Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
2022ರ 10 ಅತ್ಯುತ್ತಮ ಚಿತ್ರಗಳನ್ನು ಪ್ರಕಟಿಸಿದ ಬುಕ್‌ಮೈಶೋ; ಜನಪ್ರಿಯ ಆಪ್‌ನಲ್ಲಿ ನಂ.1 ಚಿತ್ರ ಯಾವುದು?
ಕಳೆದೆರಡು ವರ್ಷಗಳಲ್ಲಿ ಲಾಕ್‌ಡೌನ್, 50% ಪ್ರೇಕ್ಷಕರಿಗಷ್ಟೇ ಅನುಮತಿ ಎಂಬ ನಿಯಮಗಳಿಂದ ತೀವ್ರ ನಷ್ಟ ಹಾಗೂ ಹಿನ್ನಡೆ ಅನುಭವಿಸಿದ್ದ ಸಿನಿಮಾ ಕ್ಷೇತ್ರ ಸಂಪೂರ್ಣವಾಗಿ ಚೇತರಿಸಿಕೊಂಡದ್ದೇ ಈ ವರ್ಷದಲ್ಲಿ. ಇನ್ನು 2022ರಲ್ಲಿ ತೆರೆಕಂಡ ಭಾರತದ ಎಲ್ಲಾ ಭಾಷೆಯ ಚಿತ್ರಗಳ ಪೈಕಿ ಬರೋಬ್ಬರಿ ಮೂವತ್ತು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿದ್ದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ.
ಹೀಗೆ ಬೃಹತ್ ಮಟ್ಟದಲ್ಲಿ ಭಾರತದ ಬಹುತೇಕ ಎಲ್ಲಾ ಇಂಡಸ್ಟ್ರಿಗಳೂ ಸಹ ಕಮ್‌ಬ್ಯಾಕ್ ಮಾಡಿರುವುದರಿಂದ ಈ ವರ್ಷವನ್ನು ಭಾರತ ಚಿತ್ರರಂಗದ ಪಾಲಿಗೆ ಗೋಲ್ಡನ್ ಇಯರ್ ಎಂದೇ ಹೇಳಬಹುದು. ಇನ್ನು ಈ ವರ್ಷ ಜನರ ಮನ ಗೆದ್ದಿರುವ ಹಲವಾರು ಚಿತ್ರಗಳ ಪೈಕಿ ಬೆಸ್ಟ್ ಚಿತ್ರ ಯಾವುದು ಎಂಬ ಚರ್ಚೆಗಳು ಏರ್ಪಟ್ಟಿವೆ. ಅದರಲ್ಲಿಯೂ ವರ್ಷದ ಅಂತಿಮ ತಿಂಗಳು ಬಂದ ನಂತರ ಈ ವರ್ಷ ತೆರೆಕಂಡ ಚಿತ್ರಗಳಲ್ಲಿ ಹತ್ತು ಅತ್ಯುತ್ತಮ ಚಿತ್ರಗಳು ಯಾವುವು ಎಂದು ಸನಿ ರಸಿಕರು ಪಟ್ಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾರಂಭಿಸಿದ್ದಾರೆ.
ಮತ್ತೊಂದೆಡೆ ಸಿನಿಮಾ ಸಂಬಂಧಿತ ದೊಡ್ಡ ವೆಬ್ ತಾಣಗಳು ಹಾಗೂ ಅಪ್ಲಿಕೇಶನ್‌ನವರೂ ಸಹ ತಮ್ಮ ಪ್ರಕಾರ ಈ ವರ್ಷದ ಹತ್ತು ಬೆಸ್ಟ್ ಚಿತ್ರಗಳು ಯಾವುವು ಎಂಬುದನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿವೆ. ಈ ಹಿಂದೆಯಷ್ಟೇ ಪ್ರತಿಷ್ಠಿತ ಐಎಂಡಿಬಿ ವೆಬ್ ತಾಣ ವರ್ಷದ ಟಾಪ್ ಹತ್ತು ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಭಾರತದ ಬೃಹತ್ ಹಾಗೂ ಜನಪ್ರಿಯ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಬುಕ್ ಮೈ ಶೋ ಕೂಡ ತನ್ನ ಪ್ರಕಾರ ಈ ವರ್ಷದ ಹತ್ತು ಅತ್ಯುತ್ತಮ ಚಿತ್ರಗಳು ಯಾವುವು ಎಂಬುದನ್ನು ಬಿಡುಗಡೆ ಮಾಡಿದೆ.

