45 VS ಮಾರ್ಕ್ ; ಕ್ರಿಸ್ಮಸ್ ಹಬ್ಬಕ್ಕೆ ಬಾಕ್ಸಾಫೀಸ್ ಸಮರ- ಕನ್ನಡದ ಸೂಪರ್ ಸ್ಟಾರ್‌ಗಳಿಗೆ ಬಾಲಿವುಡ್ ಸವಾಲು

ಸಾಮಾನ್ಯವಾಗಿ ಎರಡು ದೊಡ್ಡ ಚಿತ್ರಗಳು ಒಂದೇ ದಿನ ತೆರೆಗೆ ಬಂದರೆ ವ್ಯಾಪಾರ ಹಂಚಿಹೋಗುವ ಭಯ ಇರುತ್ತೆ. ಚಿತ್ರದ ಕಥೆ-ನಿರೂಪಣೆಯಲ್ಲಿ ಚೂರು ಯಾಮಾರಿದರೂ ಕೂಡ ಇನ್ನೊಂದು ಚಿತ್ರದ ಮುಂದೆ ಮತ್ತೊಂದು ಚಿತ್ರ ಸೋಲುವ ಹೆದರಿಕೆ ಇರುತ್ತೆ. ಯಾವ ಚಿತ್ರ ನೋಡಬೇಕು, ಯಾವ ಚಿತ್ರ ನೋಡಬಾರದು ಎನ್ನುವ ಗೊಂದಲ ಪ್ರೇಕ್ಷಕರಿಗೆ ಕಾಡುತ್ತೆ. ಈ ಕಾರಣಕ್ಕೆ ಒಂದೇ ದಿನ...

ದೊಡ್ಡ ದೊಡ್ಡ ಚಿತ್ರಗಳನ್ನು ಒಟ್ಟೊಟ್ಟಿಗೆ ಬಿಡುಗಡೆ ಮಾಡಬೇಡಿ ಎಂದು ಎಲ್ಲ ಭಾಷೆಯಲ್ಲಿ ಚಿತ್ರಪ್ರೇಮಿಗಳು ಮನವಿಯನ್ನು ಮಾಡಿಕೊಳ್ಳುತ್ತಾರೆ. ಆಯಾ ಚಿತ್ರರಂಗದ ದೊಡ್ಡವರು ಕೂಡ ಈ ಸಲಹೆಯನ್ನೇ ನೀಡುತ್ತಾರೆ. ಆದರೆ. ಪ್ರೇಕ್ಷಕರ ಅಭಿಲಾಷೆ ಮತ್ತು ಚಿತ್ರರಂಗದವರ ಸಲಹೆಯನ್ನು ಕಡೆಗಣಿಸಿ ಅನೇಕರು ತಮ್ಮ ಚಿತ್ರವನ್ನು ಮತ್ತೊಂದು ಚಿತ್ರದ ಎದುರು ಬಿಡುಗಡೆ ಮಾಡುತ್ತಾರೆ.

BOOM Christmas Box Office Explodes Kartik Aaryan s Film Dares to Clash With 45 and Mark

ಅದರಲ್ಲಿಯೂ ಹಬ್ಬ ಹರಿದಿನ ಬಂದರೆ ಅಥವಾ ಸಾಲು ಸಾಲು ರಜೆಗಳಿದ್ದರೆ ಸಾಕು ಹಿಂದಡಿ ಇಡುವ ಪ್ರಶ್ನೆಯೇ ಇರಲ್ಲ. ಜಿದ್ದಿಗೆ ಬಿದ್ದವರಂತೆ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡುತ್ತಾರೆ. ಇದಕ್ಕೆ ಈ ಕ್ರಿಸ್ಮಸ್ ಹಬ್ಬದಂದು ನಡೆಯುತ್ತಿರುವ ಸಿನಿ ಸಮರ ಮತ್ತೊಂದು ಸಾಕ್ಷಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಈ ಕ್ರಿಸ್ಮಸ್ ಹಬ್ಬದಂದು ಅಂದರೆ ಡಿಸೆಂಬರ್ 25ಕ್ಕೆ ಕಿಚ್ಚ ಸುದೀಪ್ ಅಭಿನಯದ ''ಮಾರ್ಕ್'' ಚಿತ್ರ ಬಿಡುಗಡೆಯಾಗುತ್ತಿದೆ. ಅವತ್ತೇ ಉಪೇಂದ್ರ.. ಶಿವರಾಜ್ ಕುಮಾರ್.. ರಾಜ್ ಬಿ ಶೆಟ್ಟಿ ಅಭಿನಯದ ಅರ್ಜುನ್ ಜನ್ಯ ನಿರ್ದೇಶನದ ಚೊಚ್ಚಲ ಚಿತ್ರ ''45'' ಕೂಡ ಬಿಡುಗಡೆಯಾಗುತ್ತಿದೆ.

