ಕಳೆದ ವಾರ ಗಂಡನ ಜೊತೆ ಗೋವಾಗೆ ಹೋಗಿದ್ದ ಶೋಭಿತಾ ಆತ್ಮಹತ್ಯೆಗೆ ಶರಣಾಗಿದ್ದೇಕೆ ? ಹೇಳಿದ್ದೇನು ಬ್ರಹ್ಮಗಂಟು ನಟಿಯ ಮಾವ..?
ಬದುಕಿ ಬಾಳಬೇಕಿದ್ದ ಬ್ರಹ್ಮಗಂಟು ಧಾರಾವಾಹಿಯ ಶೋಭಿತಾ ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಅನೇಕರು ಶೋಭಿತಾ ಅವರ ಪತಿ ಸುಧೀರ್ ರೆಡ್ಡಿ ಅವರ ಕಡೆ ಅನುಮಾನದ ದೃಷ್ಟಿಯಿಂದ ನೋಡಲು ಶುರು ಮಾಡಿದ್ದರು. ಗಂಡ-ಹೆಂಡತಿ ನಡುವೆ ಮನಸ್ತಾಪ ಇದ್ದ ಹಿನ್ನೆಲೆ ಶೋಭಿತಾ ದುಡಕಿರಬಹುದು ಎಂದು ಮಾತನಾಡಿಕೊಂಡರು. ಆದರೆ, ಪೊಲೀಸರಿಗೆ ಶೋಭಿತಾ ರೂಮ್‌ನಲ್ಲಿ ಸಿಕ್ಕ ಡೆತ್ ನೋಟ್ ಶೋಭಿತಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬ ಮಾತುಗಳಿಗೆ ಪುಷ್ಠಿಯನ್ನು ನೀಡಿತು. ಈಗ ಶೋಭಿತಾ ಅವರ ಮಾವ ಬುಚ್ಚಿ ರೆಡ್ಡಿ ಮಾತನಾಡಿದ್ದಾರೆ.ತಮ್ಮ ಮನದ ನೋವನ್ನು ಹಂಚಿಕೊಂಡಿದ್ಧಾರೆ.
ಹೈದ್ರಾಬಾದ್‌ನ ಮಾಧ್ಯಮಗಳಿಗೆ ಶೋಭಿತಾ ನಿಧನದ ಕುರಿತು ಮಾತನಾಡಿರುವ ಬುಚ್ಚಿ ರೆಡ್ಡಿ ಆಕೆಯನ್ನು ನಾವು ಮಗು ತರ ನೋಡಿಕೊಂಡಿದ್ದೇವು ಎಂದಿದ್ದಾರೆ. ನಮ್ಮ ಜೊತೆ ನಗು ನಗುತ್ತಾ ಆತ್ಮೀಯವಾಗಿ ಶೋಭಿತಾ ಬೆರೆಯುತ್ತಿದ್ದಳು ಎಂದಿರುವ ಮಾವ ಬುಚ್ಚಿ ರೆಡ್ಡಿ ಮದ್ವೆಯಾಗುವವರೆಗೆ ಆಕೆ ಕಿರುತೆರೆ ನಟಿ ಅನ್ನೋದೇ ನಮಗೆ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಗಂಡ ಮತ್ತು ಹೆಂಡತಿ ಇಬ್ಬರು ಗೋವಾಗೆ ತೆರಳಿದ್ದರು. ಅಲ್ಲಿ ಖುಷಿ ಖುಷಿಯಾಗಿ ಕಾಲವನ್ನು ಕಳೆದು ಬಂದಿದ್ದರು, ನನ್ನ ಮಗ ಮತ್ತು ಸೊಸೆಯ ನಡುವೆ ಜಗಳವೇ ಆಗುತ್ತಿರಲಿಲ್ಲ ಇಬ್ಬರು ತುಂಬಾ ಸಂತೋಷದಿಂದ ಇದ್ದರು ಆದರೆ ಈಗ ಅವನ ಬಾಳಲ್ಲಿ ಶೋಕ ಆವರಿಸಿದೆ, ನಮ್ಮ ಎರಡು ಕುಟುಂಬಕ್ಕೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಆಕೆಯ ಆಯ್ಕೆಗಳನ್ನು ಕೆಲಸವನ್ನು ನನ್ನ ಮಗ ತುಂಬಾ ಮೆಚ್ಚಿಕೊಳ್ಳುತ್ತಿದ್ದ ಆಕೆಯ ನಿರ್ಧಾರವನ್ನು ನನ್ನ ಮಗ ತಪ್ಪು ಎಂದು ಹೇಳಿದವನಲ್ಲ ಹೀಗಾಗಿ ಶೋಭಿತಾ ನಿಧನದ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡಿ ಎಂಬ ಮನವಿಯನ್ನು ಆಸ್ಪತ್ರೆ ಬಳಿ ಮಾಡಿಕೊಂಡಿದ್ದಾರೆ.
