'ಸಪ್ತ ಸಾಗರದಾಚೆ ಎಲ್ಲೋ'-2 ಪ್ರೀಮಿಯರ್ ಶೋ ಬುಕ್ಕಿಂಗ್ ಶುರು: ಟಿಕೆಟ್ ರೇಟ್ ಹೆಚ್ಚಾಯ್ತಾ?

ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿರುವ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಶುಕ್ರವಾರ ರಿಲೀಸ್ ಆಗ್ತಿದೆ. ಆದರೆ ಅದಕ್ಕಿಂತ ಒಂದು ದಿನ ಮುಂಚೆ ಪೇಯ್ಡ್ ಪ್ರೀಮಿಯರ್ ಶೋಗಳು ನಡೀತಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು ಪ್ರೇಕ್ಷಕರು ಟಿಕೆಟ್ ಬುಕ್‌ ಮಾಡಲು ಮುಗಿಬಿದ್ದಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಸೈಡ್- A ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು 40ಕ್ಕೂ ಅಧಿಕ ಶೋಗಳಲ್ಲಿ ಒಂದು ದಿನ ಮೊದಲೇ ಪ್ರೇಕ್ಷಕರು ಮನು- ಪ್ರಿಯಾ ಲವ್ ಸ್ಟೋರಿ ನೋಡಿ ಫಿದಾ ಆಗಿದ್ದರು. ಇದೀಗ ಸೈಡ್‌- Bಗೂ ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ. ಬೆಂಗಳೂರು, ಮೈಸೂರು ಸೇರಿದಂತೆ ಕೆಲವಡೆ ಗುರುವಾರ ಸಂಜೆಯೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

Bookings open for Sapta Sagaradaache Ello - Side Bs paid premiere shows

ಹೇಮಂತ್ ರಾವ್ ನಿರ್ದೇಶನದ ರೊಮ್ಯಾಂಟಿಕ್ ಲವ್ ಸ್ಟೋರಿ 'ಸಪ್ತ ಸಾಗರದಾಚೆ ಎಲ್ಲೋ' ಹಿಟ್ ಆಗಿತ್ತು. ಸಿನಿಮಾ ಅಂದಾಜು 20 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಜೊತೆಗೆ ಸೀಕ್ವೆಲ್ ಬಗ್ಗೆ ಕುತೂಹಲ ಕೆರಳಿಸಿತ್ತು. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗಿನಲ್ಲೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಆಂಧ್ರ, ತೆಲಂಗಾಣದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಓಟಿಟಿಗೆ ಬಂದಿತ್ತು. ಪರಭಾಷಾ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

ಇದೀಗ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಚಿತ್ರವನ್ನು ಏಕಕಾಲಕ್ಕೆ 4 ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮನು ಲವ್ ಸ್ಟೋರಿಯನ್ನು ನೋಡಲು ಪ್ರೇಕ್ಷಕರು ಉತ್ಸುಕರಾಗಿದ್ದಾರೆ. ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೇ ಟಾಲಿವುಡ್‌ನಲ್ಲೂ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ತೆಲುಗು ಪ್ರೇಕ್ಷಕರು ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಂದಿನಿ ರೆಡ್ಡಿ ಸೇರಿದಂತೆ ಕೆಲ ಫಿಲ್ಮ್ ಮೇಕರ್ಸ್ ಕೂಡ ಮನು-ಪ್ರಿಯಾ ಲವ್ ಸ್ಟೋರಿಗಾಗಿ ಕಾಯುತ್ತಿದ್ದಾರೆ. ಏಕಕಾಲಕ್ಕೆ ಸಿನಿಮಾ ವಿದೇಶಗಳಲ್ಲೂ ರಿಲೀಸ್ ಆಗಲಿದೆ. ಪೇಯ್ಡ್ ಪ್ರೀಮಿಯರ್ ಶೋ ಟಿಕೆಟ್ ದರ ಹೆಚ್ಚಾಯ್ತು ಎಂದು ಕೆಲವರು ಬೇರಸ ವ್ಯಕ್ತಪಡಿಸುತ್ತಿದ್ದಾರೆ.

ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 350 ರೂ.ನಿಂದ ಶುರುವಾಗುತ್ತದೆ. ಕನ್ನಡ ಚಿತ್ರಕ್ಕೆ ಕರ್ನಾಟಕದಲ್ಲಿ ಟಿಕೆಟ್ ದರ ಹೆಚ್ಚಾಯ್ತು ಎಂದು ಕೆಲವರು ಹೇಳುತ್ತಿದ್ದಾರೆ. 350 ರೂ. ಟಿಕೆಟ್ ದರ, ಬುಕ್ಕಿಂಗ್ ಚಾರ್ಜ್ 50 ರೂ. ಸೇರಿ 400 ರೂ. ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ತಮಿಳಿನ 'ಜೈಲರ್', 'ಲಿಯೋ' ಚಿತ್ರಗಳಲ್ಲಿ ಇಲ್ಲಿ 1000 ರೂ. 1500 ರೂ. ಇತ್ತು. ಅದಕ್ಕೆ ಹೋಲಿಸಿದರೆ ಇದು ಕಡಿಮೆ ಬಿಡಿ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದಾರೆ.

ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು 2ನೇ ಭಾಗದಲ್ಲೂ ಮುಂದುವರೆಯಲಿದೆ. ಈ ಬಾರಿ ಚೈತ್ರಾ ಆಚಾರ್ ಪಾತ್ರಕ್ಕೆ ಹೆಚ್ಚಿನ ಮಹತ್ವ ಇರುವುದು ಗೊತ್ತಾಗುತ್ತಿದೆ. ಮೊದಲ ಭಾಗವನ್ನು ನೀಲಿ ಬಣ್ಣದಲ್ಲಿ ತುಂಬಿದ್ದ ಹೇಮಂತ್ ಈ ಬಾರಿ ಕೆಂಪು ಬಣ್ಣದ ಮೊರೆ ಹೋಗಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರದ ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡಿದ್ದರು. ಸೀಕ್ವೆಲ್‌ನಲ್ಲಿ ಆ ಲುಕ್ ಹೈಲೆಟ್ ಆಗಲಿದೆ.

ಬಹಳ ದೊಡ್ಡಮಟ್ಟದಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಸಿನಿಮಾ ರಿಲೀಸ್ ಆಗುತ್ತಿದೆ. ಈ ಹಿಂದೆ ಅಕ್ಟೋಬರ್ 19ಕ್ಕೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಬಳಿಕ ಒಂದು ತಿಂಗಳು ತಡವಾಗಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರ ಶುರುವಾಯಿತು. ಇನ್ನು ಚಿತ್ರಕ್ಕೆ ಪ್ರಚಾರ ಕಮ್ಮಿ ಆಯಿತು ಎನ್ನುವ ವಾದವೂ ಇದೆ. ಆದರೆ ಮೊದಲ ಭಾಗ ನೋಡಿದವರು ಕಂಡಿತ 2ನೇ ಭಾಗ ನೋಡುತ್ತಾರೆ. ಮೊದಲ ಭಾಗದ ರೀತಿ ಮೌತ್‌ ಟಾಕ್‌ನಿಂದಲೇ ಸಿನಿಮಾ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಿದೆ.

More from Filmibeat

English summary
Sapta Sagaradaache Ello - Side B premiere shows ticket prices hike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X