರೆ

    ಸಾಮಾನ್ಯವಾಗಿ ಬುಕ್ ಮೈ ಶೋ ನಲ್ಲಿ ಬರುವ ರೇಟಿಂಗ್ ಯೂಸರ್ ರೇಟಿಂಗ್ ಆಗಿರುತ್ತದೆ. ಸಿನಿಮಾ ನೋಡಿದ ಜನರು ನೀಡುವ ರೇಟಿಂಗ್ ಅನ್ನು ಶೇಕಡ(%) ರೂಪದಲ್ಲಿ ನೀಡಲಾಗುತ್ತದೆ. ಆದರೆ, 'ಒಂದಲ್ಲಾ ಎರಡಲ್ಲಾ' ಚಿತ್ರಕ್ಕೆ ಯೂಸರ್ ರೇಟಿಂಗ್ ಜೊತೆ ಕ್ರಿಟಿಕ್ಸ್ ರೇಟಿಂಗ್ ಸೇರಿಸಿದ್ದು, ಇದರಿಂದ ಸಿನಿಮಾದ ರೇಟಿಂಗ್ ಕಡಿಮೆ ಆಗಿದೆ ಎಂದು ಚಿತ್ರತಂಡ ಆರೋಪ ಮಾಡಿದೆ. ಇದೊಂದೆ ಸಿನಿಮಾಗೆ ಈ ರೀತಿ ಮಾಡಲಾಗಿದೆಯಂತೆ.

    ಸರಿಯಾದ ರೇಟಿಂಗ್ ನೀಡುತ್ತಿಲ್ಲ

    ಸರಿಯಾದ ರೇಟಿಂಗ್ ನೀಡುತ್ತಿಲ್ಲ

    ಬುಕ್ ಮೈ ಶೋ ಸಿನಿಮಾಗೆ 79% ರೇಟಿಂಗ್ ನೀಡಿತ್ತು. ಸಿನಿಮಾ ನೋಡಿದ ಜನ ಒಳ್ಳೆಯ ರೇಟಿಂಗ್ ನೀಡಿದ್ದರು, ಆ ರೇಟಿಂಗ್ ಹೆಚ್ಚಾಗುತ್ತಿರಲಿಲ್ಲ. ಚಿತ್ರತಂಡ ಇದರ ಬಗ್ಗೆ ಬುಕ್ ಮೈ ಶೋದವರ ಬಳಿ ಚರ್ಚೆ ಮಾಡಿದರೂ ಫಲ ಸಿಗಲಿಲ್ಲ. ಪದೇ ಪದೇ ಈ ಬಗ್ಗೆ ಕೇಳಿದ ನಂತರ ಭಾನುವಾರದ ಎಲ್ಲ ಶೋಗಳು ಮುಗಿದ ಮೇಲೆ ಸಿನಿಮಾದ ರೇಟಿಂಗ್ ಅನ್ನು 92%ಗೆ ಹೆಚ್ಚಿಸಲಾಗಿದೆ.

    ವಿಮರ್ಶೆ: 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ.! ವಿಮರ್ಶೆ: 'ಒಂದಲ್ಲಾ ಎರಡಲ್ಲಾ' ಎಷ್ಟು ಬಾರಿ ಬೇಕಾದರೂ ನೋಡಬಹುದಾದ ಚಿತ್ರ.!

    ಭಾನುವಾರದ ಎಲ್ಲ ಶೋ ಆದ ಮೇಲೆ ರೇಟಿಂಗ್ ಹೆಚ್ಚಾಯ್ತು

    ಭಾನುವಾರದ ಎಲ್ಲ ಶೋ ಆದ ಮೇಲೆ ರೇಟಿಂಗ್ ಹೆಚ್ಚಾಯ್ತು

    ಚಿತ್ರತಂಡದ ಪ್ರಕಾರ ವಾಸ್ತವದಲ್ಲಿ ಸಿನಿಮಾದ ರೇಟಿಂಗ್ ಇನ್ನೂ ಹೆಚ್ಚಾಗಬೇಕು. ಯೂಸರ್ ರೇಟಿಂಗ್ ಜೊತೆ ಕ್ರಿಟಿಕ್ಸ್ ರೇಟಿಂಗ್ ಸೇರಿಸಿದ್ದು, ಚಿತ್ರದ ರೇಟಿಂಗ್ 92% ಆಗಿದೆ. ಆದರೆ, ಬರೀ ಯೂಸರ್ ರೇಟಿಂಗ್ ಅನ್ನು ತೆಗೆದುಕೊಂಡರೆ ಚಿತ್ರದ ರೇಟಿಂಗ್ 96% ಆಗುತ್ತದೆ.

    ಸಿನಿಮಾವನ್ನು ಮರೆ ಮಾಡಿದೆ

    ಸಿನಿಮಾವನ್ನು ಮರೆ ಮಾಡಿದೆ

    ಬುಕ್ ಮೈ ಶೋ ಹೋಮ್ ಪೇಜ್ ತೆರೆದ ತಕ್ಷಣ ಬೇರೆ ಭಾಷೆಯ ಸಿನಿಮಾಗಳು ರಾಜಾಜಿಸುತ್ತಿವೆ. ಉತ್ತಮ ರೇಟಿಂಗ್ ಇದ್ದರೂ 'ಒಂದಲ್ಲಾ ಎರಡಲ್ಲಾ' ಸಿನಿಮಾವನ್ನು ಮರೆ ಆಗುವಂತೆ ಮಾಡಿದ್ದಾರೆ. ಈ ಸಿನಿಮಾಗೆ ಟಿಕೆಟ್ ಬುಕ್ ಮಾಡುವವರು ಚಿತ್ರವನ್ನು ಹುಡುಕಿ ಟಿಕೆಟ್ ಬುಕ್ ಮಾಡಬೇಕು.

    ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು ಸಮೀರನ ಮುಗ್ಧತೆ ಕಂಡು ಮಗುವಾದರು ವಿಮರ್ಶಕರು

    ಅತಿ ಹೆಚ್ಚು ರೇಟಿಂಗ್ ಇರುವ ಎರಡನೇ ಚಿತ್ರ

    ಅತಿ ಹೆಚ್ಚು ರೇಟಿಂಗ್ ಇರುವ ಎರಡನೇ ಚಿತ್ರ

    ಸದ್ಯ ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ರೇಟಿಂಗ್ ಇರುವುದು ಕನ್ನಡ ಸಿನಿಮಾಗಳಿಗೆ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ 95% ರೇಟಿಂಗ್ ಹೊಂದಿದ್ದು, ಮೊದಲ ಸ್ಥಾನದಲ್ಲಿ ಇದೆ. 92% ರೇಟಿಂಗ್ ಇರುವ 'ಒಂದಲ್ಲಾ ಎರಡಲ್ಲಾ' ಸಿನಿಮಾ ಎರಡನೇ ಸ್ಥಾನದಲ್ಲಿ ಇದೆ.

    English summary
    Book My Show is not giving proper rating for 'Ondalla Eradalla' movie says director D Sathya Prakash.
    Monday, August 27, 2018, 14:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X