For Quick Alerts
  ALLOW NOTIFICATIONS  
  For Daily Alerts

  ರಾಯರ ವಾರವೇ 'ಲಕ್ಕಿಮ್ಯಾನ್' ಅಪ್ಪು ದರ್ಶನ: ಟಿಕೆಟ್‌ಗಳಿಗಾಗಿ ಮುಗಿಬಿದ್ದ ಪ್ರೇಕ್ಷಕರು!

  |

  ಬಹುನಿರೀಕ್ಷಿತ 'ಲಕ್ಕಿಮ್ಯಾನ್' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಶುಕ್ರವಾರ ರಾಜ್ಯಾದ್ಯಂತ ಈ ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನ್‌ಮೆಂಟ್ ಸಿನಿಮಾ ತೆರೆಗಪ್ಪಳಿಸ್ತಿದೆ. ಆದರೆ ಅದಕ್ಕಿಂತ ಒಂದು ದಿನ ಮೊದಲು ಬೆಂಗಳೂರು, ಮೈಸೂರಿನಲ್ಲಿ ಪ್ರೀಮಿಯರ್‌ ಶೋಗಳು ನಡೆಯಲಿದೆ. ಈಗಾಗಲೇ ಪ್ರೀಮಿಯರ್ ಶೋಗಳ ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಟಿಕೆಟ್‌ಗಳು ಹಾಟ್ ಕೇಕ್‌ ತರ ಸೇಲ್‌ ಆಗ್ತಿದೆ. ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

  ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ 'ಲಕ್ಕಿಮ್ಯಾನ್' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್‌ ರೋಲ್‌ಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ದೇವರಾಗಿ ಬಹಳ ವಿಶೇಷ ಪಾತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಸ್, ಟೀಸರ್ ಹಾಗೂ ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಸಾಕ್ಷ್ಯಚಿತ್ರ 'ಗಂಧದಗುಡಿ' ಬಿಟ್ಟರೆ ಪುನೀತ್ ರಾಜ್‌ಕುಮಾರ್ ನಟಿಸಿರುವ ಕೊನೆಯ ಕಮರ್ಷಿಯಲ್ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಪ್ರೇಕ್ಷಕರ ನಿರೀಕ್ಷೆ ಹೆಚ್ಚಾಗಿದೆ. ಅಪ್ಪು ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾಯುತ್ತಿದ್ದಾರೆ.

  Kantara Trailer: ಸೇಡಿನ ಕಥೆ ಹೇಳುವ 'ಕಾಂತಾರ' ಟ್ರೈಲರ್!Kantara Trailer: ಸೇಡಿನ ಕಥೆ ಹೇಳುವ 'ಕಾಂತಾರ' ಟ್ರೈಲರ್!

  ತಮಿಳಿನ 'ಓ ಮೈ ಕಡವುಲೆ' ರೀಮೆಕ್ ಆಗಿರುವ 'ಲಕ್ಕಿಮ್ಯಾನ್' ಚಿತ್ರಕ್ಕೆ ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ ಬಂಡವಾಳ ಹೂಡಿದ್ದಾರೆ. ನಾಗಭೂಷಣ್, ಸುಂದರ್‌ ರಾಜ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಚಿತ್ರದ ತಾರಾ ಬಳಗದಲ್ಲಿ ಇದ್ದಾರೆ. ವಿ2 ವಿಜಯ್ ವಿಕ್ಕಿ ಮ್ಯೂಸಿಕ್ ಚಿತ್ರದ ಮತ್ತೊಂದು ಹೈಲೆಟ್.

  ಗುರುವಾರವೇ 'ಲಕ್ಕಿಮ್ಯಾನ್' ದರ್ಶನ

  ಗುರುವಾರವೇ 'ಲಕ್ಕಿಮ್ಯಾನ್' ದರ್ಶನ

  ಹೌದು ಮೈಸೂರು ಹಾಗೂ ಬೆಂಗಳೂರಿನಲ್ಲಿ 'ಲಕ್ಕಿಮ್ಯಾನ್' ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳು ಒಂದು ದಿನ ಮೊದಲೇ ಶುರುವಾಗಲಿದೆ. ಗುರುವಾರ ಸಂಜೆ ಪ್ರೇಕ್ಷಕರು ಸಿನಿಮಾ ನೋಡಬಹುದು. ಈಗಾಗಲೇ ಮೈಸೂರಿನ ಡಿಆರ್‌ಸಿ, ವುಡ್‌ಲ್ಯಾಂಡ್ಸ್ ಥಿಯೇಟರ್‌ಗಳು ಹಾಗೂ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ತಲಾ ಒಂದೊಂದು ಶೋಗಳ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.