ಇನ್ನು ಶೋಭಿತಾ ಅಂತ್ಯ ಸಂಸ್ಕಾರದ ಕುರಿತು ಕೂಡ ತಮ್ಮ ಮನದ ಮಾತು ಹಂಚಿಕೊಂಡಿರುವ ಬುಚ್ಚಿ ರೆಡ್ಡಿ ಆಕೆ ನಮ್ಮ ಮನೆಯ ಸೊಸೆ ಈ ಕಾರಣಕ್ಕೆ ನಮ್ಮ ಸಂಪ್ರದಾಯದಂತೆ ಆಕೆಯ ಅಂತ್ಯಸಂಸ್ಕಾರವನ್ನು ನಾವು ಇಲ್ಲಿಯೇ ಮಾಡಬೇಕು ಎಂದುಕೊಂಡಿದ್ದೆವು ಆದರೆ ಅವರ ಮನೆಯವರು ಅಂತ್ಯಸಂಸ್ಕಾರವನ್ನು ಹಾಸನದಲ್ಲಿ ಮಾಡಲು ಬಯಸಿದರು, ಶೋಭಿತಾ ಕೊನೆ ಆಸೆ ಕೂಡ ಹುಟ್ಟೂರಲ್ಲೇ ತನ್ನ ಅಂತ್ಯ ಸಂಸ್ಕಾರ ಆಗಬೇಕು ಎಂದು ಇತ್ತಂತೆ ಈ ಹಿನ್ನೆಲೆ ನಾವು ಅವರ ಕುಟುಂಬದವರ ನಿರ್ಧಾರವನ್ನು ಸ್ವಾಗತಿಸಿದೆವು ಎಂದು ಹೇಳಿದ್ದಾರೆ. ಶೋಭಿತಾ ಅವರ ಮನೆಯ ಸದಸ್ಯರಿಗೆ ಇನ್ನೂ ನೋವು ಕೂಡ ನಮಗೆ ಇಷ್ಟ ಇರಲಿಲ್ಲ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ತನಿಖೆಯ ಭಾಗವಾಗಿ ಶೋಭಿತಾ ಮನೆಯ ಅಕ್ಕ-ಪಕ್ಕದ ನಿವಾಸಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಶೋಭಿತಾ ಅವರ ಸ್ನೇಹಿತರು ಮತ್ತು ಕುಟುಂಬ ವರ್ಗದವರ ವಿಚಾರಣೆಯನ್ನು ಕೂಡ ಮಾಡಿದ್ದಾರೆ. ಇನ್ನು ನಿನ್ನೆ ಪೋಸ್ಟ್ ಮಾರ್ಟ್‌ಮ್ ಅಂತ್ಯಗೊಂಡ ಬಳಿಕ ಆಸ್ಪತ್ರೆಯ ವೈದ್ಯರು ಶೋಭಿತಾ ಅವರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಖಚಿತ ಪಡಿಸಿದ್ದಾರೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ ಹೀಗಾಗಿ ಇದು ಕೊಲೆ ಅಲ್ಲ ಆತ್ಮಹತ್ಯೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ಪೊಲೀಸರಿಗೆ ಶೋಭಿತಾ ಶಿವಣ್ಣ ಅವರ ರೂಮ್‌ನಲ್ಲಿ ಶೋಭಿತಾ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಪತ್ತೆಯಾಗಿದೆ.ಸೂಸೈಡ್ ಲೆಟರ್ ನಲ್ಲಿ 'ಇಫ್ ಯು ವಾಂಟ್ ಟು ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್' { ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನೀನು ಬಯಸಿದ್ದಲ್ಲಿ, ನೀನು ಅದನ್ನು ಮಾಡಬಹುದು} ಎಂದು ಬರೆಯಲಾಗಿದೆ. ಈ ಹಿನ್ನೆಲೆ ಅವಕಾಶಗಳಿಂದ ವಂಚಿತಗೊಂಡ ಶೋಭಿತಾ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.


Click it and Unblock the Notifications











