ದರ್ಶನ್ ಸರ್ ಪ್ರೀತಿಯಿಂದ ಹೇಳ್ತಿದಿನಿ ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ – ಪ್ರಥಮ್..!
ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್.ನಟ, ನಿರ್ದೇಶಕ, ಬಿಗ್ ಬಾಸ್ ವಿನ್ನರ್, ಸಾಮಾಜಿಕ ಕಾರ್ಯಕರ್ತ, ಕೆಲ ರಾಜಕಾರಣಿಗಳ ಮೊಮ್ಮಗ, ಇನ್ನೂ ಕೆಲ ರಾಜಕಾರಣಿಗಳ ತಮ್ಮನ ಮಗ ಹೀಗೆ ನಾನಾ ನಾನಾ ರೂಪದಲ್ಲಿ ಗುರುತಿಸಿಕೊಂಡವರು ಪ್ರಥಮ್.
ಇಂಥಾ ಪ್ರಥಮ್ ಕಂಡರೆ ದರ್ಶನ್ ಅಭಿಮಾನಿಗಳಿಗೆ ಎಲ್ಲಿಲ್ಲದ ಅಕ್ಕರೆ. ಪ್ರಥಮ್ ಕೂಡ ದರ್ಶನ್ ಅವರ ಅಭಿಮಾನಿಗಳ ಮೇಲೆ ವಿಶೇಷವಾದ ಒಲವು ಇದೆ. ಹೀಗಾಗಿಯೇ ಆಗಾಗ ಇಬ್ಬರ ನಡುವೆ ಕಿರಿಕ್ ಆಗುತ್ತೆ. ಸಾಮಾಜಿಕ ಜಾಲತಾಣದಲ್ಲಿ ವಾಕ್ಸಮರ ನಡೆಯುತ್ತೆ.

ಇದರ ಮಂದುವರೆದ ಭಾಗವೆನ್ನುವಂತೆ ಇದೀಗ ತಮ್ಮ ಮೇಲೆ ದರ್ಶನ್ ಅವರ ಅಭಿಮಾನಿಗಳು ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನುವ ವಾದವನ್ನು ಕನ್ನಡ ಚಿತ್ರರಂಗದ ದೇವ್ರಂಥಾ ಮನುಷ್ಯ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಲಾಯರ್ ಜಗದೀಶ್ ಅವರ ಜೊತೆ ಮಾತನಾಡಿದ ಆಡಿಯೋ ವೈರಲ್ ಆಗಿದೆ.
ಪ್ರಥಮ್ ಕೂಡ ನಂಬಿಕೆ ಇರುವ ಕಾರಣಕ್ಕೆ ಮಾತನಾಡಿದೆ ಆದರೆ ಅವರು ಆ ಆಡಿಯೋ ರೆಕಾರ್ಡ್ ಮಾಡುತ್ತಾರೆ ಎನ್ನುವುದು ನನಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.
ಹೀಗೆ ಆದರೆ ಯಾರನ್ನು ನಂಬುವುದು ಎನ್ನುವ ಪ್ರಶ್ನೆಯನ್ನು ಕೂಡ ಪ್ರಥಮ್ ಕೇಳಿದ್ದಾರೆ. ಈ ಪ್ರಶ್ನೆಗೆ ಸನ್ಮಾನ್ಯ ವಕೀಲ್ ಸಾಬ್ ಇನ್ನೂ ಉತ್ತರ ನೀಡಿಲ್ಲವಾದರೂ ಪ್ರಥಮ್ ಸದ್ಯ ದರ್ಶನ್ ಅವರ ವಿರುದ್ಧ ಗುಡುಗಿದ್ದಾರೆ. ಗೂಂಡಾಗಳನ್ನು ಸಾಕಬೇಡಿ ಸಾಧ್ಯವಾದರೆ ಮನೆಯಲ್ಲಿ ನಾಯಿಗಳನ್ನು ಸಾಕಿ ಎಂಬ ಸಲಹೆಯನ್ನು ಕೂಡ ನೀಡಿದ್ದಾರೆ.
ಈ ಕುರಿತು ''ಪಬ್ಲಿಕ್ ಟಿವಿ''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಪ್ರಥಮ್, ದರ್ಶನ್ ಅಭಿಮಾನಿಗಳಿಗೆ ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ, ಎಂದು ಹೇಳಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಬಾಸ್... ಕನ್ನಡಿಗರು ನನಗೆ ಬಾಸ್.. ಅವರವರ ಅಪ್ಪ-ಅಮ್ಮ ಅವರಿಗೆ ಬಾಸ್ ಎಂದು ಹೇಳಿರುವ ಪ್ರಥಮ್, ನಿಮಗೆ ಫ್ಯಾನ್ಸ್ ಇರುವಂತೆ ನಮಗೂ ಇದ್ದಾರೆ ಸರ್, ನಾವು ಪ್ರೀತಿ ಗಳಿಸಿದ್ದೀವಿ ಸರ್ ಎಂದು ಹೇಳಿದ್ದಾರೆ. ದರ್ಶನ್ ಸರ್ ನಿಮ್ ಹುಡುಗರಿಗೆ ಹೇಳಿ, ಇಲ್ಲಿಯವರೆಗೆ ಪ್ರಥಮ್ ಹಾಸ್ಯ, ತುಂಟಾಟ ಮಾತ್ರ ಎಲ್ಲಾ ನೋಡಿದ್ದಾರೆ. ಹಾಗೆಯೇ ನೋಡಿದ್ರೆ ಚೆಂದ ಎಂದು ಹೇಳಿರುವ ಪ್ರಥಮ್ ಪ್ರೀತಿಯಿಂದ ಹೇಳ್ತಿದ್ದೀನಿ ಸರ್ ನಿಮ್ಮ ಅಭಿಮಾನಿಗಳಿಗೆ ಹೇಳಿ ಅಂತ ಮನವಿಯನ್ನು ಮಾಡಿಕೊಂಡಿದ್ದಾರೆ.