  ಅಪ್ಪು-ಪ್ರಭು ಡ್ಯಾನ್ಸ್

  ಅಪ್ಪು-ಪ್ರಭು ಡ್ಯಾನ್ಸ್

  'ಲಕ್ಕಿಮ್ಯಾನ್' ಚಿತ್ರದ 'ಬಾರೋ ರಾಜಾ' ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಸ್ಯಾಂಡಲ್‌ವುಡ್ ಡ್ಯಾನ್ಸ್ ಮಷಿನ್ ಅಪ್ಪು ಬಿಂದಾಸ್ ಸ್ಟೆಪ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಣ್ಣಾವ್ರ ಸಿನಿಮಾ ಟೈಟಲ್‌ಗಳನ್ನು ಬಳಸಿಕೊಂಡು ಬಹಳ ವಿಭಿನ್ನವಾಗಿ ಈ ಸಾಂಗ್ ಕಂಪೋಸ್ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವ ಒಂದೇ ಫ್ರೇಮ್‌ನಲ್ಲಿ ಡ್ಯಾನ್ಸ್ ಮಾಡುವುದನ್ನು ನೋಡುವುದು ಕಣ್ಣಿಗೆ ಹಬ್ಬ.

  ಎಲ್ಲೆಡೆ 'ಲಕ್ಕಿಮ್ಯಾನ್' ಕಟೌಟ್

  ಎಲ್ಲೆಡೆ 'ಲಕ್ಕಿಮ್ಯಾನ್' ಕಟೌಟ್

  ವಾರಕ್ಕೂ ಮೊದಲೇ 'ಲಕ್ಕಿಮ್ಯಾನ್' ಸಿನಿಮಾ ಕಟೌಟ್‌ಗಳು ಸಿದ್ಧವಾಗ್ತಿದೆ. ಸದಾಶಿವನಗರದ ಪುನೀತ್ ರಾಜ್‌ಕುಮಾರ್ ನಿವಾಸದ ಸಮೀಪದಲ್ಲೂ ಒಂದು ಕಟೌಟ್ ಹಾಕಿ ಅಭಿಮಾನಿಗಳು ಖುಷಿಪಡುತ್ತಿದ್ದಾರೆ. ನಿರ್ಮಾಪಕ ಜಾಕ್‌ ಮಂಜು ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದು, ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

  'ಲಕ್ಕಿಮ್ಯಾನ್' ಸ್ವಾಗತಕ್ಕೆ ಭರ್ಜರಿ ತಯಾರಿ

  'ಲಕ್ಕಿಮ್ಯಾನ್' ಸ್ವಾಗತಕ್ಕೆ ಭರ್ಜರಿ ತಯಾರಿ

  ಪುನೀತ್‌ ರಾಜ್‌ಕುಮಾರ್ ಕೊನೆ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಮೂಲಕ ಭರ್ಜರಿ ಸೆಂಡ್‌ಆಫ್‌ ನೀಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಥಿಯೇಟರ್ ಅಂಗಳದಲ್ಲಿ ಸೆಲೆಬ್ರೇಷ್ ಪ್ಲ್ಯಾನ್ ನಡೀತಿದೆ. ಕಟೌಟ್‌ಗಳನ್ನು ನಿಲ್ಲಿಸಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ 'ಲಕ್ಕಿಮ್ಯಾನ್' ಸ್ವಾಗತಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಮನೆಮನಗಳಲ್ಲಿ ದೇವರ ಸ್ಥಾನ ಅಲಂಕರಿಸಿರುವ ಅಪ್ಪು ಈ ಚಿತ್ರದಲ್ಲೂ ದೇವರಾಗಿ ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ.

  English summary
  Bookings open for Puneeth Rajkumar Starrer Luckyman's Paid Premiere Shows. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X