ಬುಕ್ ಮೈ ಶೋ ಟಾಪ್ 10 ಚಿತ್ರಗಳ ಪಟ್ಟಿ
2022ರಲ್ಲಿ ತೆರೆಕಂಡ ಚಿತ್ರಗಳಲ್ಲಿ ಹತ್ತು ಬೆಸ್ಟ್ ಚಿತ್ರಗಳು ಯಾವುವು ಎಂಬುದನ್ನು ಬುಕ್ ಮೈ ಶೋ ಈ ಕೆಳಕಂಡಂತೆ ಆರಿಸಿದೆ..
1. ಕೆಜಿಎಫ್ ಚಾಪ್ಟರ್ 2
2. ಆರ್ ಆರ್ ಆರ್
3. ಕಾಂತಾರ
4. ದಿ ಕಾಶ್ಮೀರ್ ಫೈಲ್ಸ್
5. ಪೊನ್ನಿಯಿನ್ ಸೆಲ್ವನ್ 1
6. ಬ್ರಹ್ಮಾಸ್ತ್ರ
7. ವಿಕ್ರಮ್
8. ಭೂಲ್ ಬುಲಯ್ಯ 2
9. ಡಾಕ್ಟರ್ ಸ್ಟ್ರೇಂಜ್ ಇನ್ ಮಲ್ಟಿವರ್ಸ್ ಆಫ್ ಮ್ಯಾಡ್‌ನೆಸ್
10. ದೃಶ್ಯಂ 2

ಕನ್ನಡದ ಎರಡು ಚಿತ್ರಗಳು
ಈ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳಾದ ಕೆಜಿಎಫ್ ಚಾಪ್ಟರ್ 2 ಹಾಗೂ ಕಾಂತಾರ ಸ್ಥಾನ ಪಡೆದುಕೊಂಡಿವೆ. ಇಂತಹ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನ ಪಡೆದುಕೊಂಡದ್ದನ್ನು ಇದೇ ಮೊದಲು ಕಾಣಬಹುದಾಗಿದೆ. ಅದರಲ್ಲಿಯೂ ಈ ಚಿತ್ರಗಳು ಅಗ್ರಸ್ಥಾನ ಹಾಗೂ ಮೂರನೇ ಸ್ಥಾನಗಳನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ ಹಾಗೂ ಹೆಮ್ಮೆಯ ವಿಷಯ.

ಐಎಂಡಿಬಿ ಟಾಪ್ 10 ಪಟ್ಟಿ ಹೇಗಿತ್ತು?
ಇನ್ನು ಐಎಂಡಿಬಿ ಪ್ರಕಟಿಸಿದ್ದ ಈ ವರ್ಷದ ಹತ್ತು ಜನಪ್ರಿಯ ಚಿತ್ರಗಳ ಪಟ್ಟಿ ಹೀಗಿದೆ
ಐಎಂಡಿಬಿ ಬಿಡುಗಡೆಗೊಳಿಸಿರುವ ಟಾಪ್ 10 ಜನಪ್ರಿಯತೆ ಗಳಿಸಿದ ಚಿತ್ರಗಳ ಟಾಪ್ 10 ಪಟ್ಟಿ ಇಲ್ಲಿದೆ..
1. ಆರ್ ಆರ್ ಆರ್ ( ತೆಲುಗು )
2. ದಿ ಕಾಶ್ಮೀರ್ ಫೈಲ್ಸ್ ( ಹಿಂದಿ )
3. ಕೆಜಿಎಫ್ ಚಾಪ್ಟರ್ 2( ಕನ್ನಡ )
4. ವಿಕ್ರಮ್ ( ತಮಿಳು )
5. ಕಾಂತಾರ ( ಕನ್ನಡ )
6. ರಾಕೆಟ್ರಿ: ದ ನಂಬಿ ಎಫೆಕ್ಟ್ ( ದ್ವಿಭಾಷಾ ಚಿತ್ರ )
7. ಮೇಜರ್ ( ತೆಲುಗು )
8. ಸೀತಾ ರಾಮಮ್ ( ತೆಲುಗು )
9. ಪೊನ್ನಿಯಿನ್ ಸೆಲ್ವನ್ 1 ( ತಮಿಳು )
10. 777 ಚಾರ್ಲಿ ( ಕನ್ನಡ )