ಇವೆರಡು ಕನ್ನಡದ ಬಹುನಿರೀಕ್ಷಿತ ಚಿತ್ರಗಳು. ಸಾಲದಕ್ಕೆ ಈ ಎರಡು ಚಿತ್ರಗಳಿಗೆ ಪ್ಯಾನ್ ಇಂಡಿಯಾ ಸದ್ದು ಮಾಡುವ ತಾಖತ್ತು ಇದೆ. ಬೇರೆ ಭಾಷೆಯವರ ಕಣ್ಣು ಕೂಡ ಈ ಎರಡು ಚಿತ್ರಗಳ ಮೇಲಿದೆ. ಹೀಗಿರುವಾಗ ಇದೀಗ ಕ್ರಿಸ್ಮಸ್ ಹಬ್ಬದಂದು ಬಾಲಿವುಡ್‌ ತಮ್ಮ ಹೊಸ ಸೂಪರ್ ಸ್ಟಾರ್‌ ಕಾರ್ತಿಕ್ ಆರ್ಯನ್ ಅವರನ್ನು ಕಣಕ್ಕಿಳಿಸುತ್ತಿದೆ.

ಹೌದು, ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ''.. ಕಾರ್ತಿಕ್ ಆರ್ಯನ್ ಮತ್ತು ಅನನ್ಯಾ ಪಾಂಡೆ ಅಭಿನಯದ ಚಿತ್ರ. ಈ ಮೂದಲು ಮುಂದಿನ ವರ್ಷದ ಪ್ರೇಮಿಗಳ ಹಬ್ಬದಂದು ಅಂದರೆ ಫೆಬ್ರವರಿ 14ರಂದು ಬಿಡುಗಡೆಯಾಗಬೇಕಿತ್ತು. ಆಲಿಯಾ ಭಟ್ ಅಭಿನಯದ ಯಶ್ ರಾಜ್ ನಿರ್ಮಾಣದ ''ಆಲ್ಫಾ'' ಕ್ರಿಸ್ಮಸ್ ಹಬ್ಬದಂದು ತೆರೆಗೆ ಬರಬೇಕಿತ್ತು.

BOOM Christmas Box Office Explodes Kartik Aaryan s Film Dares to Clash With 45 and Mark

ಆದರೆ ಈಗ ವಿಎಫ್‌ಎಕ್ಸ್ ಕೆಲಸ ಇನ್ನೂ ಪೂರ್ಣವಾಗದ ಹಿನ್ನೆಲೆ, ಆದಿತ್ಯ ಚೋಪ್ರಾ ತಮ್ಮ ''ಆಲ್ಪಾ'' ಚಿತ್ರದ ಬಿಡುಗಡೆಯನ್ನು ಮುಂದಿನ ವರ್ಷದ ಏಪ್ರಿಲ್‌ಗೆ ಮುಂದೂಡಿದ್ದಾರೆ. ಈ ಹಿನ್ನೆಲೆ ಕ್ರಿಸ್ಮಸ್ ಸ್ಲಾಟ್‌ ಖಾಲಿ ಇದೆ, ಕನ್ನಡದ ಚಿತ್ರಗಳಿಂದ ತಮಗೆ ತುಂಬಾ ಹಿನ್ನೆಡೆಯಾಗದು ಎಂದುಕೊಂಡು ಕರಣ್ ಜೋಹರ್ ತಮ್ಮ ''ತು ಮೇರಿ ಮೇ ತೇರಾ, ಮೇ ತೇರಾ ತು ಮೇರಿ'' ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಬಹುಶಃ ''ಕಾಂತಾರ 1'' ಎದುರು ಬಂದ ತಮ್ಮ '' ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'' ಚಿತ್ರದ ಕಥೆ ಏನಾಯ್ತು ಎನ್ನುವುದನ್ನು ಕರಣ್ ಜೋಹರ್ ಮರೆತಿರಬೇಕೇನೋ.

ಒಟ್ನಲ್ಲಿ ಸದ್ಯ ಡಿಸೆಂಬರ್ 25ಕ್ಕೆ ''45''.. ''ಮಾರ್ಕ್‌'' ಮತ್ತು ''ತು ಮೇರಿ ಮೇ ತೇರಾ, ಮೇ ತೇರಿ ತು ಮೇರಾ'' ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿವೆ. ತೆಲುಗು ಮತ್ತು ತಮಿಳು ಚಿತ್ರರಂಗದಿಂದ ಕೂಡ ಈ ಬಾಕ್ಸಾಫೀಸ್‌ ಸಮರದಲ್ಲಿ ಸೂಪರ್ ಸ್ಟಾರ್‌ಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾದ ಈ ಕಾಲದಲ್ಲಿ ಈ ಚಿತ್ರಗಳಲ್ಲಿ ಯಾವ ಚಿತ್ರಕ್ಕೆ ಗೆಲುವು ಸಿಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Christmas 2025 box office clash! Get details on Kartik Aaryan's Tu Meri Main Tera Main Tera Tu Meri releasing Dec 25, going head-to-head with Kannada movies 45 and Mark.
Read more about: box office bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X