ಮುಂದುವರೆದು ಪ್ರಥಮ್‌ನ ಯಾರಿಂದನೂ ಹೆದರಿಸೋಕೆ ಆಗಲ್ಲ. ಎಲ್ಲಾ ಹೆಸರುಗಳನ್ನು ಹೇಳಿದ್ರೆ ಇಷ್ಟೊತ್ತಿಗೆ ಬೆಂಕಿ ಧಗಧಗ ಎಂದು ಉರಿಯುತ್ತಿತ್ತು ಎಂದು ಹೇಳಿರುವ ಪ್ರಥಮ್, ಅಲ್ಲಿ ಏನಾಯ್ತು ಅಂತ ಹೇಳಿಕೆ ಕೊಟ್ರೆ ಬೇರೆ ಏನೇನೋ ಆಗುತ್ತೆ, ದರ್ಶನ್ ಸರ್ ಯೋಗ್ಯರ ಸಹವಾಸ ಮಾಡಿ. ಗೂಂಡಾಗಳನ್ನ ಸಾಕುವ ಬದಲು ಮನೆಯಲ್ಲಿ ನಾಯಿ ಸಾಕಿ, ಗಿಳಿ ಸಾಕಿ, ಪಾರಿವಾಳ ಸಾಕಿ ಅಂತ ಎಂದು ಹೇಳಿದ್ದಾರೆ. ಈ ಮೂಲಕ ಅಸಂಖ್ಯಾತ.. ಅಗಣಿತ ಅಭಿಮಾನಿಗಳನ್ನು ಹೊಂದಿರುವ, ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ದರ್ಶನ್‌ಗೆ ಬುದ್ದಿವಾದವನ್ನು ಹೇಳಿದ್ದಾರೆ.
ದರ್ಶನ್ ಹೆಸರನ್ನ ಅಭಿಮಾನಿಗಳು ಮಿಸ್ ಯೂಸ್ ಮಾಡಿಕೊಳ್ತಿದ್ದಾರೆ ಎಂದು ಕೂಡ ಹೇಳಿರುವ ಪ್ರಥಮ್, ಡ್ರ್ಯಾಗರ್ ಹಿಡಿದು ನನ್ನ ಮೇಲೆ ಹಲ್ಲೆ ಮಾಡಲು ಬಂದವರು ನಮ್ಮ ಬಾಸ್ ಬಗ್ಗೆ ಮಾತನಾಡಬೇಡಿ ಅಂತ ಹೇಳಿದ್ದು ನಿಜ ಎಂದು ಹೇಳಿದ್ದಾರೆ. ಎಲ್ಲಾ ವಿಚಾರವನ್ನು ವಿವರವಾಗಿ ಎಸ್ಪಿಗೆ ಹೇಳಿದ್ದೀನಿ, ತನಿಖೆ ಮಾಡ್ತಿದ್ದಾರೆ. ನಾನು ಯಾರ ಹೆಸರನ್ನು ಹೇಳಲ್ಲ. ಜನ ಪ್ರೀತಿ ಕೊಟ್ಟಾಗ ಪ್ರೀತಿಯಿಂದ ನಡೆದುಕೊಳ್ಳಬೇಕು. ಗೌರವ ಇರುವುದಕ್ಕೆ ನಾನು ಯಾರ ಹೆಸರನ್ನೂ ಹೇಳ್ತಿಲ್ಲ ಎಂದಿರುವ ಪ್ರಥಮ್ ಸುಮಾರು 2000 ಜನ ನನಗೆ ಫೋನ್ ಮಾಡಿ ಕಂಪ್ಲೆಂಟ್ ಕೊಡಿ ಅಂತ ಹೇಳಿದ್ದಾರೆ. ನಾನೇನಾದರೂ ದೂರು ಕೊಟ್ಟರೆ ಬೆಂಕಿ ಹೊತ್ತಿಕೊಳ್ಳುವುದು ಗ್ಯಾರಂಟಿ ಎಂದು ಕೂಡ ಹೇಳಿದ್ದಾರೆ.


Click it and Unblock the Notifications











