Jailer: 600 ಕೋಟಿ ಕ್ಲಬ್ ಸೇರಿದ ಜೈಲರ್; ಸೌತ್‌ನಲ್ಲಿ ಈ ಸಾಧನೆ ಮಾಡಿರುವುದು ಈ 5 ನಟರು ಮಾತ್ರ!
ಆಗಸ್ಟ್ 10ರಂದು ಬಿಡುಗಡೆಗೊಂಡ ಜೈಲರ್ ಚಿತ್ರ ವಿಶ್ವದಾದ್ಯಂತ 600 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇನ್ನು ಜೈಲರ್ ಚಿತ್ರ ತಮಿಳುನಾಡು ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು, ಕೇರಳ ಹಾಗೂ ಉತ್ತರ ಭಾರತದಲ್ಲಿಯೂ ಸಹ ಬಿಡುಗಡೆಗೊಂಡಿದ್ದು, ನೇರವಾಗಿ ತಮಿಳು ಭಾಷೆಯಲ್ಲಿಯೂ ಬಿಡುಗಡೆಗೊಂಡಿದೆ ಹಾಗೂ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಆಗಿಯೂ ಸಹ ತೆರೆ ಕಂಡಿದೆ.
ಸದ್ಯ ನಿನ್ನೆಗೆ ( ಆಗಸ್ಟ್ 22 ) ತನ್ನ 20 ದಿನಗಳ ಓಟವನ್ನು ಪೂರೈಸಿರುವ ಜೈಲರ್ 600 ಕೋಟಿ ಕ್ಲಬ್ ಸೇರಿದ ಸೌತ್‌ನ ಏಳನೇ ಚಿತ್ರ ಎನಿಸಿಕೊಂಡಿದೆ. ಈ ಮೂಲಕ ಜೈಲರ್ 600 ಕೋಟಿ ಕ್ಲಬ್ ಸೇರಿದ ರಜನಿಕಾಂತ್ ನಟನೆಯ ಎರಡನೇ ಚಿತ್ರ ಎಂಬ ದಾಖಲೆಯನ್ನೂ ಸಹ ಬರೆದಿದ್ದು, ಸೂಪರ್ ಸ್ಟಾರ್ ತೆಲುಗಿನ ಪ್ರಭಾಸ್ ಅವರ ದಾಖಲೆಲ್ಲಿ ಸರಿ ಸಮನಾಗಿ ನಿಂತಿದ್ದಾರೆ.

ಹೌದು, ಅತಿಹೆಚ್ಚು 600 ಕೋಟಿ ಕ್ಲಬ್ ಸೇರಿದ ಸೌತ್ ನಟರ ಪಟ್ಟಿಯಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ 2 ಚಿತ್ರಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ರಜನಿಕಾಂತ್ ಸಹ ಎರಡು ಚಿತ್ರಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಯಾವೆಲ್ಲಾ ಸೌತ್ ನಟರು ಸ್ಥಾನ ಪಡೆದುಕೊಂಡಿದ್ದಾರೆ ಹಾಗೂ ಅವರ ಯಾವ ಚಿತ್ರಗಳು 600 ಕೋಟಿಗಿಂತ ಹೆಚ್ಚು ಗಳಿಕೆ ಮಾಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ರೆಬೆಲ್ ಸ್ಟಾರ್ ಪ್ರಭಾಸ್: ಪ್ರಭಾಸ್ ನಟನೆಯ ಎರಡು ಚಿತ್ರಗಳು 600 ಕೋಟಿಗೂ ಅಧಿಕ ಗಳಿಸಿವೆ. ಮೊದಲಿಗೆ 2015ರಲ್ಲಿ ಬಿಡುಗಡೆಗೊಂಡ ಬಾಹುಬಲಿ ದ ಬೆಗಿನಿಂಗ್ ಚಿತ್ರ ಈ ದಾಖಲೆಯನ್ನು ಮಾಡಿತ್ತು ಹಾಗೂ ಈ ಸಾಧನೆ ಮಾಡಿದ ಮೊದಲ ಸೌತ್ ಸಿನಿಮಾ ಎಂಬ ಎನಿಸಿಕೊಂಡಿತ್ತು. ಬಳಿಕ 2017ರಲ್ಲಿ ತೆರೆಗೆ ಬಂದ ಈ ಚಿತ್ರದ ಸೀಕ್ವೆಲ್ ಬಾಹುಬಲಿ ದ ಕನ್ಕ್ಲೂಷನ್ ಸಹ ಈ ಸಾಧನೆಯನ್ನು ಮಾಡಿತ್ತು.
2. ಸೂಪರ್ ಸ್ಟಾರ್ ರಜನಿಕಾಂತ್: ತಲೈವಾ ನಟನೆಯ, 2018ರಲ್ಲಿ ತೆರೆಗೆ ಬಂದ ರೋಬೊ 2.0 ಚಿತ್ರ 600 ಕೋಟಿಗಿಂತ ಅಧಿಕ ಕಲೆಕ್ಷನ್ ಮಾಡಿತ್ತು. ಇದು ರಜನಿಕಾಂತ್ ಸಿನಿ ಕೆರಿಯರ್‌ನ ಮೊದಲ 600 ಕೋಟಿ ಕ್ಲಬ್ ಸಿನಿಮಾವಾಗಿತ್ತು. ಈ ಬಳಿಕ ಇದೀಗ ಜೈಲರ್ ಮೂಲಕ ರಜನಿಕಾಂತ್ ಮತ್ತೊಮ್ಮೆ 600 ಕೋಟಿ ಕ್ಲಬ್ ಸಿನಿಮಾವನ್ನು ನೀಡಿದ್ದಾರೆ.
3. ರಾಕಿಂಗ್ ಸ್ಟಾರ್ ಯಶ್: ಕಳೆದ ವರ್ಷ ಬಿಡುಗಡೆಗೊಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಫ್ ಚಾಪ್ಟರ್ 2 ಚಿತ್ರ ಸಹ 600 ಕೋಟಿಗೂ ಅಧಿಕ ಗಳಿಕೆ ಮಾಡಿದೆ. ಇದು ಸದ್ಯ ಯಶ್ ಸಿನಿ ಕೆರಿಯರ್‌ನ ಪ್ರಥಮ ಹಾಗೂ ಏಕೈಕ 600 ಕೋಟಿ ಕ್ಲಬ್ ಸೇರಿದ ಚಿತ್ರವಾಗಿದೆ.
4. ರಾಮ್ ಚರಣ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ಕಳೆದ ವರ್ಷ ಬಿಡುಗಡೆಗೊಂಡ ಆರ್ ಆರ್ ಆರ್ ಚಿತ್ರ ಕೂಡ 600 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.
5. ಜೂನಿಯರ್ ಎನ್ ಟಿ ಆರ್: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ, ಕಳೆದ ವರ್ಷ ಬಿಡುಗಡೆಗೊಂಡ ಆರ್ ಆರ್ ಆರ್ ಚಿತ್ರ ಕೂಡ 600 ಕೋಟಿಗೂ ಹೆಚ್ಚು ಗಳಿಕೆ ಮಾಡಿ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.


Click it and Unblock the Notifications